ಅರೆಭಾಸೆ ನೆಂಪುನ ಜೊಂಪೆ..
✍🏻ಉಳುವಾರನ ರೋಶನ್ ವಸಂತ್, ಕಾಂತೂರು
ಅಂದ್ ಹಂಗೆ ಇಂದ್ ಹಿಂಗೆ, ಅಂದ್ ಮನೆಲ್ಲಿ ಹಿರಿಯವು ಕಿರಿಯವು ಎಲ್ಲಾ ಒಟ್ಟಿಗೆ ಕೂಡಿಕಂಡ್ ಬದ್ಕ್ ತ್ತಿದ್ದೊ ಒಗ್ಗಟ್ಟ್ , ಪ್ರೀತಿ ವಿಶ್ವಾಸಲ್ಲಿ ಆದರೆ ಇಂದ್ ಆ ಸಂಸ್ಕೃತಿ ಮರೆಯಾಗಿ ಎಲ್ಲಾವು ಬ್ಯಾರೆ ಬ್ಯಾರೆ ಆಗಿ ಬದ್ಕುವ ಕಾಲ ಬಂದುಟ್ಟು.
ಅಂದ್ ನೋಡಿಕೆ ಅದೆಷ್ಟೋ ಕಾಡ್ಗ , ಬೆಟ್ಟ – ಗುಡ್ಡಗ ಹಸ್ರ್ , ಹಸ್ರ್ ಗಿ ಕಾಂಬಕೆ ಸಿಕ್ತತ ಇತ್ ಇಂದ್ ಎಲ್ಲಿ ನೋಡ್ರ್ ಕಾಡ್ಗ್ ಎಲ್ಲಾ ಕಾಫಿ ತೋಟಗ ಅಗೋಳೊ.
ಅಂದ್ ಹಟ್ಟಿಲ್ಲಿ ಅದೆಷ್ಟ್ ದನಕರ್ ಗ ಮನೆಲ್ಲಿ ಹಾಲ್, ಮೊಜ್ಜಿಗೆ ತಪ್ತ ಇತ್ಲೆ ಆದರೆ ಇಂದ್ ದನಕರ್ ಗ ಕಾಂಬಕೆ ಅಪೂರೂಪ ಪ್ಯಾಟೆಂದ ಹಾಲ್ , ಮೊಜ್ಜಿಗೆ ತಂದ್ ದಿನಕಳ್ದವೆ ಅಗ ಖಾಯಿಲೆನೆ ಇರ್ತ ಇತ್ಲೆ ಈಗ ಖಾಯಿಲಾಗ ಹೇಳ್ದೆ ಬ್ಯಾಡ.
ಅಂದ್ ಗದ್ದೆ ಕೆಲ್ಸತ ಹೇಳ್ರೆ ಅದೊಂದು ತರ ಗೌಜಿ ನಾಟಿ ಕೆಲ್ಸ , ಬೆಳೆ ಕೆಲ್ಸ ಬಂದರೆ ಸಾಕ್ ಒಂದುಗಳಿಗೆ ಪುರುಸೊತ್ತ್ ಇತ್ಲೆ ಇಂದ್ ನಾಟಿ ಕೆಲ್ಸ , ಬೆಳೆ ಕೆಲ್ಸತ ಹೇಳ್ರೆ ಯಾರಿಗೂ ಬ್ಯಾಡ ಒಂದು ದಿನಕ್ಕೆ ಎಲ್ಲಾ ಮುಗ್ದೊದೆ ಕೆಲ್ಸಗ ಗದ್ದೆಗ ಎಲ್ಲಾ ಹಡ್ಲ್ ಖಾಲಿ ಖಾಲಿ.
ಅಂದ್ ದುಡ್ಡುಗೆ ಒಳ್ಳ ಬೆಲೆ ಇತ್ತ್ ಸಾವಿರ ರೂಪಾಯಿತ ಹೇಳ್ರೆ ಇಂದ್ ನ ಹತ್ತ್ ಸಾವಿರ ರೂಪಾಯಿಗೆ ಸಮ. ಅಗ ದುಡ್ಡು ಖರ್ಚಿ ಅದೆ ಗೊತಗ್ತ ಇತ್ಲೆ. ಆದರೆ ಇಂದ್ ಎಷ್ಟ್ ದುಡ್ಡು ಇದರು ಸಾಕಲೆ ಖರ್ಚಿ ಜಾಸ್ತಿ ಅಗ್ತುಟ್ಟು.
