fbpx

41 ಮರಿಗಳಿಗೆ ಜನ್ಮ ನೀಡಿದ ಹಾವನ್ನು ರಕ್ಷಿಸಿದ ಉರಗ ರಕ್ಷಕರು

ಕೆಲವು ದಿನಗಳ ಹಿಂದೆ ಕೊಡಗು ಜಿಲ್ಲೆಯ ಸಿದ್ದಾಪುರದ ಉರಗ ರಕ್ಷಕರಾದ ಸ್ನೇಕ್ ಸುರೇಶ್ ಅವರು ಸಿದ್ದಾಪುರದ ಮೈಸೂರು ರಸ್ತೆ ಬಡಾವಣೆಯಲ್ಲಿ ಕೊಳಕು ಮಂಡಲ ಗರ್ಭಿಣಿ ಹಾವನ್ನು ಜೆಸಿಬಿ ಮುಖಾಂತರ ರಕ್ಷಣೆ ಮಾಡಿದರು, ಹಾವನ್ನು ಹಿಡಿಯುವ ಸಂದರ್ಭದಲ್ಲಿ ಸಣ್ಣಪುಟ್ಟ ಗಾಯಗಳು ಆಗಿದ್ದರಿಂದ ಅದನ್ನು ಸಿದ್ದಾಪುರದ ತಕ್ಷ ಉರಗ ರಕ್ಷಕರ ತಂಡದ ಸ್ನೇಕ್ ಸುರೇಶ್ ಅವರ ಮನೆಯಲ್ಲಿ ಇರಿಸಿ 2 ದಿನಗಳಕಾಲ ಸ್ನೇಕ್ ಸುರೇಶ್ ಹಾಗೂ ಸ್ನೇಕ್ ನವೀನ್ ರಾಕಿ ಅವರು ಚಿಕಿತ್ಸೆ ನೀಡಿದರು.

ಸಂದರ್ಭದಲ್ಲಿ ಹಾವು 41 ಮರಿಗಳಿಗೆ ಜನ್ಮ ನೀಡಿದೆ ಅವುಗಳಿಗೆ ಚಿಕಿತ್ಸೆ ನೀಡಿ ಸುರಕ್ಷಿತವಾಗಿ ನೋಡಿಕೊಳ್ಳುವಲ್ಲಿ ತಕ್ಷ ಉರಗ ರಕ್ಷಕರು ತಂಡದ ಸದಸ್ಯರುಗಳು ಯಶಸ್ವಿಯಾಗಿದ್ದಾರೆ.

ಪೊನ್ನಂಪೇಟೆ ನಿವಾಸಿ ಸ್ನೇಕ್ ನವೀನ ರಾಕಿ ಮತ್ತು ಸ್ನೇಕ್ ವಿನೋದ್ ಬಾವೆ ಸ್ನೇಕ್ ಮನೋಜ್ ಸ್ನೇಕ್ ರೋಷನ್ ಅವರುಗಳು ಕೊಳಕು ಮಂಡಲ ಹಾವು ಮತ್ತು 41 ಮರಿಗಳನ್ನು ಅರಣ್ಯ ಅಧಿಕಾರಿ ಉಮಾಶಂಕರ್ ಅವರ ನೇತೃತ್ವದಲ್ಲಿ ತಿತಿಮತಿ ಅರಣ್ಯಕ್ಕೆ ಬಿಡಲಾಯಿತು ಎಂದು ತಕ್ಷ ಉರಗ ರಕ್ಷಕರ ತಂಡದ ಅಧ್ಯಕ್ಷರಾದ ಸ್ನೇಕ್ ಸುರೇಶ್ ಅವರು ಮಾಹಿತಿ ನೀಡಿದರು.

ತಕ್ಷ ಸಂರಕ್ಷಕರ ಸಂಘದ ಸದಸ್ಯರುಗಳು ಹಲವು ವರ್ಷಗಳಿಂದ ಹಾವಿನ ಮೊಟ್ಟೆಗಳ ರಕ್ಷಣೆ ಮಾಡಿ ಮರಿ ಮಾಡಿಸುವ ಕೆಲಸ ಹಾಗೂ ಹಾವುಗಳಿಗೆ ಗಾಯಗಳಾದರೆ ಚಿಕಿತ್ಸೆ ನೀಡಿ ಒಂದು ದಿನದ ಮಟ್ಟಿಗೆ ಮನೆಯಲ್ಲಿ ಇಟ್ಟು ಅನಂತರ ಅವುಗಳನ್ನು ಅರಣ್ಯಕ್ಕೆ ಬಿಡಲಾಗುವುದು ಎಂದು ಸ್ನೇಕ್ ನವೀನ್ ರಾಕಿ ಹಾಗೂ ಸ್ನೇಕ್ ಸುರೇಶ್ ಹೇಳಿದ್ದಾರೆ.

ಸದಸ್ಯರ ಮನವಿ

ಎಲ್ಲಿಯಾದರೂ ಹಾವುಗಳನ್ನು ಕಂಡರೆ ಕೂಡಲೇ ಕೊಡಗು ತಕ್ಷ ಸಂರಕ್ಷಕರ ಸಂಘದ ಸದಸ್ಯರುಗಳಿಗೆ ಮಾಹಿತಿ ನೀಡಬೇಕಾಗಿ ಎಂದು ಮನವಿ ಮಾಡಿದ್ದಾರೆ. ದೂರವಾಣಿ ಸಂಖ್ಯೆ 8277131863

error: Content is protected !!
satta king chart