ಪುನುಗು ಬೆಕ್ಕು ನೋಡಿ ಗಾಬರಿಗೊಂಡ ಕಾರ್ಮಿಕರು

ಹಾಸನ(ಬೇಲೂರು): ಇಲ್ಲಿನ ಬಿಕ್ಕೋಡು ಗ್ರಾಮದ ಅನ್ನಪೂರ್ಣ ಎಸ್ಟೇಟ್ ನಲ್ಲಿ ಕೆಲಸಕ್ಕೆ ಬಂದ ಕಾರ್ಮಿಕರು ಮರದಲ್ಲಿದ್ದ ಪುನುಗು ಬೆಕ್ಕನ್ನು ಕಂಡು ಚಿರತೆ ಮರಿ ಎಂದು ಗಾಬರಿಗೊಂಡ ಘಟನೆ ನಡೆದಿದೆ.ಈ ಬಗ್ಗೆ ತೋಟದ ಮಾಲೀಕರಿಗೆ ಸುದ್ದಿ ಮುಟ್ಟಿಸಿದ ಬಳಿಕ ಸ್ಥಳಕ್ಕೆ ಆಗಮಿಸಿದ ಗೋವಿಂದಶೆಟ್ಟಿ ಅದು ಪುನುಗು ಬೆಕ್ಕು ಎಂದು ಖಚಿತಪಡಿಸಿದ ನಂತರ ಕಾರ್ಮಿಕರು ನಿರಾಳರಾದರು.ಪುನುಗು ಬೆಕ್ಕು ನೋಡುವುದಕ್ಕೆ ಚಿರತೆ ಮರಿಯನ್ನೇ ಹೋಲುತ್ತದೆ,ಸಣ್ಣಪುಟ್ಟ ಪ್ರಾಣಿ ಪಕ್ಷಿಗಳೇ ಇವುಗಳ ಆಹಾರ,ಇವುಗಳು ಮನುಷ್ಯರಿಗೆ ಹಾನಿ ಉಂಟು ಮಾಡುವುದಿಲ್ಲ.

error: Content is protected !!