ಪಂಡ್ ನ ಕಾಲದ ಹುತ್ತೇರಿ ಹಬ್ಬ..

✍🏻 ಕಾಂಗೀರ ಚೇತನ್ ಚಂಗಪ್ಪ

ಕೊಡಗು ಒಂದು ಕೃಷಿ ಪ್ರಧಾನ ಜಿಲ್ಲೆ. ಭತ್ತದ ಕೃಷಿನೇ ಇಲ್ಲಿನ ಜೀವಾಳ ಆವ್ಟು. ಭತ್ತದ ಕೃಷಿಂದನೆ ಕೊಡಗುನ ಜನಗ ಹಬ್ಬ ಮಾಡಿವೆ. ನಾಟಿ ಕಾರ್ಯ ಮುಗ್ಸಿ ಕೈಲ್ ಮುಹೂರ್ತ ಹಬ್ಬ . ಭತ್ತ ತೆನೆ ಬುಟ್ಟು ಕಾಯಿ ಹೊರ್ಡುವ ಸಮೆಲಿ, ತುಲಾ ಸಂಕ್ರಮಣ. ಭತ್ತ ಕೊಯ್ಲಿಗೆ ಬರ್ವ ಸಮೆಲಿ, ಹುತ್ತೇರಿ ಹಬ್ಬ. ಹಾಂಗೆ ಹಬ್ಬ ಮುಗ್ಧ ಮೇಲೆ ಬೆಳೆ ಕೊಯ್ಯುವ ಸಂಪ್ರದಾಯ ಕೊಡಗುನ ರೈತರ್ಲಿ ಹಿಂದೆನ ಕಾಲಂದನು ನಡ್ಕಂಡ್ ಬಂದುಟ್ಟು. ಹಾಂಗೆನೆ,ಕೊಡಗುನ ಜನಕ್ಕೆ ಇದ್ ವರ್ಷದ ಕೊನೆ ಹಬ್ಬನೂ ಆವ್ಟು.

ಕೊಡಗುಲಿ ಅಂಞ ಮಳೆ ಕಮ್ಮಿ ಆಗಿ ಸಣ್ಣಂಗೆ ನಡುಗುವ ಚಳಿ ಸುರು ಆತ್ ತ ಹೇಳ್ರೆ ಕೊಡಗುನ ಸುಗ್ಗಿ ಹಬ್ಬ ಹುತ್ತೇರಿ ಹತ್ರ ಬಾತ್ ತ ಅರ್ಥ. ಕೊಡಗುನ ಜನ ಭತ್ತದ ಗದ್ದೆಲಿ 6 ತಿಂಗ ಕಷ್ಟ ಪಟ್ಟ್ ಬಿತ್ತಿ ಬೆಳ್ದ ಭತ್ತ ಹಾಲುತುಂಬಿ ತೆನೆಕಟ್ಟಿ ಹೊಂಬಣ್ಣಕ್ಕೆ ಬರುವ ಸಮೆ. ಈ ದಿನ ಕೊಡಗುನ ಎಲ್ಲಾ ಮನೆ ಮನೆಲೂ ಹುತ್ತರಿ ಹಬ್ಬದ ಸಂಭ್ರಮ. ಕೊಡಗ್ ನ ರೈತ ಬಾಂಧವ್ಕೆ, ದೀಪಾವಳಿಗಿಂತ ಮಿಗಿಲಾದ ಹಬ್ಬ. (ಈ ನಮ್ಮ ಬಯಲು ಸೀಮೆಯವ್ಕೆ, ಸಂಕ್ರಾಂತಿ ಸುಗ್ಗಿ ಹಬ್ಬ ಹೆಂಗೆನೋ ಹಂಗೆ ನಮ್ಮ ಕೊಡಗ್ ನ ಜನಕ್ಕೆ ಹುತ್ತರಿ ಸುಗ್ಗಿ ಹಬ್ಬ ಆವ್ಟು.)

ಹುತ್ತರಿ ಹಬ್ಬನ ಯಾವುದೇ ಜಾತಿ ಜನಾಂಗದ ಭೇದ ಇಲ್ಲದೆ ಎಲ್ಲವು ಒಗ್ಗಟ್ಟ್ ಲಿ ಇದ್ದ್ ಆಚರಿಸುವ ಹಬ್ಬ ಆವ್ಟು. ಹುತ್ತರಿತ ಹೇಳ್ರೇ ಹೊಸ ಅಕ್ಕಿತ ಹೇಳುವ ಅರ್ಥ. ಅಂದರೆ ಹೊಸ ಅಕ್ಕಿನ ಮನೆಗೆ ತುಂಬುಸುವ ಹಬ್ಬ. “ಹುತ್ತರಿ ಹಬ್ಬ” ಇದ್ ನಮ್ಮ ಅರೆಭಾಷೆ ಗೌಡ ಜನಕ್ಕೆ ಮದುವೆ ಆಗಿ ಹೊಸ ಸೊಸೆನ ಮನೆ ಹತ್ತುವಷ್ಟ್ ಕುಸಿ , ಸಂಭ್ರಮ.

