ಹುಲಿಗಳ ಬಗ್ಗೆ ನಿಮಗೆಷ್ಟು ಗೊತ್ತು…!
ಗಿರಿಧರ್ ಕೊಂಪುಳಿರ, ಪ್ರಧಾನ ವರದಿಗಾರರು
ಜಾಗತಿಕ ಹುಲಿ ದಿನಾಚರಣೆ ವಿಶೇಷ
ಹಳದಿ,ಕಪ್ಪು ಪಟ್ಟಿ ಮತ್ತು ಬಿಳಿ ಬಣ್ಣ ಮಿಶ್ರಿತ ಸಾಕು ಬೆಕ್ಕಿನ ರೀತಿಯಲ್ಲಿ ದೊಡ್ಡದಾದ ಒಂದು ಪ್ರಾಣಿ.ಮಾಂಸಹಾರಿ,ಜಾನುವಾರುಗಳ ಮೇಲೆ ದಾಳಿ. ಪ್ರವಾಸಿಗರಿಗೆ,ಮೃಗಾಲಯದಲ್ಲಿ
ಕಾಡಿನ ಸಫಾರಿಯ ಪ್ರಮುಖ ಆಕರ್ಷಣೆ ಇಷ್ಟೇ ಇಲ್ಲವೇ ನಮಗೆ ಗೊತ್ತಿರುವುದು.
ಇಲ್ಲಿದೆ ನೋಡಿ, ಹುಲಿ ಭೂಮಂಡಲದ ಒಂದು ಭಾಗ,ತನ್ನದೇ ಆದ ಜೀವನ ಶೈಲಿ,ಇತಿಹಾಸ,ವಂಶಾವಳಿ,ಪ್ರಭೇದಗಳನ್ನು ಹೊಂದಿರುವ ಈ ವ್ಯಾಘ್ರ ಅಳಿವಿನಂಚಿನಲ್ಲಿದೆ.ಈ ದೊಡ್ಡ ಹುಲಿ ಅಂದರೇನು ಮುಂದೆ ನೋಡಿ.
ವೈಜ್ಞಾನಿಕ ವಿವರಗಳು: ಅನಿಮೀಲೀಯ ಅಧಿಪತ್ಯದ,ಕಾರಡೇಟಾ ಪ್ರಭೇದವಾಗಿರುವ ಇವುಗಳು ಸಸ್ತನಿ ವರ್ಗಕ್ಕೆ ಸೇರಲ್ಪಡುತ್ತದೆ. ಪ್ಯಾಂಥೆರಾ ವಂಶಾವಳಿಯ ಫಿಲಿಡೇ ಕುಟುಂಬಕ್ಕೆ ಸೇರಿದ್ದೇ ಪ್ಯಾಂಥೆರಾ ಟೈಗ್ರಿಸಿ ಜಾತಿಗೆ ಸೇರಿರುವುದೆ ಈ ದೊಡ್ಡ ಬೆಕ್ಕುಗಳು.ವೈದಕೀಯವಾಗಿ ಯಾವುದೇ ಪ್ರಯೋಗಳು,ಸಂಶೋಧನೆ ಹುಲಿಗಳ ಮೇಲೆ ನಡೆಯಬೇಕಾದಲ್ಲಿ ಈ ಪ್ರಮುಖವಾದ ಮಾಹಿತಿ ಇರಲೇ ಬೇಕಾಗುತ್ತದೆ.
ನಾಲ್ಕು ದೊಡ್ಡ ಬೆಕ್ಕುಗಳು(BIG CAT) ಪೈಕಿ ಹುಲಿ ಅತೀ ದೊಡ್ಡದ್ದು,ಅಂದಾಜು 20 ವರ್ಷ ಬದುಕುವ ಸಾಮರ್ಥ್ಯ ಇರುವ ಇವುಗಳು ಅಂದಾಜು 4 ಮೀಟರ್ ನಷ್ಟು ಉದ್ದ 300 ಕೆಜಿ ತೂಕ ಹೊಂದುವ ಸಾಮರ್ಥ್ಯ ಹೊಂದಿದೆ. ಅದರಲ್ಲಿ ಬಿಳಿ,ಹಳದಿ ಬಣ್ಣದ ಸೈಬೇರಿಯನ್ ಹುಲಿಗಳು ಅತೀ ದೊಡ್ಡದು.
