ಹಿಂದೆನ ಕಾಲಲ್ಲಿ ಕೊಡ್ಗ್ ನ ಕಾಡ್ ಗಳ್ಲಿ ಸಿಕ್ಕ್ ತ್ತಿದ ಕಾಡ್ ಹಣ್ಣ್ ಗಳ ಒಂದು ಪರ್ಚಯ
✍🏻ಉಳುವಾರನ ರೋಶನ್ ವಸಂತ್, ಕಾಂತೂರು.
ಕೊಡ್ಗ್ ಬೆಟ್ಟ- ಗುಡ್ಡಗಳ ಜಾಗ ಜಾಸ್ತಿ ಕಾಡ್ ಗ ಉಟ್ಟು. ಹಿಂದೆನ ಕಾಲಲ್ಲಿ ಕಾಡ್ ಗಳ್ಲಿ ಬೇಕಾದಷ್ಟ್ ಹಣ್ಣ್ – ಹಂಪಲ್ ಗ ಸಿಕ್ಕ್ ತ ಇತ್ತ್ ಅಗನ ಕಾಲಲ್ಲಿ ಎಲ್ಲಾವು ಕೂಡಿಕಂಡ್ ಹಳ್ಳಿ ಗಳ್ಲಿ ಒಗ್ಗಟ್ಂದ ಕೂಡಿ ಬಾಳ್ತ ಇದ್ದೊ. ದನ- ಕರ್ ಗ ಜಾಸ್ತಿ ಇರ್ತಿದೊ , ಗದ್ದೆ , ತ್ವಾಟ ಕೆಲ್ಸ ಎಲ್ಲಾ ಮಾಡಿಕಂಡ್ ನೆಮ್ಮದಿಲ್ಲಿ ಬದ್ಕ್ ತ್ತಿದ್ದೊತ ನಮ್ಮ ಹಿರಿಯವು ಹೇಳಿವೆ.
ಕಾಲ ಬದ್ಲದಂಗೆ ಜನಸಂಖ್ಯೆ ಜಾಸ್ತಿ ಅದಂಗೆ ಎಲ್ಲಾನು ಬದ್ಲಲಾಟ್ಟು . ಪ್ಯಾಟೆ ಸಂಸ್ಕೃತಿಗೆ ಒಗ್ಗಿ ಹೋಗಿ ಹಳ್ಳಿ ಸಂಸ್ಕೃತಿಗ ಮಾರೆ ಅಗ್ತ್ ಉಟ್ಟು. ದಿನಂದ ದಿನಕ್ಕೆ ಕಾಡ್ ಗ ಎಲ್ಲಾ ಮನ್ಸ್ ನ ಸ್ವಾರ್ಥಕ್ಕೆ ಬಲಿಯಾಗಿ ಕಾಫಿ ತ್ವಾಟನೊ ಇಲ್ಲೆ ಬ್ಯಾರೆ , ಬ್ಯಾರೆ ಉದ್ದೇಶಕ್ಕೆ ಬಳ್ಸಿಕಂಡ್ ಕಾಡ್ ಗ ನಾಶ ಅಗಿ ಕಾಡ್ನ ಸಂಪನ್ಮೂಲಗ ಅಳ್ದ್ ಹೊಗ್ತ್ ಉಟ್ಟು .
ಹಿಂದೆನ ಕಾಲಲ್ಲಿ ಕಾಡ್ ಲ್ಲಿ ಸುಮಾರ್ ತರದ ರುಚಿಕರ ಹಣ್ಣ್ ಗ ಸಿಕ್ಕ್ ತ ಇದ್ದೋತ ಹಿರಿಯವು ಹೇಳಿವೆ . ಅ ಹಣ್ಣ್ ಗಳ ಹೆಸ್ರ್ ನ ಪರ್ಚಯ ಮಾಡಿಕೊಡುವ ಸಣ್ಣ ಪ್ರಯತ್ನ ಮಾಡಿಯೊಳ್ಳೆ . ಅದರ್ಲಿ ಕೆಲವೇ ಕೆಲವು ಹಣ್ಣ್ ಗ ಮಾತ್ರ ಇಗನ್ನು ಸಿಕ್ಕಿದೆ. ಇನ್ನ್ ಸುಮಾರ್ ಹಣ್ಣ್ ಗ ಅಳ್ದ್ ಹೋಗಿ ಹೆಸ್ರ್ ಮಾತ್ರ ಉಳ್ ಕೊಂಟು. ಅದರು ಅ ಹಣ್ಣ್ ಗಳ ಹೆಸ್ರ್ ನ ನಾವು ತಿಳ್ಕಂಡ್ ನಮ್ಮ ಮುಂದೆನ ಪೀಳಿಗೆಗೂ ಹೇಳಿಕೊಡ್ದು ತುಂಬಾ ಮುಖ್ಯ ಅಟ್ಟು.
