fbpx

‘ರಾಮ ಮಂದಿರ’ಕ್ಕೆ ಇನ್ನೂ ಮುಗಿದಿಲ್ಲ ವಿಘ್ನ? 😒 ಕಪಟ ಜಾತ್ಯಾತೀತರ ಯತ್ನಗಳೆಲ್ಲಾ ಆಗುತ್ತಿದೆ ಭಗ್ನ!😍

ರಜತ್ ರಾಜ್.ಡಿ.ಹೆಚ್, ಪ್ರಧಾನ ಸಂಪಾದಕರು

ಪುಣ್ಯಭೂಮಿಯ ಮರ್ಯಾದ ಪುರುಷ, ವಿಷ್ಣುವಿನ ಏಳನೇ ಅವತಾರ ಎಂದು ಬಲವಾಗಿ‌ನಂಬಲಾಗುವ ರಾಮ ಈ ದೇಶದ ಆಸ್ಮಿತೆಯ ಭಾಗವೇ ಆಗಿದ್ದಾನೆ.‌ ಅಂತಹ ದೈವೀ ಪುರುಷನಿಗೆ ನಮ್ಮ ದೇಶದಲ್ಲಿ ಅವನ ಜನ್ಮ ಭೂಮಿಯಲ್ಲಿ ಈವರೆಗೆ ರಾಮಮಂದಿರ ಕಟ್ಟಲು ವಿಫಲರಾಗಿರುವೆವು ಎಂಬುದು ನಾಚಿಕೆ ಗೇಡಿನ ಸಂಗತಿಯೇ‌ ಸರಿ.

ನಡೆಯಲಿರುವ ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮದ ಅಹ್ವಾನ ಪತ್ರಿಕೆ

ಹಲವಾರು ವಿವಾದಗಳ ಬಳಿಕ, ಸುದೀರ್ಘ ಕಾನೂನು ಹೋರಾಟ ನಡೆದು ಈಗ ಐನೂರು ವರ್ಷಗಳ ನಂತರ ಇನ್ನೇನು ಆಗಸ್ಟ್ 5ರಂದು ಭೂಮಿ ಪೂಜೆಯನ್ನು ಪ್ರಧಾನಿಗಳು ನೆರವೇರಿಸಲಿದ್ದಾರೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆ ಎಡಪಂಥದ ಪಕ್ಷಗಳ ಕಿರುಚಾಟ, ಆಕ್ಷೇಪ ಹೆಚ್ಚಾಯಿತು.

ದೇಶದ ಸರ್ವೋಚ್ಛ ನ್ಯಾಯಾಲಯ

ಕಾರ್ಯಕ್ರಮಕ್ಕೆ 150ಕ್ಕೂ ಹೆಚ್ಚು ಗಣ್ಯರನ್ನು ಆಹ್ವಾನಿಸಿ ಸಮಾರಂಭದ ಸಿದ್ಧತೆ ಶುರುವಾದಂತೆ ಹಲವು ಎಡ ಪಕ್ಷಗಳ ನಾಯಕರ ಕಣ್ಣುಗಳು ಕೆಂಪಾದವು. ಅಲಹಾಬಾದ್ ಅಲ್ಲಿ ಸಾಕೆತ್ ಗೋಕಲೆ ಎಂಬುವವರು ‘ಕೊರೋನಾ ತಡೆಗಟ್ಟಲು ಇರುವ ಮಾರ್ಗಸೂಚಿಯನ್ನು ಉಲ್ಲಂಘಿಸಿ, ಕಾರ್ಯಕ್ರಮ ನಡೆಸಲಾಗುತ್ತಿದೆ’ ಎಂಬ ಕಾರಣ ನೀಡಿ ಅದಕ್ಕೆ ತಡಯಾಜ್ಞೆ ತರುವ ಯತ್ನವಾಯಿತು. ಅದರ ವಿಚಾರಣೆ ನಡೆಸಿ, ನ್ಯಾಯ ಪೀಠವು ‘ಈ ಅರ್ಜಿಯು ಆಧಾರ ರಹಿತವಾಗಿದ್ದು, ಕಾರ್ಯಕ್ರಮ ಸಂದರ್ಭ ಕೊರೋನಾ‌ ತಡೆಗಟ್ಟಲು ಇರುವ ಮಾರ್ಗಸೂಚಿ ಉಲ್ಲಂಘನೆ ಆಗುವ ಯಾವ ಸಂಭವದ ಅಂಶಗಳೂ ಕಂಡು ಬಂದಿಲ್ಲ. ಹಾಗು ಕಾರ್ಯಕ್ರಮದ ಸಂಘಟಕರು ಹಾಗು ರಾಜ್ಯ ಸರಕಾರ ಮಾರ್ಗಸೂಚಿ ಹಾಗು ಶಿಷ್ಟಾಚಾರವನ್ನು ಪಾಲಿಸುವಂತೆ ಹೇಳಲಾಗಿದೆ. ಮತ್ತು ಅಲ್ಲಿ ಸಾಮಾಜಿಕ ಅಂತರವನ್ನು ಪಾಲಿಸಲೂ ಕೂಡ ಸೂಚಿಸಲಾಗಿದೆ’ ಎಂದು ಆದೇಶ ನೀಡಿ ಅರ್ಜಿಯನ್ನು ವಜಾ ಮಾಡಿದೆ.