ಅಂದ್ ಗದ್ದೆ ಹೂಡಿಕೆ ಎತ್ಗ್ ಹೊತ್ತಾರೆ ಬ್ಯಾಗ ಎದ್ದ್ ಹೋಗಿ ಗದ್ದೆಲ್ಲಿ ಎತ್ತ್ ಕಟ್ಟಿ ಹೀ , ಹರ , ಹರ ,ಸಾಲ್ ಹರತ ರೈತನ ಬೊಬ್ಬೆ ಕೇಳಿಕೆ ಅದೆಷ್ಟ್ ಪೊರ್ಲು ಸಾಲ್ ಸಾಲಗಿ ಹೋಗುವ ಎತ್ಗ್ ಅದರ ನೋಡಿಕೆ ಎರಡ್ ಕಣ್ಗ್ ಸಾಲಿಕಿಲೆ ಆದರೆ ಇಂದ್ ಟಾಕ ಟಾಕ , ಡಬ್ಬ ಡಬ್ಬತ ಹೂಡಿಕೆ ಟ್ರಾಕ್ಟರ್, ಟಿಲ್ಲರ್ ಗ ಆಗ ಗದ್ದೆಗೆ ಸಗಣಿ ಗೊಬ್ಬರ ಹಾಕಿ ಬೆಳೆ ತಗಿಯೋದು ಈಗ ಕಂಪೆನಿ ಗೊಬ್ಬರ ಹಾಕಿ ಬೆಳೆ ತಗೀವ ಕಾಲ.
ಅಂದ್ ಮನೆ ಸುತ್ತು ಮುತ್ತು ಅದೆಷ್ಟ್ ತರಕಾರಿಗ ಇಂದ್ ತರಕಾರಿಗೆ ಪ್ಯಾಟೆಗೆ ಬ್ಯಾಗ್ ಹಿಡ್ಕಂಡ್ ಓಡುವ ಕಾಲ.
ಅಂದ್ ನ ಕಾಲದ ಮೊದ್ವೆ ಜಂಬರಗ ಅದೆಂತಹ ಗೌಜಿ ದಿಬ್ಬಣ ಹೋದು ನಡ್ಕಂಡ್ ಆ ಸೋಬಾನೆ ಪದಗ, ಸಂಪ್ರದಾಯಗ ಅದೆಷ್ಟ್ ಪೊರ್ಲು ಇಂದ್ ಸೋಬಾನೆ ಇಲ್ಲೆ ಒಂದು ಇಲ್ಲೆ ಕುಡಿಯೋದು, ತಿಂಬೊದು ಮದುವೆಗಳಿಗೆ ಅರ್ಥನೆ ಇಲ್ಲೆ.
ಅಂದ್ ಕಾಲ್ನಡಿಗೆ ಮನೆಲ್ಲಿ ಗಾಡಿಗ ಇಲ್ಲೆ ಇಂದ್ ಮನೆಲ್ಲಿ ಎರಡು ಮೂರು ಗಾಡಿಗ ಇದರೂ ಸಾಕಾಕಿಲೆ.
ಅಂದ್ ಖಾಯಿಲಾ ಬಂದರೆ ಮಾಡ್ತ ಇದ್ದೊ ಮನೆ ಮೊದ್ದ್. ಹಿರಿಯವುಕ್ಕೆ ಗೊತ್ತ್ ಇತ್ತ್ ಎಲ್ಲಾ ತರಹದ ಮನೆ ಮೊದ್ದ್’ಗ ಇಂದ್ ಒಂದು ಸಣ್ಣ ಶೀತ ಜರ ಬಂದರೆ ಓಡಿವೆ ಆಸ್ಪತ್ರೆಗೆ.
ಅಂದ್ ಅದೆಷ್ಟ್ ರುಚಿ ರುಚಿಯಾದ ಕಾಡ್ ಹಣ್ಣ್’ಗ , ಅದೆಷ್ಟ್ ಅಳ್ಂಬುಗ , ಅದೆಷ್ಟ್ ಸೊಪ್ಪುಗ ಇಂದ್ ಕಾಂಬಕೆ ಸಿಕ್ಕುದೆ ಅಪೂರೂಪ ಚಿತ್ರ ನೋಡಿ ಅದು ಆ ಹಣ್ಣ್ , ಆ ಅಳ್ಂಬು, ಆ ಸೊಪ್ಪು ಅದ್ ಇದ್ತ್ ಹೇಳುವ ಕಾಲ ಇದ್.
