ಅರೆಬಾಸೆ ಹಾಡು‌ ಮುಂದಿನ ವಾರ ಅಂತ್ಯಕ್ಕೆ ರಿಲೀಸ್


ಅರೆಬಾಸೆ ಹಾಡು Facebook ಮತ್ತು‌‌ YouTube ಅಲ್ಲಿ ರಿಲೀಸ್ ಆಗಲಿದೆ, ಕೊಡಗು, ದಕ್ಷಿಣ ಕನ್ನಡ, ಕಾಸರಗೋಡು, ಮತ್ತು ಬೆಂಗಳೂರು ಯುವಕರ ತಂಡದವರು ಸೇರಿಕೊಂಡು ಹಾಡನ್ನು ಮಾಡಿದ್ದಾರೆ.

“ವಿಹ ಕ್ರಿಯೇಶನ್‌” ಹಾಗೂ “ನಾದಮಯ ಮ್ಯೂಸಿಕ್ ಲವರ್ಸ್” ತಂಡದವರ ಸಹಾಯದಿಂದ ಮತ್ತು ಪರಿಶ್ರಮದಿಂದ “ನೆನ್ಪು‌ನ ಕನ್ಸ್ ಲಿ” ಎಂಬ ಅರೆಭಾಸೆ ಹಾಡು ರಿಲೀಸ್ಗೆ ಸಜ್ಜಾಗುತ್ತಿದ್ದು ಎಲ್ಲರ ಗಮನ ಸೆಳೆಯುವ ನಿರೀಕ್ಷೆಯಲ್ಲಿದೆ.

ಈ ಹಿಂದೆಯಷ್ಟೇ ‘ರಾಣಿ ನೀ” ಎಂಬ ಹಾಡು ಜನಪ್ರಿಯವಾಗಿತ್ತು, ಹೆಚ್ಚು ವೀವ್ಸ್ ಬಂದಿದ್ದು ಜನರ ಗಮನ ಸೆಳೆಯಿತು. Canada, London, East africa, Tanzania, Thailand, USA, UAE, ಸೇರಿದಂತೆ ಹಲವು ಕನ್ನಡಿಗರು /ಅರೆಬಾಷಿಕ ಜನರು ಇರುವ ಸ್ಥಳದಿಂದ ಹೆಚ್ಚು ಪ್ರೋತ್ಸಾಹ ಬಂದಿದ್ದು ಟೀಮ್ಗೆ ಬಲ ಬಂದಂತಾಗಿದೆ.

ಈ “ನೆನ್ಪುನ ಕನ್ಸ್ ಲಿ” ಹಾಡಿಗೆ ದೀಪಿಕಾ ಅಡ್ತಲೆ (Mrs Karnataka Winner/ Film Actress)


ಮತ್ತು ಕುದುಕುಳಿ ಮಿಲನ ಭರತ್ (ನೃತ್ಯಗಾರ್ತಿ) ಇವರ ಸಹಕಾರ ಅಪಾರವಾಗಿದೆ.



ಇನ್ನು ಈ ಅರೆಬಾಸೆ ಹಾಡಿಗೆ ಅರೆಬಾಸೆ ಕಥೆ
ಬರಹಗಾರರಾದ ಅಂಜೇರಿರ ವಿಶು ರಾಘವಯ್ಯ ಲಿರಿಕ್ಸ್ ಬರೆದಿದ್ದರೆ.‌



ಸುಧೀರ್ ಶಾಸ್ತ್ರಿ ಅವರ Streamline Music Studio (ಬೆಂಗಳೂರು) ನಲ್ಲಿ ರೆಕಾರ್ಡಿಂಗ್ ಮತ್ತು ಮಾಸ್ಟರಿಂಗ್ ಮಾಡಲಾಗಿದೆ. ಹಾಡಿಗೆ ಪೃಥ್ವೀಂದ್ರ ಬಲ್ಯಾಯ ಕಾಸರಗೂಡು ಇವರು ಇಂಪಾಗಿ ಧ್ವನಿ ‌ನೀಡಿದ್ದು ಕುತೂಹಲದಿಂದ ಜನರು ಹಾಡಿನ ರಿಲೀಸ್ಗಾಗಿ ಕಾಯುತ್ತಿದ್ದಾರೆ.



ಈ ಹಿಂದೆ ವಿಶು ರಾಘವಯ್ಯ ಅವರು ಬರೆದಂತಹ “ರಾಣಿ ನೀ” ಎಂಬ ಹಾಡಿಗೆ ಪೃಥ್ವಿ ಅವರು ಧ್ವನಿಯನ್ನು ನೀಡಿದ್ದರು.

ಪೃಥ್ವಿ ಅವರು ಹಲವು ಅರೆಬಾಸೆ ಹಾಡುಗಳನ್ನು ಹಾಡಿದ್ದು “ನನ್ಸಾದ.. ಕನ್ಸ್, “ನನ್ನ ಗೂಡೆ…ನನ್ನ ನೋಡ್ತ್.”.. ಎಂಬ ಹಾಡು ಸಕತ್ ವೈರಲ್ ಆಗಿತ್ತು ಇದಕ್ಕೆ ರವಿ ದೇರನ ಅವರು ಲಿರಿಕ್ ಬರೆದಿದ್ದರು.

“ನೆನ್ಪು‌ನ ಕನ್ಸ್ ಲಿ ಮತ್ತು ರಾಣಿ ನೀ” ಈ ಹಾಡಿಗೆ ಮುಖ್ಯ ಪ್ರಡ್ಯೂಜರ್ (producer) ಆಗಿರುವ ಅಚ್ಚಲ್ಪಾಡಿ ಜೀವನ್ ದೇವಯ್ಯ ಇವರು ಕೈ ಜೋಡಿಸಿದ್ದು ಯುವಕರ ಹುಮ್ಮಸ್ನು‌ ಹೆಚ್ಚಿಸಿದಂತಾಗಿದೆ.



ಈ ಯುವಕರ ತಂಡಕ್ಕೆ ಮ್ಯೂಸಿಕ್ composition ಕೈ ಜೋಡಿಸಿದ್ದು ಅರುಲ್ ಕುಮಾರ್ ಮಥಾಯಿಸ್.

ಇವರೆಲ್ಲರ ಪ್ರರಿಶ್ರಮದ ಫಲ ಅರೆಬಾಸೆ ಜನರ ಮನಸ್ಸು ಮುಟ್ಟಲಿ ಎಂದು ಆಶಿಸೋಣ.

error: Content is protected !!