ಡಿ.ಡಿ ವಾಹಿನಿಯು ರಾಮಮಂದಿರದ ಭೂಮಿ ಪೂಜೆಯ ಕಾರ್ಯಕ್ರಮದ ನೇರ ಪ್ರಸಾರ ಮಾಡಲಿದೆ ಎಂಬುದಕ್ಕೂ ಎಡದವರ ವಿರೋಧ ವ್ಯಕ್ತವಾಯಿತು.  ಪ್ರಜಾಪ್ರಭುತ್ವದಲ್ಲಿ ಕಮ್ಯುನಿಷ್ಟರ ವಿರೋಧ ಇದಕ್ಕೆ ಕೇಳಿ ಬಂತು. ಅವರು ವಾದಿಸಿದರು ‘ಪ್ರಸಾರ ಭಾರತೀಯ 12 3(a) ವಿಧಿಯು ಭಾರತದ ಸಂವಿಧಾನವು ಪ್ರತಿಪಾದಿಸುವ ರಾಷ್ಟ್ರೀಯ ಭಾವೈಕ್ಯತೆ ಹಾಗು ಏಕತೆಯ ಅಂಶವನ್ನು ಪ್ರತಿಪಾದಿಸುತ್ತಿದೆ. ಮತ್ತು ಅದನ್ನು ಕೇಂದ್ರ ಸರಕಾರ ಪಾಲಿಸುವ ನಿಟ್ಟಿನಲ್ಲಿ ರಾಮ ಮಂದಿರದ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ, ಭೂಮಿ ಪೂಜೆ ಕಾರ್ಯಕ್ರಮದ ಪ್ರಸಾರವನ್ನು ದೂರ ದರ್ಶನ ಮಾಡಲೇ ಬಾರದು’ ಎಂದು ವಿತಂಡ ವಾದ ಮಾಡಿದ್ದರು.

ರಾಮ ಈ ದೇಶದ ಒಂದು ಸಮುದಾಯದ ದೇವರಷ್ಟೇ ಅಲ್ಲ. ನೆಲದ ಮಣ್ಣಿನ ನೈಜ್ಯ ಪುರಾತನ ಹೀರೋ ಅವನು. ರಾಷ್ಟ್ರದ ಆಸ್ಮಿತೆಯೊಂದಿಗೆ ಬೆಸೆದುಕೊಂಡಿರುವ ಮಹಾನ್ ಪುರುಷ ಅವನು. ಅವನ ಒಂದು ಮಂದಿರದ ಶಿಲಾನ್ಯಾಸ ಕಾರ್ಯಕ್ರಮದ ನೇರ ಪ್ರಸಾರ ಮಾಡಿದರೆ ಅದು ಹೇಗೆ ದೇಶದ ಭಾವೈಕ್ಯತೆ ಹಾಗು ಏಕತೆಗೆ ಧಕ್ಕೆ ತಂದಂತೆ ಆಗುತ್ತದೆ?  500 ವರ್ಷ ಕಾಲ ರಾಮ ಮಂದಿರವಾಗಲು ಕಾದ ಹಿಂದೂಗಳು ಇನ್ನೂ ಯಾವುದೋ ವಿದೇಶಿ ಕಮ್ಯುನಿಸ್ಟರು ಸೃಷ್ಟಿಸಿರುವ ಕಾಯಿಲೆಯ ಕಾರಣಕ್ಕಾಗಿ ಅದನ್ನು ಮತ್ತೂ ಮುಂದೂಡಬೇಕೆ..? ಎಡ ಪಂಥದವರ ಇಂತಹ ಅರ್ಥವಿಲ್ಲದ ‘Selective Secularism’ ಹಾಗು ‘Propoganda’ಗಳು ಏಕೋ ಕ್ಲೀಶೆ ಎನ್ನಿಸದೇ ಇರದು… ಧರ್ಮಗಳ ನಡುವಣ ಸಾಮರಸ್ಯ ಇದ್ದರೂ ಅದನ್ನು ಹಾಳುಗೆಡಿಸುವ ಯತ್ನಗಳು ರಾಜಕೀಯದ ಉದ್ದೇಶದಿಂದ ಈ ರೀತಿ ಆಗುತ್ತಿರುವುದು ವಿಷಾದನೀಯ!

error: Content is protected !!
satta king chart