ಹುತ್ತರಿ ಹಬ್ಬನ ನವೆಂಬರ್ ಇಲ್ಲರೆ ಡಿಸಂಬರ್ ತಿಂಗಲಿ ಆಚರಿಸುವೆ. ಕೊಡಗ್ ನ ಕುಲದೈವಂತೆಳಿ ಪ್ರಸಿದ್ದಿ ಪಡ್ದ , ಪಾಡಿ ಶ್ರೀ ಇಗ್ಗುತಪ್ಪ ದೇವಾಸ್ಥಾನಲಿ ನಮ್ಮ ಸಂಪ್ರದಾಯದಂಗೆ,ಹುತ್ತರಿ ಹಬ್ಬಕ್ಕೆ 15 ದಿನ ಮುಂದೆನೆ ನಿಶ್ಚಯಮಾಡ್ದ ದಿನ , ಹಿಂದೆನ ಕಾಲದ ಆಚರಣೆಯಂಗೆನೆ, ಅದಿಕ್ಕೆ ಸಂಬಂಧಿಸಿದ ಕುಟುಂಬಸ್ಥರ್ಂದ ಜೋತಿಷ್ಯ ಶಾಸ್ತ್ರದ ಸಹಾಯಲಿ ಹುತ್ತರಿ ಹಬ್ಬ ಮಾಡುವ, ದಿನ, ಸಮಯ, ಘಳಿಗೆ ನಿಶ್ಚಯಮಾಡುವೆ.ಹುತ್ತರಿ ಹಬ್ಬ ಬರ್ವ ದಿನ ವೃಶ್ಚಿಕ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ರೋಹಿಣಿ ಇಲ್ಲರೇ ಕೃತಿಕ ನಕ್ಷತ್ರ ಆಗಿರೊಕು.

ಅದರಂಗೆ ಹುತ್ತರಿ ಹಬ್ಬದ ದಿನ ಹೊತ್ತಿಗೆ ಸರಿಯಾಗಿ ಸುರುಗೆ ಪಾಡಿ ಶ್ರೀ ಇಗ್ಗುತಪ್ಪ ದೇವಾಸ್ಥಾನಲಿ ದೇವರ ಆಶೀರ್ವಾದಲಿ, ಶಾಸ್ತ್ರೋಕ್ತವಾಗಿ ನೆರೆಕಟ್ಟಿ ,ಭತ್ತದ ಗದ್ದೆಗೆ ಹೋಗಿ, ಕದ್ರ್ ಕೊಯ್ದ್ ತಂದ್, ಪ್ರಸಾದತಿಂದವೆ.
ದೇವಾಸ್ಥಾನಲಿ ಪೂಜೆ ಮುಗ್ದಮೇಲೇ ನಿಗದಿಪಡ್ಸಿದ ಹೊತ್ತಿಗೆ, ಕೊಡಗಿನ ಎಲ್ಲಾ ಗ್ರಾಮಸ್ಥರ್, ಐನ್ ಮನೆಗಳ್ಲಿ ,ತಮ್ಮ ತಮ್ಮ ಮನೆಗಳ್ಲಿ ಹಬ್ಬ ಮಾಡಿವೆ.

ಪಂಡ್ ನ ಕಾಲಲಿ ಹುತ್ತರಿ ಹಬ್ಬ ಬಾತ್ ಹೇಳಿರೆ ದೊಡ್ಡವು, ಮಕ್ಕ-ಮರಿ ಎಲ್ಲವ್ಕು ಕುಸಿಯೋ ಕುಸಿ. ನೆಂಟ್ರ್ ಗ ಹಬ್ಬಕ್ಕೆ ಮನೆಗೆ ಬಾದು, ಮಕ್ಕಳ ಆಟ,ಮಾತ್ ಕತೆಗ ಅದೆಷ್ಟ್ ಲಾಯ್ಕ…! ಹಬ್ಬಕ್ಕೆ ಇನ್ನ್ ಹದಿನೈದ್ ದಿನ ಉಟ್ಟು ಹೇಳ್ಕನ ಊರು ನ ಎಲ್ಲ ಮನೆ ,ಐನ್ ಮನೆಗಳ್ಲಿ ಹಬ್ಬದ ಕೆಲ್ಸಗ ಜೋರು ಇದ್ದದೆ. ಮನೆ, ಐನ್ ಮನೆನ ಕರಿ ಗುಡ್ಸುದು, ಅಟ್ಟಲಿ ಇರ್ವ ಪಾತ್ರನೆಲ್ಲ ತೊಳ್ದ್ ಅಣಿ ಮಾಡ್ದು, ಮನೆಗೆ ಸುಣ್ಣ ಬಣ್ಣ ಬಳಿಯದು, ನೆಲಕ್ಕೆ ಸೆಗ್ಣಿ ಸಾರ್ಸಿ ನೆಲ ಕಪ್ಪು ಬಾಕೆ ಹಳೆ ರೇಡಿಯೋ ಬ್ಯಾಟರಿ ನ ಗುದ್ದಿ ಹೊಡಿ ಮಾಡಿ ಸೆಗ್ಣಿ ಒಟ್ಟಿಗೆ ಸಾರ್ಸುದು, ಒಕ್ಲು ಕಳ ಕೆರಿಯದು, ಕದ್ರ್ ತೆಗ್ಯಕೆ ಹೋವ ಓಣಿ, ದಾರಿ ಸರಿ ಮಾಡ್ಡು, ಹಾಂಗೆ ನೆಂಟ್ರಿಗೆಲ್ಲ ಹುತ್ತರಿ ಹಬ್ಬಕ್ಕೆ ಬಾಕೆ ಮಾಡಿಕೆ ಕಾಗದ ಬರಿಯದು.

