fbpx

ಎಬಿವಿಪಿಗೆ 74ರ ಸಂಭ್ರಮ

ಶೈಕ್ಷಣಿಕ ಕ್ಷೇತ್ರದ ಕೇಂದ್ರಬಿಂದುಗಳಾದ ವಿದ್ಯಾರ್ಥಿಗಳನ್ನು ರಾಷ್ಟ್ರಭಕ್ತಿಯ ಮೂಲಕ ಒಗ್ಗೂಡಿಸಿ, ರಾಷ್ಟ್ರ ಪುನರ್ನಿರ್ಮಾಣದ ಗುರಿಯನ್ನು ಹೊತ್ತು, ಸಾಮಾಜಿಕ, ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಹೋರಾಟವನ್ನು ಆಯೋಜಿಸುತ್ತ, ಕಳೆದ ಹಲವು ದಶಮಾನಗಳಿಂದಲೂ ಸಮಾಜದಲ್ಲಿ ಸಕ್ರಿಯವಾಗಿರುವ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಗೆ 74 ರ ಸಂಭ್ರಮ…!

ಅದು 1949 ರ ಸಮಯ, ಭಾರತ ಸ್ವಾತಂತ್ರ್ಯ ಹೊಂದಿ ಕೇವಲ 2 ವರ್ಷಗಳಾಗಿತ್ತು. ಅಂತಹ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರ ಅಭಿಪ್ರಾಯದಂತೆ ಶೈಕ್ಷಣಿಕ ಕ್ಷೇತ್ರದಲ್ಲಿ ಒಂದು ಸಂಘಟನೆ ಸಕ್ರಿಯಗೊಳ್ಳಲು ಆರಂಭಿಸಿತು ಆ ಪ್ರಭಾವಿ ವಿದ್ಯಾರ್ಥಿ ಸಂಘಟನೆಯೇ ಎಬಿವಿಪಿ..

ಹಾಗಿದ್ದರೆ ಎಬಿವಿಪಿ ಅಂದರೆ ಏನು ತಿಳಿದುಕೊಳ್ಳೋಣ ಬನ್ನಿ…

ಎಬಿವಿಪಿ ಇದರ ಪೂರ್ಣ ಹೆಸರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್. ಇದೊಂದು ವಿದ್ಯಾರ್ಥಿ ಸಂಘಟನೆಯಾಗಿದ್ದು ಇಂದಿನ ಸುಮಾರು 74 ವರ್ಷಗಳ ಹಿಂದೆ ಅಂದರೆ 1949 ಜುಲೈ 9ರಂದು ಸ್ಥಾಪನೆಯಾಯಿತು.ಇದರ ಪ್ರಧಾನ ಕಚೇರಿ ಮುಂಬೈ, ಮಹಾರಾಷ್ಟ್ರದಲ್ಲಿದೆ.ಎಬಿವಿಪಿಯು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗ ಸಂಘಟನೆಯಾಗಿದೆ.

ಪ್ರಸ್ತುತ ಜಗತ್ತಿನ ಅತೀ ದೊಡ್ಡ ವಿದ್ಯಾರ್ಥಿ ಸಂಘಟನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಸಂಘಟನೆಯು
ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಸಂಬಂಧ ಸಂಘರ್ಷವಾಗಿರದೆ ಸಮನ್ವಯದ್ದಾಗಿರಬೇಕು ಎಂಬುದನ್ನು ನಂಬಿದೆ ಮತ್ತು ಈ ಕಲ್ಪನೆಯನ್ನು ಶಿಕ್ಷಣ ಕ್ಷೇತ್ರದಲ್ಲಿ ತರಲು ಪ್ರಯತ್ನಿಸಿದೆ.

