fbpx

ತೃಣಮೂಲ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನ ತ್ಯಜಿಸಿದ ಸಿನ್ಹಾ!

ಹೊಸದಿಲ್ಲಿ: ” ಪ್ರತಿಪಕ್ಷಗಳ ಪ್ರಬಲ ಒಗ್ಗಟ್ಟಿ” ಗಾಗಿ ಪಕ್ಷದಿಂದ ದೂರ ಸರಿಯುವುದಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಉಪಾಧ್ಯಕ್ಷ ಯಶವಂತ್ ಸಿನ್ಹಾ ಅವರು ಮಂಗಳವಾರ ಘೋಷಿಸಿದರು.

ಈ ಕುರಿತು ಟ್ವೀಟ್‌ ಮಾಡಿರುವ ಸಿನ್ಹಾ, “ಮಮತಾಜಿ ಅವರು ಟಿಎಂಸಿಯಲ್ಲಿ ನನಗೆ ಗೌರವ ಹಾಗೂ ಪ್ರತಿಷ್ಟೆ ಕೊಟ್ಟಿದ್ದಕ್ಕೆ ನಾನು ಅವರಿಗೆ ಕೃತಜ್ಞನಾಗಿದ್ದೇನೆ.

ಈಗ ಒಂದು ದೊಡ್ಡ ರಾಷ್ಟ್ರೀಯ ಉದ್ದೇಶಕ್ಕಾಗಿ ನಾನು ಪಕ್ಷದಿಂದ ದೂರ ಸರಿಯುವ ಸಮಯ ಬಂದಿದೆ. ವಿರೋಧ ಪಕ್ಷಗಳ ಪ್ರಬಲ ಏಕತೆಗಾಗಿ ಕೆಲಸ ಮಾಡುತ್ತೇನೆ. ಅವರು (ಮಮತಾ ಬ್ಯಾನರ್ಜಿ) ನನ್ನ ಕ್ರಮವನ್ನು ಒಪ್ಪುತ್ತಾರೆ ಎಂದು ನನಗೆ ಖಾತ್ರಿಯಿದೆ” ಎಂದು ಬರೆದಿದ್ದಾರೆ.

ಟಿಎಂಸಿ ತ್ಯಜಿಸಲು ನಿರ್ಧರಿಸಿರುವ ಕೇಂದ್ರದ ಮಾಜಿ ಸಚಿವ ತಮ್ಮನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡಲು ವಿರೋಧ ಪಕ್ಷದ ನಾಯಕರ ಒಂದು ಗುಂಪು ಮಾಡಿದ ಪ್ರಸ್ತಾಪವನ್ನು ಒಪ್ಪಿಕೊಂಡಿರುವ ಸುಳಿವು ನೀಡಿದ್ದಾರೆ.

ರಾಷ್ಟ್ರಪತಿ ಅಭ್ಯರ್ಥಿ ಸ್ಥಾನಕ್ಕೆ ಟಿಎಂಸಿ ಸಿನ್ಹಾ ಅವರ ಹೆಸರನ್ನು ಸೂಚಿಸಿತ್ತು. ಬಿಜೆಪಿಯ ಮಾಜಿ ನಾಯಕ ಹೆಚ್ಚು ಸ್ವೀಕಾರಾರ್ಹ ಮುಖವಾಗಿ ಹೊರಹೊಮ್ಮಲು ಮೊದಲು ಟಿಎಂಸಿ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಹಾಗೂ ಎಡ ಪಕ್ಷಗಳು ಒತ್ತಾಯಿಸಿದ್ದವು ಎನ್ನಲಾಗಿದೆ.

error: Content is protected !!