ಹಿಂಗೆ ಎಲ್ಲ ಕೆಲ್ಸಗ ಮುಗಿಯಕನ ಹುತ್ತರಿ ಹಬ್ಬದ ದಿನ ಬಂದೇ ಬುಟ್ಟದೆ. ಹಬ್ಬದ ದಿನ ಬೋಳ್ಪುಗೆ ಬ್ಯಾಗ ಎದ್ದ್, ಮನೆ ಸಾರ್ಸುದು , ಅಂಗಳಕ್ಕೆ ಸಗಣಿ ಹಾಕುದು , ಮನೆ ಕಟ್ಟಾಳೆಗೆ ಅರಸಿನ ಕುಂಕುಮ ಹಾಕಿ ಚೆಂಡ್ ಹೂನ ಮಾಲೆ ಮಾಡಿ, ದೇವರ ಪೊಟ, ಮನೆ ಕಟ್ಟಾಳೆ ಬಾಗ್ಲಿಗೆ ಹಾಕುದು , ಮನೆ ಮುಂದೆ ಅಂಗಳಲಿ ರಂಗೋಲಿ ಹಾಕಿ, ರಾತ್ರಿ ದೇವ್ರ ಪೂಜೆಗೆ ಬೇಕಾದ ಎಲ್ಲಾ ಪದಾರ್ಥ ಜೊಡ್ಸಿಕಂಬದು ಹೆಣ್ಣ್ ಮಕ್ಕಾ ಹಗ್ಲಿಡಿ…. ತಂಬಿಟ್ಟ್, ಪಕೋಡ, ಕರ್ಜಿಕಾಯಿ, ರವೆ ಉಂಡೆ, ವಡೆ, ಚಕ್ಕುಲಿ ಹಿಂಗೆ ಎಂಟತ್ತ್ ತರದ ತಿಂಡಿ ಮಾಡ್ದು. ಮನೆಗೆ ಎಷ್ಟೇ ನೆಂಟ್ರ್ ಬಂದರೂ ಬಂದ ನೆಂಟ್ರ್ ಗಳ ಹೃದಯ ತುಂಬು ಪ್ರೀತಿಲಿ ಬರಮಾಡಿಕಂಡ್ ಅವ್ರ ಆರೋಗ್ಯ ವಿಚಾರ್ಸಿ ಮನೆಗೆ ಹಬ್ಬಕ್ಕೆ ಬಂದ ನೆಂಟ್ರಿಗೆ ಲಾಯ್ಕಲಿ ಸತ್ಕಾರ ಮಾಡಿ, ಕುಸಿ ಪಡ್ಸಿ, ನೆಂಟ್ರ್ ಗಳ ಮೊರೆಲಿ ಕಾಂಬೊ ಕುಸಿ ಮನೆವ್ಕೆ ಆಗಿತ್ತ್. ಹಾಂಗೆ ಮನೆ ತುಂಬಾ ನೆಂಟ್ರುಗಳೆ ತುಂಬಿ ಅವರ ಮಾತ್ ನಗೆ ಕುಸಿ ನೋಡಿರೆ ಸ್ವರ್ಗಕ್ಕೆ ಒಂದೇ ಗೆಣ್ ಆಗಿತ್ತ್. ಹಾಂಗೆ ಹುತ್ತರಿ ಹಬ್ಬದ ಮನೆ, ಮದುವೆ ಮನೆಯಂಗೆ ರಾರಾಜಿಸ್ತಿತ್ತ್.


ಹಾಂಗೇನೆ, ಹೈದಂಗೆಲ್ಲ ಸೆರ್ಕಂಡ್ ಕಾಡಿಗೆ ಹೋಗಿ ಅವ್ರವ್ರ ಮನೆಗೆ ಬೇಕಾದಷ್ಟ್ ನಾರ್ಕಾಣೆ ಮರದ ನಾರ್, ಕಾಡ್ ಗೇರ್ನ ಸೊಪ್ಪು , ಕುಂಬಳ ಸೊಪ್ಪು , ಮತ್ತೆ ಮನೆ ಹತ್ರ ಇರ್ವ ಹಲ್ಸಿನ ಸೊಪ್ಪು, ಮಾವುನ ಸೊಪ್ಪು , ದೇವಸ್ಥಾನಲಿ ನೆಟ್ಟ ಆಲದ ಮರದ ಸೊಪ್ಪು ತಂದ್ ಜೊಡ್ಸಿಕಂಬದು. ಗದ್ದೆಗೆ ಹೋಗಿ ಕದ್ರು ಕೋಯ್ವ ಗದ್ದೆಲಿ ಬಾಳೆ ನೆಟ್ಟ್ ಮಾವುನ ಸೊಪ್ಪು ತೋರಣ ಕಟ್ಟುದು. ಮನೆ ಅಂಗಳ ನಡುಲಿ ಬೀಟೆ ಮರ ದೊಣ್ಣೆ ಊರಿ ಬಣ್ಣ ಬಳ್ದ್ , ಚೆಂಡ್ ಹೂ ಮಾಲೆ ಹಾಕುದು, ಮನೆ ಹೆಣ್ಣ್ ಮಕ್ಕಲೊಟ್ಟಿಗೆ , ಬಂದ ಕೆಲ್ವ್ ನೆಂಟ್ರ್ ಮಕ್ಕ ಕತ್ತಲೆಗೆ ಉಂಬಕ್ಕೆ ಬೇಕಾದ ಹುತ್ತರಿ ಗೆಣ್ಸ್ ಪಲ್ಯ, ಶುಂಠಿ ಪೊಜ್ಜಿ, ಅನ್ನ,ತರ್ಕಾರಿ ಗೈಪು , ಅಕ್ಕಿ ಪಾಯ್ಸ , ಎಲ್ಲ ಮಾಡಿಕೆ ಕೈ ಜೊಡ್ಸಿಕೊಂಬದು.