1970 ರಾಜಕೀಯ ಆಂದೋಲನವಾದ ಜೆಪಿ ಮೂವ್ಮೆಂಟ್ನಲ್ಲಿ ಪ್ರಮುಖ ಪಾತ್ರ ವಹಿಸಿ, ಇದರಿಂದಾಗಿ ಗುಜರಾತ್ ಹಾಗೂ ಬಿಹಾರದ ಹಲವು ವಿದ್ಯಾರ್ಥಿ ಸಂಘಟನೆಗಳು ಎಬಿವಿಪಿಯೊಂದಿಗೆ ಸಹಯೋಗಗೊಂಡವು ಹಾಗೂ ತುರ್ತು ಪರಿಸ್ಥಿತಿಯ ನಂತರದ ಕೆಲ ಘಟನೆಗಳ ಪರಿಣಾಮವಾಗಿ ಎಬಿವಿಪಿಯ ಸದಸ್ಯತ್ವ ಹೆಚ್ಚಾಯಿತು.1974 ವೇಳೆಗೆ ಸರಿ ಸುಮಾರು 1,60,000 ಸದಸ್ಯರನ್ನು ಹೊಂದಿತ್ತು ಮತ್ತು ಚುನಾವಣೆಗಳ ಮೂಲಕ ದೆಹಲಿ ವಿಶ್ವವಿದ್ಯಾನಿಲಯ ಸೇರಿದಂತೆ ಹಲವು ಪ್ರಮುಖ ವಿಶ್ವವಿದ್ಯಾನಿಲಯಗಳಲ್ಲಿ ತನ್ನ ಹಿಡಿತವನ್ನು ಸಾಧಿಸಿತ್ತು..

ಪ್ರಸ್ತುತ ಭಾರತದಾಡ್ಯಂತ ಶಾಖೆಗಳನ್ನು ಹೊಂದಿರುವ ಎಬಿವಿಪಿ ಯು ರಾಷ್ಟ್ರ ಭಕ್ತಿಯ ಕಾರ್ಯಕ್ರಮಗಳು, ಸಾಮಾಜಿಕ ಕಾರ್ಯಗಳು, ಸಮಸ್ಯೆಗಳ ವಿರುದ್ಧ ಹೋರಾಟಗಳ ಮೂಲಕ ಸಮಾಜದಲ್ಲಿ ತನ್ನದೇ ಆದ ಪಾತ್ರವನ್ನು ನಿರ್ವಹಿಸುತ್ತಿದೆ…

ಎಬಿವಿಪಿಯ ಹೋರಾಟಗಳು

ಎಬಿವಿಪಿಯನ್ನು ಸಮಾಜ ಗುರುತಿಸಿರುವುದೇ ಹೋರಾಟಗಳ ಮೂಲಕ. ಶಾಲಾ ಕಾಲೇಜುಗಳ ಅವ್ಯವಸ್ಥೆ, ವಿಶ್ವವಿದ್ಯಾನಿಲಯಗಳ ಭ್ರಷ್ಟಾಚಾರ ಇಂತಹವುಗಳ ವಿರುದ್ಧ ಹೋರಾಟ ಹಾಗೂ ಶೈಕ್ಷಣಿಕ ಸೌಲಭ್ಯಗಳಿಗೆ ಆಗ್ರಹ, ವಿವಿಧ ಶೈಕ್ಷಣಿಕ ಪ್ರಶ್ನೆಗಳ ಮೇಲೆ ವಿಷಯಗಳ ಸಮನ್ವಯದ ವಿಚಾರವನ್ನು ಕೃತಿಗೆ ತರಲು ಆಗ್ರಹ ಮೊದಲಾದವುಗಳನ್ನು ಕಾಣಬಹುದು. ವರ್ಷಗಳ ಹಿಂದೆ ಕೊಡಗು ಜಿಲ್ಲೆಯಲ್ಲಿ ಯೋಧ & ಅವರ ಕುಟುಂಬದವರ ಮೇಲಿನ ಹಲ್ಲೆಯನ್ನು ಖಂಡಿಸಿ ಪರಿವಾರ ಸಂಘಟನೆಗಳೊಂದಿಗೆ ನಡೆಸಿದ ಹೋರಾಟ ಹಾಗೂ ಇತ್ತೀಚಿಗೆ ಇಡೀ ರಾಜ್ಯಾಧ್ಯಂತ ಬಸ್ ಪಾಸ್ ಅವಧಿ ವಿಸ್ತರಣೆಗೆ ಆಗ್ರಹಿಸಿ ನಡೆಸಿದ ಹೋರಾಟಗಳನ್ನು ಸ್ಮರಿಸಿಕೊಳ್ಳಬಹುದು…