ಪ್ರಕೃತಿಯೊಂದಿಗೆ ಸುಲಭವಾಗಿ ಹೊಂದಿಕೊಂಡು ಜೀವಿಸುವ ಇವು ತನ್ನದೇ ಆದ ಆವಾಸ ತಾಣ ರೂಪಿಸಿಕೊಳ್ಳುತ್ತದೆ.ಒಂಟಿಯಾಗಿಯೇ ವಾಸಿಸುವ ಇದು,ತನ್ನ ಮಾರ್ಗವನ್ನು ಮರಗಳಿಗೆ ಪರಚಿ ಇಲ್ಲವೇ ಮೂತ್ರ ಮಾಡಿ ತನ್ನ ಹಾದಿಯನ್ನು ಮತ್ತು ಗಡಿಯನ್ನು ಗುರುತಿಸಿಕೊಂಡಿರುತ್ತದೆ. ಇದೇ ಕಾರಣಕ್ಕೆ ಹುಲಿಯನ್ನು ಉಪಜಾತಿಗಳು( Umbrella species),ಪ್ರಮುಖ ಜಾತಿಗಳು ಜಾತಿಗಳು(Keystone species),ಪುಟ್ಟ ಜೀವಿಗಳು(Flag species) ರಕ್ಷಕ,ಜೀವವೈವಿದ್ಯತೆಯ ರಕ್ಷಕ ಎಂದು ಕರೆಯಲಾಗುತ್ತದೆ. ಸದ್ಯಕ್ಕೆ ಸೈಬೇರಿಯಾದ ಟೈಗಾ ಕಾಡುಗಳು,ಹುಲ್ಲುಗಾವಲು ಮತ್ತು ಉಷ್ಣವಲಯ ಪ್ರದೇಶದಲ್ಲಿ ಕಾಣಸಿಗುತ್ತಿದೆ. ಬಿಗ್ ಕ್ಯಾಟ್ ಅದರಲ್ಲೂ ಹುಲಿಗಳ ಪೈಕಿ ಇಲ್ಲಿವರೆಗೆ 8 ತಳಿಗಳಿದ್ದವು,ಇವುಗಳಲ್ಲಿ “ಬಾಲಿ” ಮತ್ತು “ಜಾವ” ಕಣ್ಮರೆಯಾಗಿದೆ,(ಜಾವಾ ಹೆಸರಿನ ಯಝ್ಡಿ ಬೈಕ್ ಸಹಾ ಭಾರತದಲ್ಲಿತ್ತು). ಉಳಿದಂತೆ 6 ತಳಿಗಳು ಉಳಿದುಕೊಂಡಿದೆ.
ನಾವು ಅಳಿವಿನಂಚಿನಲ್ಲಿದ್ದೇವೆ: 1).ಬಂಗಾಳದ ಹುಲಿ- [ಭಾರತ,ಬಾಂಗ್ಲದೇಶ,ಭೂತಾನ್,ಬರ್ಮ,ನೇಪಾಳ]
2).ಇಂಡೋನೇಶಿಯ ಹುಲಿ- [ಲಾವೋಸ್,ಕಾಂಬೋಡಿಯಾ,ಚೀನಾ,ಬರ್ಮ,ಥಾಯ್ಲ್ಯಾಂಡ್,ವಿಯಟ್ನಾಂ]
3).ಮಲಯಾ ಹುಲಿ- [ಮಲಯಾ ದ್ವೀಪಗಳು,ಬಿಳಿ ಹುಲಿ]
4).ಸುಮಾತ್ರಾ ಹುಲಿ[ಇಂಡೋನೇಷ್ಯ]
5).ಸೈಬೇರಿಯನ್ ಹುಲಿ- [ಅಮುರ್ ಮತ್ತು ಉಸ್ಸೂರಿ ನದಿ ನಡುವಿನ ಪ್ರದೇಶ]
6).ಇಂಡೋ ಚೈನ ಹುಲಿ,ದಕ್ಷಿಣ ಚೀನಾ ಹುಲಿ,ಉತ್ತರ ಚೀನಾ ಹುಲಿ,ಮಂಚೂರಿಯನ್ ಹುಲಿ,ಕೊರೆಯನ್ ಹುಲಿಗಳು ಬೆರಳೆಣಿಕೆಗಳಷ್ಟಿದ್ದು ವಿನಾಶದ ಅಂಚಿನಲ್ಲಿದೆ.