ಹಿಂಬೋತ್ತು ಆಯ್ತಾ ಇದ್ದಂಗೆ ಮನೆ ಯಜಮಾನ ಅಂಗಳಕ್ಕೆ ಸುಣ್ಣ ಇಲ್ಲರೆ ಬೂದಿ ತಗಂಡ್ ಬೀಟೆ ದೊಣ್ಣೆ ಊರ್ದಲಿಂದ ಒಂದು ಸುತ್ತು ಪ್ರದಕ್ಷಿಣೆ ಆಕಾರಲಿ ಬೂದಿ ಹಾಕಿ ಮನೆ ಮೆಟ್ಲ್ಂದ ಬೀಟೆ ಕೋಲ್ ವರೆಗೆ , ಬೀಟೆ ಕೋಲ್ಂದ ತೊಳ್ಸಿ ಕಟ್ಟೆವರೆಗೆ, ಹಾಂಗೆ ಬೀಟೆ ಕೋಲ್ಂದ ಕದ್ರ್ ಕೊಯ್ಯಕ್ಕೆ ಹೋವ ದಾರಿಮುಟ್ಟುವ ವರೆಗೆ ಏಣಿ ರೂಪಲಿ ಬೂದಿ ಇಲ್ಲಾರೆ ಸುಣ್ಣ ಹಾಕುವೆ.
ಹಿಂಬೊತ್ತು ಸೂರ್ಯ ಮುಳ್ಗುತ್ತಿದ್ದಂಗೆ, ಕೊಡಗ್ ನ ಎಲ್ಲ ಗ್ರಾಮಲಿ ಹುತ್ತರಿ ಹಬ್ಬದ ಮನೆ ಹೊಸ ಮೊದೊಳ್ತಿ ಬರ್ವ ಹೊತ್ತಿಗೆ ಕಾಯ್ತಾ ಇದ್ದದೆ.

ಪೂರ್ವ ದಿಕ್ಕ್ ಲಿ ಹುಣ್ಣಿಮೆ ಚಂದ್ರ ಉದಯ ಆಕನ ಕುಟುಂಬದ ಎಲ್ಲವ್ಕು ಕುಸಿಯೋ ಕುಸಿ…!! ಮಕ್ಕಳಿಗಂತೂ ಪಿಟಾಕಿ ಹೊಡೆದುತ ಹೇಳ್ರೇ ಎಲ್ಲಿಲ್ಲದ ಕುಸಿ…! ಎಲ್ಲವು ಗೌಡ ಉಡುಪು ಹಾಕಂಡ್ ಮನೆ ಕಟ್ಟಳೆ, ಕೈಯಾಲೆಯ ಐಮರ , ತುಳಸಿ ಕಟ್ಟೆಲಿ ದೀಪ ಹೊತ್ತಿಸಿ, ನೆಲ್ಲಕ್ಕಿ ನಡುಬಾಡೆಲಿ ತೂಗುದೀಪಲಿ ತುಪ್ಪದ ದೀಪ ಹೊತ್ತ್,ಸಿ, ನೆಲ್ಲಕ್ಕಿ ಕೆಳಗೆ ಚಾಪೆ ಹಾಸಿ, ಗಣಪತಿ ದೇವರಿಗೆ ಒಂದು ಬಾಳೆ ಎಲೆಲಿ 1 ಸೇರ್ ಅಕ್ಕಿ ಮೊಡ್ಗಿ , ಅಕ್ಕಿ ಮೇಲೆ ಒಂದು ತೆಂಗಿನ ಕಾಯಿ, 5ವೀಳ್ಯದೆಲೆ ,5ಅಡಿಕೆ, 1 1/4 ರೂಪಾಯಿ ದುಡ್ಡು ಮೊಡ್ಗಿ , ಹುತ್ತರಿ ಪಚ್ಚೆಲಿ ಮಾವುನ ಎಲೆ, ಹಲಸಿನ ಎಲೆ, ಕಾಡು ಗೇರ್ ಎಲೆ, ಆಲದ ಎಲೆ, ಕುಂಬಳ ಎಲೆ ಹಿಂಗೆ ಐದ್ ತರದ ಎಲೆ ಮತ್ತೆ ನಾರ್ಕಣೆ ಮರದ ನಾರ್(ಅಚ್ಚ್ ನಾರ್)ಮೊಡ್ಗಿ, ಇನ್ನೊಂದು ಪಚ್ಚೆ ತುಂಬಾ ಬತ್ತ ತುಂಬುಸಿ ಮೊಡ್ಗಿ ,ಮುಕ್ಕಾಲ್ ಮೇಲೆ ಕಂಚಮಿ ಮೊಡ್ಗಿ ಕುಟುಂಬದ ಪ್ರತೀಕ ಆಗಿರುವ ಕೋವಿ, ಹಾಂಗೇ ಕದ್ರ್ ತೆಗೆಕೆ ಇರುವ ಹಲ್ಲ್ ಕತ್ತಿ ಮೊಡ್ಗಿ , ಪೂಜೆ ಮಾಡುವೇ.