ಇದಿಷ್ಟು ಮಾತ್ರವಲ್ಲದೇ ವಿದ್ಯಾರ್ಥಿಗಳ ಒಳಿತಿಗಾಗಿ ಎಬಿವಿಪಿ ನಿರಂತರವಾಗಿ ಶ್ರಮಿಸುತ್ತಾ ವೈದ್ಯಕೀಯ, ಆಯುರ್ವೇದ, ಡೆಂಟಲ್, ಹೋಮಿಯೋಪತಿ, ಫಾರ್ಮಸಿ, ಮ್ಯಾನೇಜ್ಮೆಂಟ್, ಕಾನೂನು ಮುಂತಾದ ವಿದ್ಯಾರ್ಥಿಗಳ ನಡುವೆ ಕಾರ್ಯದ ಆರಂಭ ಮತ್ತೂ ದೃಡೀಕರಣ, ದೃಶ್ಯಕಲಾ ವಿದ್ಯಾರ್ಥಿಗಳಿಗಾಗಿ Art Matters ಕಾರ್ಯಕ್ರಮಗಳು, ಎಸ್. ಎಫ್. ಡಿ (student For Development) ಮೂಲಕ ವಿಕಾಸ, ಅಭಿವೃದ್ಧಿ ಕುರಿತ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಿಗೆ ಉಪಯುಕ್ತ ತರಬೇತಿ ನೀಡುವ ಪ್ರಯತ್ನ ಮಾಡುತ್ತಿದೆ…

ಕೊರೊನದಂತಹ ಸಮಯದಲ್ಲಿ ರಾಜ್ಯವು ಓಕ್ಸಿಜನ್ ಕೊರತೆ ಎದುರಾದಗ ಭವಿಷ್ಯದಲ್ಲಿ ಭಾರತ ಇಂತಹ ಸಮಸ್ಯೆ ಎದುರಿಸ ಬಾರದು ಎಂಬ ದೃಷ್ಟಿಕೋನದಲ್ಲಿ ರಾಜ್ಯಾಧ್ಯಂತ ಶಾಖೆಗಳಲ್ಲಿ ಗಿಡ ನೆಡುವ, ಸೀಡ್ ಬಾಲ್ ಗಳ ಬಳಕೆಗಳ ಮೂಲಕ ಯಶಶ್ವಿ ಕಾರ್ಯಕ್ರಮಗಳನ್ನು ರೂಪಿಸಿ ಲಕ್ಷಗಳಿಗೂ ಅಧಿಕ ಗಿಡ ನೆಟ್ಟು ಸಾಮಾಜಿಕ ವಲಯಗಳಲ್ಲಿ ಪ್ರಶಂಸೆಗೆ ಪಾತ್ರವಾಯಿತು. ಇದರ ಮುಂದುವರಿದ ಭಾಗವಾಗಿ ಈ ವರ್ಷ ವಿಶ್ವ ಪರಿಸರ ದಿನದ ಅಂಗವಾಗಿ ವೃಕ್ಷಮಿತ್ರ ಅಭಿಯಾನ ನಡೆಸಿ, ಗಿಡ ನೆಡುವ ಕಾರ್ಯಕ್ರಮವನ್ನು ಯಶಶ್ವಿಗೊಳಿಸಲಾಯಿತು…

ಹೀಗೆ ಸಾಮಾಜಿಕ ವಲಯಗಳಲ್ಲಿ ವಿದ್ಯಾರ್ಥಿಗಳ ಮೂಲಕ ಸೇವಾ ಕಾರ್ಯ ನಡೆಸುತ್ತಾ, ಅನ್ಯಾಯಗಳ ವಿರುದ್ಧ ಹೋರಾಡುತ್ತಾ, ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವನ್ನು ಬೆಳೆಸುತ್ತಾ, ರಾಷ್ಟ್ರ ಭಕ್ತಿಯ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುತ್ತಾ, ವಿದ್ಯಾರ್ಥಿ ಶಕ್ತಿ ರಾಷ್ಟ್ರ ಶಕ್ತಿ ಎಂದು ನಂಬಿರುವ ಹಾಗೂ ಜ್ಞಾನ, ಶೀಲ, ಏಕತೆಯ ಧ್ಯೇಯಗಳೊಂದಿಗೆ ಮುನ್ನಡೆಯುತ್ತಿರುವ ವಿದ್ಯಾರ್ಥಿ ಸಂಘಟನೆ ಇಂದು ತನ್ನ 74ನೆಯ ಸ್ಥಾಪನ ದಿನವನ್ನು ಆಚರಿಸಿಕೊಳ್ಳುತಿದೆ.

ಸಮಸ್ತ ವಿದ್ಯಾರ್ಥಿ ಕಾರ್ಯಕರ್ತರಿಗೂ ವಿದ್ಯಾರ್ಥಿ ಪರಿಷತ್ ಸ್ಥಾಪನ ದಿನ ಹಾಗೂ ರಾಷ್ಟ್ರೀಯ ವಿದ್ಯಾರ್ಥಿ ದಿನದ ಶುಭಾಶಯಗಳು

error: Content is protected !!
satta king chart