ಅಂದ್ ಜನ್ರಿಗೆ ಒಂದು ಹೊತ್ತು ಕಳಿಯೋದು ಮಾತ್ರ ಇತ್ ಚಿಂತೆ ಇಂದ್ ಹಂಗೆಲ್ಲ ಒಂದು ಹೊತ್ತ್ ಯಾಕೆ ಪೀಳಿಗೆ, ಪೀಳಿಗೆಗೆ ಉಳ್ಸುವ ಚಿಂತೆ ಆಗ ಮನ್ಸ್ ರಿಗೆ ಸ್ವಾರ್ಥ ಇತ್ಲೆ, ಇತ್ತ್ ಒಗ್ಗಟ್ಟ್ ಜಾಸ್ತಿ , ಇಂದ್ ನೋಡಿ ಸ್ವಾರ್ಥ ಎದ್ದ್ ಕಂಡದೆ.
ಅಂದ್ ಹಬ್ಬ ಹರಿದಿನಗತ ಹೇಳ್ರೆ ಮನೆ ತುಂಬಾ ಜನ ಗೌಜಿಯೋ ಗೌಜಿ. ಇಂದ್ ಹಬ್ಬ ಹರಿದಿನಗಳಿಗೆ ಇಲ್ಲೆ ಅರ್ಥ.
ಅಂದ್ ಎಲ್ಲವು ಆಸೆ ಪಡ್ತ ಇದ್ದೊ ಹಳ್ಳಿ ಜೀವನನ. ಇಂದ್ ಹಳ್ಳಿ ಜೀವನತ ಹೇಳ್ರೆ ಅಯ್ಯೋತ ಹೇಳಿವೆ. ಪ್ಯಾಟೆ ಜೀವನತ ಹೇಳ್ರೆ ಪ್ರಾಣ ಬುಟ್ಟವೆ ಅದ್ ಯಾಕೋ ಗೊತ್ಲೆ , ಆದರೆ ಹಳ್ಳಿ ಜೀವನನೆ ಪೊರ್ಲು ಆದೆ ಸ್ವರ್ಗ.
ಅಂದ್ ಪ್ರಕೃತಿನ ದೇವ್ರ್ತ್ ಗ್ಯಾನ ಮಾಡಿಕಂಡ್ ಬದ್ಕತಿದ್ದೊ ನಮ್ಮ ಹಿರಿಯವು. ಇಂದ್ ಪ್ರಕೃತಿಗೆ ಇಲ್ಲೆ ಗೌರವ ವಿಕೃತಿ ಮಾಡಿಯೊಳ್ಳೊ ಅದ್ಕೆ ನೋಡಿ ತೋರ್ಸಿದೆ ಪ್ರಕೃತಿ ಒಂದಲ್ಲ ಒಂದು ತರಲ್ಲಿ ವರ್ಷೊಳು ಅವಾಂತರನ.
ಅಂದ್ ಅದೆಷ್ಟ್ ಕಾಡ್ ಪ್ರಾಣಿಗ , ಅದೆಷ್ಟ್ ಕಾಡ್ ಪಕ್ಷಿಗ ಅವರ ದ್ವನಿ ಕೇಳಿಕೆ ಅದೆಷ್ಟ್ ಪೊರ್ಲು ಇಂದ್ ಇಲ್ಲೆ ಅವರ ಸದ್ದ್, ಮೊನ್ಸನ ಸ್ವಾರ್ಥಕ್ಕೆ ಬಲಿಯಾಟ್ಟು.
ಅಂದ್ ಇತ್ತ್ ಹಂಗೆ ಇಂದ್ ಉಟ್ಟು ಹಿಂಗೆ ಮುಂದೆ ಹೆಂಗೆ ಇದ್ದದೆಯೋ ಗೊತ್ಲೆ ಕಾದ್ ನೋಡಕು ಅಷ್ಟೆ ಮುಂದೆನ ಜೀವನನ.
ನೀವು ಎಲ್ಲವೂ ಓದಿ ಒಮ್ಮೆ ನೆಂಪು ಮಾಡಿಕಣಿ ನೋಡಿ ನಿಮ್ಮ ಬಾಲ್ಯದ ಆ ಜೀವನನ.
ದನ್ಯವಾದಗ
✍🏻ಉಳುವಾರನ ರೋಶನ್ ವಸಂತ್, ಕಾಂತೂರು
ಸುದ್ದಿ ವಾಚಕರ್
ಆಕಾಶವಾಣಿ
ಮಡಿಕೇರಿ