ಇತಿಹಾಸ ಈ ಮೊದಲು ಹುಲಿಗೊಂದು ಇತಿಹಾಸವಿದೆ ಎಂದಿದೆವು,ಹುಲಿಗಳು ಮೊದಲಾಗಿ ಕಾಕಸಸ್ ಮತ್ತು ಕಾಸ್ಟಿಮನ್ ಸಮುದ್ರ ಭಾಗದ ದ್ವೀಪಗಳಿಂದ ಸೈಬೇರಿಯಾ,ಇಂಡೋನೇಷ್ಯಾ ಸೇರಿದಂತೆ ಏಷಿಯಾದ ಬಹು ಭಾಗದಲ್ಲಿ ಹರಡಿದವು ಎನ್ನುವ ಉಲ್ಲೇಖಗಳಿವೆ. 19ನೇ ಶತಮಾನದಲ್ಲಿ ಹುಲಿಗಳು ಪಶ್ಚಿಮ ಏಷಿಯಾ ಭಾಗದಲ್ಲಿ ಕಳ್ಳಬೇಟೆ,ಕೆಲವು ಸಾಂಕ್ರಾಮಿಕ ರೋಗ ಸೇರಿದಂತೆ ಇತರೆ ಕಾರಣದಿಂದ ಸೈಬೇರಿಯಾದ ಆಮುರ್ ನದಿಯ ದಕ್ಷಿಣ ಭಾಗದಿಂದ ಆಗಮಿಸಿ ನೆಲೆಸಿದ್ದು,ವಿವಿಧ ಭಾಗಗಳಲ್ಲಿ ಆಯಾ ವಾತಾವರಣಕ್ಕೆ ತಕ್ಕಂತೆ ವಂಶಾಭಿವೃದ್ದಿಯೂ ನಡೆದವು ಜೊತೆಗೆ ಭಾರೀ ಗಾತ್ರದಲ್ಲಿದ್ದ ಜಾವ ಮತ್ತು ಬಾಲಿ ಹುಲಿಗಳು ಮಾನವರ ಕ್ರೌರ್ಯಕ್ಕೆ ಬಲಿಯಾಗಿ ಸಂಪೂರ್ಣ ನಾಶವಾದವು.
ಲಾಂಛನ,ಧ್ವಜಗಳಾದವು: ಹುಲಿ ಮತ್ತು ಮಾನವನಿಗೆ ಅವಿನಾಭವ ಸಂಬಂಧಗಳಿದೆ,ಕೆಲವೊಂದು ರಾಜಮನೆತನಗಳ ರಾಜ ಲಾಂಛನಗಳಾಗಿದೆ,ಏಷಿಯಾದ ಕೆಲವು ಕರೆನ್ಸಿ,ನಾಣ್ಯಗಳಲ್ಲೂ ಮುದ್ರಿತವಾಗಿದೆ,ಹೊಯ್ಸಳದ ರಾಜ್ಯದ ಲಾಂಛನವೂ ಹುಲಿಯಿಂದ ಕೊಡಿದರೆ,
ಟಿಪ್ಪು ಸೂಲ್ತಾನ ಕಾಲದಲ್ಲಿ ಆತನಿಗೆ ಮೈಸೂರಿನ ಹುಲಿ ಬಿರುದೂ ಸಿಕ್ಕಿದೆ. ಭಾರತೀಯ ದೇವರುಗಳಾದ ಅಯ್ಯಪ್ಪ,ದುರ್ಗ ಮಾತೆಗೂ ವಾಹನವಾಗಿದೆ.
ಇಷ್ಟೂಂದು ಇತಿಹಾಸ ಇರುವ ಏಕೈಕ ಜೀವಿ ಅಂದರೆ ಅದು ಹುಲಿ ,ಅದಕ್ಕಾಗಿ ಈ ಬಿಗ್ ಕ್ಯಾಟ್ ನಮ್ಮ ಹೆಮ್ಮೆಯ ಭಾರತದ ರಾಷ್ಟ್ರೀಯ ಪ್ರಾಣಿಯಾಗಿರುವುದು.
ಅಂತಿಮವಾಗಿ
“ಹುಲಿಯನ್ನು ರಕ್ಷಿಸಿ,ಗೌರವಿಸಿ”