(ಪ್ರಸಕ್ತ ವರ್ಷ)ಹುತ್ತರಿ ಹಬ್ಬದ ದಿನ ಸುರುಗೆ ಕತ್ತಲೆಗೆ ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನಲಿ ರೋಹಿಣಿ ನಕ್ಷತ್ರಲಿ ಹಬ್ಬಮಾಡಿಕೆ ಒಳ್ಳ ಘಳಿಗೆ ತ ಜ್ಯೋತಿಷ್ಯರ್ ತಿಳ್ಸಿದ್ದ್. ಅದರಂಗೆ ನೆ
ರಾತ್ರೆ 07:15 ರ ಹೊತ್ತುಲಿ ನೆರೆ ಕಟ್ಟುದು
ರಾತ್ರೆ. 08:15 ರ ಹೊತ್ತುಲಿ ಕದ್ರ್ ಕೊಯ್ಯದು
ರಾತ್ರೆ. 09:15 ರ ಹೊತ್ತುಲಿ ಪ್ರಸಾದ ಉಂಬದು.
ಹಾಂಗೆ…
ಅದೆ ದಿನ ಕತ್ತಲೆಗೆ ಊರ್ ನ ಎಲ್ಲ ಜನರ ಐನ್ ಮನೆಗಳ್ಲಿ,ಮನೆಗಳ್ಲಿ
ರಾತ್ರೆ 07:45 ರ ಹೊತ್ತುಲಿ ನೆರೆ ಕಟ್ಟುದು
ರಾತ್ರೆ. 08:45 ರ ಹೊತ್ತುಲಿ ಕದ್ರ್ ಕೊಯ್ಯದು
ರಾತ್ರೆ. 09:45 ರ ಹೊತ್ತುಲಿ ಪ್ರಸಾದ ಉಂಬದು.
ನೆರೆಕಟ್ಟುವ ಸಮೆಲಿ, ಮನೆವೆಲ್ಲ ನೆಲ್ಲಕ್ಕಿ ನಡುಬಾಡೆಯಲ್ಲಿ ಸೇರಿ ಪಟ್ಟೇದಾರ ವೆಂಕಟರಮಣ ಸ್ವಾಮಿ, ಪಾಡಿ ಶ್ರೀ ಇಗ್ಗುತ್ತಪ್ಪ ಸ್ವಾಮೀ , ತಾಯಿ ಕಾವೇರಿಮಾತೇನ ನೆನ್ಸಿ, ಪೊಲಿ ದೇವ ಪೊಲಿ ದೇವ ತ ಕರ್ದ್, ನೆರೆ ಪಚ್ಚೆಯಲ್ಲಿರುವ 5 ತರದ ಸೊಪ್ಪುನ ಒಂದರ ಮೇಲೊಂದರಂಗೆ ಜೋಡ್ಸಿ ಸುರಳಿ ಮಾಡಿ ಅಚ್ಚ್ ನಾರ್ಂದ ಕಟ್ಟುವ ಹೊತ್ಲಿ, ಅಲ್ಲಿ ನೆರ್ದ ಕುಟುಂಬದವು ಜೋರು ಧನಿಲಿ, ಪೊಲಿ ಪೊಲಿಯೇ ಬಾ ತ ಕೂಗುವೆ. ಎಲ್ಲವೂ ಗಂಧದ ಬಟ್ಟ್ ಹಾಕಂಡವೇ.

ಹಂಗೆ ಹೊರಗೆ ಪಿಟಾಕಿ ಸದ್ದ್ ಬೇರೆ. ಹಾಂಗೆ ಕದ್ರ್ ತೆಗಿವ ಹೊತ್ತ್ ಲಿ, ಮನೆವೆಲ್ಲ ಭತ್ತದ ಗದ್ದೆ ಕಡೆ ಹೋರ್ಟವೆ. ಹೊರಡ್,ಕನ ಮನೆ ಯಜಮಾನ ದೇವರ ಗ್ಯಾನ ಮಾಡಿಕಂಡ್, ಪ್ರತಿ ವರ್ಷದಂಗೆ ಈ ವರ್ಷನು ಹುತ್ತರಿ ಹಬ್ಬ ಮಾಡಿಕಂಡ್ ಬಂದೊಳೊ, ಇಗ್ಗುತ್ತಪ್ಪ ದೇವಾಸ್ಥಾನಲಿ ನಿಶ್ಚಯ ಮಾಡ್ದಂಗೆ 7:45ಕ್ಕೆ ನೆರೆ ಕಟ್ಟಿಯೊಳೊ, 8:45ಕ್ಕೆ ಕದಿರು ತೆಗೆಕೆ ಹೊರ್ಟೊಳೊ, ನಾವು ನೆರೆ ಕಟ್ಟಿದರ್ಲಿ ಆಗಲಿ, ಕದಿರು ತೆಗ್ದದರ್ಲಿ ಆಗಲಿ, ಮಾಡ್ದ ಅಡಿಗೆಲಿ ಆಗಲಿ ಯಾವುದೇ ತಪ್ಪು ಒಪ್ಪು ಬಂದರೆ, ಕುಲಗುರು, ಪಾಡಿ ಶ್ರೀ ಇಗ್ಗುತಪ್ಪ ಸ್ವಾಮೀ, ತಾಯಿ ಕಾವೇರಿ ಮಾತೆ ನಮ್ಮನ್ನ ಕ್ಷಮಿಸಿ ನಮ್ಮನ್ನೆಲ್ಲ ಕಾಪಾಡ್ಂತ ಹೇಳಿಕೊಂಡ್, ಒಕ್ಕಣೆ ಹೇಳಿ, ನೆಲ್ಲಕ್ಕಿ ದೀಪಕ್ಕೆ ಅಕ್ಕಿ ಹಾಕಿ ಬೇಡಿಕಂಡವೆ.