೧) ಮಡಿಕೆ ಹಣ್ಣ್
೨) ನೇರಳೆ ಹಣ್ಣ್
೩) ಜಂನೇರಳೆ ಹಣ್ಣ್
೪ ಕುಂಟು ನೇರಳೆ ಹಣ್ಣ್
೫) ತಡಸಿಲ ಹಣ್ಣ್
೬) ಚಾಕಟೆ ಹಣ್ಣ್
೭)ಕೂಮೆ ಹಣ್ಣ್
೮) ಸರಳಿ ಹಣ್ಣ್
೯) ಬಾಳೆ ಹಣ್ಣ್
೧೦) ರೋಜಿ ಹಣ್ಣ್
೧೧) ಬುಗುಡಿ ಹಣ್ಣ್
೧೨) ಮಜ್ಜಿಗೆ ಹಣ್ಣ್
೧೩) ಜೀರುಂಗುಳಿ ಹಣ್ಣ್
೧೪) ಬೀರುಂಗುಳಿ ಹಣ್ಣ್
೧೫) ಹಲ್ಸನ ಹಣ್ಣ್
೧೬) ಹಾಲೆ ಹಣ್ಣ್
೧೭) ಮಾಯಿನ ಹಣ್ಣ್
೧೮) ರಂಜೆಳೆ ಹಣ್ಣ್
೧೯) ಮೇದ ಪಡಚಿ ಹಣ್ಣ್
೨೦) ಸೂರ್ತಲೆ ಹಣ್ಣ್
೨೧) ನುಚ್ಚಟೆ
೨೨) ಗುಮ್ಮಟೆ
೨೩) ಗಿಣಿಕೆ ಹಣ್ಣ್
೨೪) ಚೋಳಿ ಹಣ್ಣ್
೨೫) ನೆಕ್ಕರೆ – ಮಕ್ಕರೆ
೨೬) ಸೀಬೆ ಹಣ್ಣ್
೨೭) ಅತ್ತಿ ಹಣ್ಣ್
೨೮) ಆಜಿನ ಹಣ್ಣ್
೨೯) ಇಪ್ಪುಲಿ ಹಣ್ಣ್
೩೦) ಅಮೆ ಹಣ್ಣ್
೩೧)ಸೋಮಾರಿ ಹಣ್ಣ್
೩೨) ಗೊಟ್ಟೆ ಹಣ್ಣ್
೩೩) ಇಡ್ಂಜಿ ಹಣ್ಣ್
೩೪) ಚೀಪೆ ಹಣ್ಣ್
೩೫) ಕಕ್ಕಡೆ ಹಣ್ಣ್
೩೬) ಕರ್ಮಜಿ ಹಣ್ಣ್
೩೭) ವಾಟೆ ಹುಳಿ
೩೮) ಕಿತ್ತಳೆ ಹಣ್ಣ್
೩೯) ಮಲೆ ಕಕ್ಕಡೆ ಹಣ್ಣ್
೪೦) ಬೆಣ್ಣೆ ಹಣ್ಣ್
೪೧) ಚೂರಿ ಹಣ್ಣ್
೪೨) ಈರುಳ್ಳಿ ಹಣ್ಣ್
೪೩) ಗೇರ್ ಹಣ್ಣ್
೪೪) ಲಕೋಟೆ ಹಣ್ಣ್
೪೫) ಮುಸಂಬಿ ಹಣ್ಣ್
೪೬) ಚಕೋತ
೪೭) ಪಣ್ ಪುಳಿ
✍🏻ಉಳುವಾರನ ರೋಶನ್ ವಸಂತ್, ಕಾಂತೂರು.