ಹಾಂಗೆ ಕದಿರ್ ಗುತ್ತಿ ಹೋರವ ಮತ್ತೆ ಕಂಚಮಿ ಎಲ್ಲವೂ ಹಿರಿಯವರ ಕಾಲ್ ಮುಟ್ಟಿ ಚಾಮಿ ಮಾಡಿಕಂಡವೆ. ಹಾಂಗೆ ಕಿರಿಯವು ಹಿರಿಯರ ಕಾಲ್ ಚಾಮಿ ಮಾಡಿಕಂಡವೆ. ಕದಿರು ಗುತ್ತಿನ ಎತ್ತಿ ಕೊಟ್ಟವೆ. ಕಂಚಮಿ ಮುಂದೆ, ಗುತ್ತಿ ಹಿಂದೆ ಇದ್ದದೆ. ಅಲ್ಲಿಂದ ಇಗ್ಗುತಪ್ಪ ಕಾವೇರಮ್ಮ ಪೊಲಿ ಪೊಲಿಯೇ ಬಾ ಪೊಲಿಯೇ ಬಾ ತ ಪೊಲಿ ಕರ್ಕಂಡ್, ಭತ್ತದ ಗದ್ದೆಗೆ ಕದಿರು ಕೊಯ್ಯಕ್ಕೆ ಹೊರ್ಟವೆ. ಅಂಗಳಲಿ ಮಾಡಿದ್ದ ಏಣಿ ಆಕಾರದ ಮ್ಯಾಲೆ ನಡ್ಕಂಡ್ ಹೋಗಿ ಬೀಟೆ ಮರಂದ ಒಂದು ಸುತ್ತು ಬಂದ್ ಗದ್ದೆಗೆ ಹೋವ ಏಣಿ ಮೇಲೆ ನಡ್ಕಂಡ್ ಗದ್ದೆ ಕಡೆ ಪೊಲಿ ಕರ್ಕಂಡ್, ಪಿಟಾಕಿ ಹೊಟ್ಸಿಕಂಡ್, ಗದ್ದೆಕಡೆ ಹೋದವೆ. ಪಲಿ ಕರ್ಕಂಡ್ ಹೋವ ಹೊತ್ತುಲಿ ನೆರೆಮನೆವು ಕಿವಿ ಕೊಟ್ಟ್ ಆಲ್ಸುವೆ, ಯಾರಾರ್ ಪಲಿ ಕರಿತ ಒಳ ನಾ….? ಕದ್ರು ಕೊಯ್ಯಕ್ಕೆ ಹೊರ್ಟ ನಾ ತ.

ಯಾವುದಾರ್ ಒಂದು ಮನೆಂದ ಪಲಿ ಕರಿವ ಸದ್ದ ಬಾತ್ ಹೇಳಿರೆ ಆ ಮನೆನ ನೆರೆ ಕರೆಯವು ಎಲ್ಲ ಗದ್ದೆಗೆ ಪಲಿಕರ್ಕಂಡ್ ಕದ್ರು ಕೊಯ್ಯಕ್ಕೆ ಹೋದವೆ. ಗದ್ದೆ ಗೆ ಹೋಗಿ ಎತ್ತಿದಂಗೆ ಅಲ್ಲಿ ಗುತ್ತಿನ ಮೊಡ್ಗಿ , ಭತ್ತದ ನುಲಿ(ಪೈರು)ನ ಪೂಜೆ ಮಾಡಿ ನುಲಿಗೆ ಹಣ್ಣು-ಕಾಯಿ , ಹಾಲು-ಜೇನು ಹಾಕಿ , ಮನೆಂದ ತಂದ ನೆರೆನ ಭತ್ತದ ನುಲಿಗೆ ಕಟ್ಟಿ ಆಕಾಶಕ್ಕೆ ಕೋವಿಲಿ ಒಂದು ಗುಂಡು ಹೊಡ್ದು , ಅಲ್ಲಿ ನೆರ್ದಿದ್ದ ಎಲ್ಲವು ಪೊಲಿ ಪೊಲಿಯೇ ಬಾ ತ ಜೋರಾಗಿ ಕರ್ಕಂಡ್ ಇನ್ನೊಂದು ಕಡೆ ಪಿಟಾಕಿ ಹೊಡ್ಸಿಕಂಡ್, ಹಾಂಗೆ, ಅಲ್ಲಿ ಎಲ್ಲರ ಮನೆ ಗದ್ದೆ ಗಳ್ಲು ದೊಂದಿ ದೀಪ ಹೋಸ್ಸಿಕಂಡ್, ಪಿಟಾಕಿ ಹೊಸ್ಸಿಕಂಡ್ ಇದ್ದವೆ. ಪಲಿ ಕರಿವ ಸದ್ದ ಪಿಟಾಕಿ ಸದ್ದ ಜೋರಿದ್ದದೆ. ಅದರ ನೋಡಿಕೆ ಬಾರಿ ಗೌಜಿನು ಇದ್ದದೆ. ಗದ್ದೆಲಿ ಈಚೆ ಕರೆಂದ ಪೊಲಿ ಪೊಲಿಯೇ ಬಾ ತ ಜೋರಾಗಿ ಕರಿಯಕನ, ಆಚೆ ಕರೆ ಗದ್ದೆಲಿ, ಪಲಿ ಪೊಲಿಯೇ ಬಾ ತ ಇನ್ನೂ ಜೋರಾಗಿ ಕರಿಯೋದು.

ಹಾಂಗೆ, ಮನೆ ಯಜಮಾನ ಹೊತ್ತು ನೋಡಿ ಕದ್ರು ಕೊಯ್ವ ಗಳಿಗೆ ಆಕನ ಕಾವೇರಮ್ಮ ಇಗ್ಗುತಪ್ಪನ ಭಂಡಾರಕ್ಕೆ ಪೊಲಿ ಪೊಲಿಯೇ ಬಾ ಪೊಲಿಯೇ ಬಾ ತ ಪೊಲಿ ಕರ್ಕಂಡ್,3, 5, 7 ಹಿಂಗೆ ಬೆಸ ಸಂಖ್ಯೆಲಿ ಕದಿರು ತೆಗ್ದ್ ಎಲ್ಲವರ ಕೈಗೂ ಸ್ವಲ್ಪ ಸ್ವಲ್ಪ ಕದಿರು ಕೊಟ್ಟ್ , ಪೊಲಿ ಪೊಲಿಯೇ ಬಾ ತ ಹೇಳಿಕಂಡ್ ಮನೆಕಡೆ ಹೊರ್ಟವೆ. ಮನೆಗೆ ಬಂದ್ ಅಂಗಳಲಿ ಬೀಟೆ ಮರಕ್ಕೆ ಮೂರು ಸುತ್ತು ಬಂದ್ , ತಂದ ಕದ್ರ್ ಲಿ ಮೂರು ಕೊನೆ ಕದ್ರ್ ನ ಬೀಟೆ ಕಂಬಕ್ಕೆ ಸೆಕ್ಕ್ ಸಿ, ಹಾಂಗೆ ತುಳಸಿ ಕಟ್ಟೆಗೆ ಹೋಗಿ ತುಳಸಿಗೆ ನಮಸ್ಕಾರ ಮಾಡಿ , ಮನೆ ಮೆಟ್ಟ್ ಹತ್ತ್, ಕನ ಮನೆ ಮುತ್ತೈದೆ ಕದ್ರ್ ಕೊಯ್ದ್ ತಂದ ಯಜಮಾನನ ಕಾಲ್ ತೊಳ್ದ್, ಕುಡಿಯಕ್ಕೆ ಹಾಲ್ ಕೊಟ್ಟ್, ಕಾಲ್ ಮುಟ್ಟಿ ಚಾಮಿ ಮಾಡಿ ಗದ್ದೆಂದ ತಂದ ಕದ್ರ್ ನ ತಗಂಡ್ ನೆಲ್ಲಕ್ಕಿ ಬಾಡೆಲಿ ಚಾಪೆ ಮೇಲೆ ಮೊಡ್ಗುವೆ.

ದೇವ್ರ ಹೆಸ್ರ್ ಹೇಳಿ ಐದ್ ತರದ ಎಲೆನ ಒಂದರ ಮೇಲೆ ಒಂದರಂಗೆ, ಸುರುಗೆ ಕುಂಬಳ, ಮಾವಿನ, ಕಾಡ್ ಗೇರ್, ಹಲಸಿನ, ಮತ್ತೆ ಅರಳಿ(ಆಲದ) ಎಲೆನ ಮೊಡ್ಗಿ ಅದಿಕ್ಕೆ 3, 5, 7 ಬೆಸ ಸಂಖ್ಯೆಲಿ ಕದಿರು ಮೊಡ್ಗಿ , ಸುರುಳಿ ಮಾಡಿ ಅಚ್ಚು ನಾರ್ ಲಿ ಬಿಗಿಯಾಗಿ ಕಟ್ಟುವೆ. ಹಿಂಗೆ ಕಟ್ಟಿದ ಕದಿರುನ ಸುರುಗೆ ಪಾಯ್ಸದ ಮಡಿಕೆಗೆ ಕಟ್ಟಿ , ಪಾಯ್ಸಕ್ಕೆ ಸ್ವಲ್ಪ ಹೊಸ ಭತ್ತದ ಕಾಳ್ ಮತ್ತೆ 4, 5 ಕಲ್ಲ್ ನ ಹಾಕುವೆ. ಮತ್ತೆ ಕದಿರುನ ನೆಲ್ಲಕ್ಕಿ ದೀಪಕ್ಕೆ , ಮುಡ್ಪು , ಮನೆ ಬಾಗ್ಲ್ , ಕೂಸುನ ತೋಟ್ಲ್ , ಫಲದ ಮರ, ಹಿಂಗೆ ಶುಭ ಸೂಚಕ ಜಾಗೆಲಿ ಕದಿರು ಕಟ್ಟುವೆ.

ಮತ್ತೆ ಮನೆಯವು ಎಲ್ಲ ನೆಲ್ಲಕ್ಕಿ ನಡುಬಾಡೆಲಿ ಊಟಕ್ಕೆ ಕುದ್ದವೆ. ಸುರುಗೆ ಅಕ್ಕಿ ಪಾಯಸ ತಿಂದವೆ. ಅದರ್ಲಿ ಹೊಸ ಭತ್ತ ಮತೆ 4, 5 ಕಲ್ಲ್ ಹಾಕಿದ್ದವೆ , ಪಾಯ್ಸ ತಿಂಬಕನ ಯಾರಿಗೆ ಕಲ್ಲ್ ಸಿಕ್ಕಿದೆನೋ ಅವ್ಕೆ ಕಾಲ್ಲಾಯಸ್ಸ್ಂತ,ಭತ್ತ ಸಿಕ್ಕಿರೆ ಸಿರಿ ಸಂಪತ್ತ್ ಕೂಡಿಬಂದೆಂತ ಹೇಳುವ ನಂಬಿಕೆ ಉಟ್ಟು.
ಹಾಂಗೆ ತಂಬಿಟ್ಟ್ ಉಂಡೆನ ಅರಳಿ ಸೊಪ್ಪು ಮೇಲೆ ಮೊಡ್ಗಿ ಮನೆ ನಡುಬಾಡೆಲಿ ಇರ್ವ ಬಿಟ್ಟಕ್ಕೆ ನಮ್ಮ ಖುಷಿನ ನೆನ್ಸಿ ಬಿಟ್ಟಕ್ಕೆ ಎಸಿಯೋಕು. ಅದ್ ಅಲ್ಲಿ ಅಂಟಿಕಂಡರೆ ನೆನ್ಸಿದ್ ನೆರವೇರ್ದೆಂತ ಹೇಳುವ ನಂಬಿಕೆ ನೂ ಉಟ್ಟು. ಹಾಂಗೆ ಬಿಟ್ಟಕ್ಕೆ ಅಂಟಿಸಿದ ತಂಬಿಟ್ ಉಂಡೆನ, ಕೊಟ್ಟ ಗೂಡೆಗ ಬಂದು ತಿನ್ನೊಕುತ ಹೇಳುವ ಸಂಪ್ರದಾಯನು ಉಟ್ಟು….

ಹಬ್ಬ ಕಳ್ದ ಮಾರ್ನೇ ದಿನ ಊರುಲಿ ಹಂದಿ ಹೊಡ್ದ್, ಹಂದಿ ಗೈಪು ಮಾಡಿ, ಕಡ್ಂಬಿಟ್ಟ್, ಇಡ್ಲಿ , ಕಳ್ಳ್ ಎಲ್ಲ ಕುಡ್ಕಂಡ್ ಗೌಜಿ ಮಾಡಿವೆ. ಹಾಂಗೆನೇ ನಾಲ್ಕೈದ್ ದಿನ ಮುಟ್ಟ, ಮಂದ್ ಗಳ್ಲಿ ಆಟದ ಬಾಣೇಗಳ್ಲಿ ಊರುನ ಜನ ಎಲ್ಲ ಸೇರಿಕಂಡ್, ಕೋಲಾಟ,ಊರೋರ್ಮೇ ಮಾಡುವೇ. ನಮ್ಮ ತಾತ ಮುತ್ತಾತನ ಕಾಲಂದ ನಡ್ಸಿಕಂಡ್ ಬಂದ ಹಬ್ಬ ಹರಿದಿನಗಳ್ನ ನಾವು ನಮ್ಮ ಮುಂದೆನ ಪೀಳಿಗೆಗೂ ನಡ್ಸಿಕಂಡ್, ಗೊತ್ತಿಲ್ಲದರ ಹೇಳಿಕಂಡ್ ಹೋಕು ಆಗ ಹಬ್ಬ ಹರಿದಿನಗಳ ಕಟ್ಟು ಕಟ್ಟಳೆಗ ನಮ್ಮ ಮುಂದೆನ ಜನಾಂಗಕ್ಕೂ ಗೋತ್ತಾದೆ.
ಸಮಸ್ತ ಜನಾಂಗ ಬಾಂದವ್ಕೆ ಹುತ್ತರಿ ಹಬ್ಬದ ಹಾರ್ದಿಕ ಶುಭಾಶಯಗ.

ತಾಯಿ ಕಾವೇರಿ ಮಾತೇ, ಪಾಡಿ ಶ್ರೀ ಇಗ್ಗುತಪ್ಪ ದೇವರ ಆಶೀರ್ವಾದ ಸದಾ ನಿಮ್ಮೆಲ್ಲರ ಮೇಲೆ ಇರಲಿ ತ ಬೇಡಿಕಂಡವೆ. ತಪ್ಪುಗ ಇದ್ದರೆ ದಯಮಾಡಿ ಕ್ಷಮಿಸಿ.🙏🏽
ಹಾಂಗೆ, ನೀವ್ಗೆ ಗೊತ್ತಿರುವ ಏನಾರ್ ವಿಷಯಗ ಇಲ್ಲಿ ಇಲ್ಲದೆ ಹೋಗಿದ್ದರೆ, ನಮಿಗೂ ತಿಳ್ಸಿ ನಾವುನೂ ತಿಳ್ಕಂಡವೆ. ಎಲ್ಲವ್ಕೂ ಹೆಳಿಕಂಡ್ ಬಂದ ಹುತ್ತರಿ ಹಬ್ಬ, ಯಾರಿಗೂ ಹೇಳೆದೇ ಹೋತು….!!

ಧನ್ಯವಾದಗ…

✍🏻 ಕಾಂಗೀರ ಚೇತನ್ ಚಂಗಪ್ಪ

error: Content is protected !!