ಸದ್ಯದಲ್ಲೇ ಖಾದ್ಯ ತೈಲ ಬೆಲೆ ಇಳಿಕೆ ಸಾಧ್ಯತೆ
ಸದ್ಯದಲ್ಲೇ ಅಡುಗೆ ಎಣ್ಣೆ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಸುಳಿವು ನೀಡಿದೆ. ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ ಇಷ್ಟರಲ್ಲೇ ಸ್ವಲ್ಪ ಮಟ್ಟಿನ ನಿರಾಳತೆ ಸಿಗಲಿದೆ.
ಲೀಟರ್ಗೆ 15 ರೂ.ನಷ್ಟು ಇಳಿಕೆಯಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಕೇಂದ್ರ ಚಿಂತನೆ ನಡೆಸಿದ್ದು, ಜುಲೈ 6 ರಂದು ತೈಲ ಸಂಘಗಳಿಗೆ ಬೆಲೆ ಇಳಿಕೆ ಮಾಡುವಂತೆ ಸೂಚನೆ ನೀಡಲಾಗಿದೆ.
ಅಡುಗೆ ಎಣ್ಣೆಯಲ್ಲಿ 15 ರೂ. ಇಳಿಕೆ ಮಾಡಲು ಹೇಳಲಾಗಿದ್ದು, ಸದ್ಯದಲ್ಲೇ ಇದನ್ನು ಜಾರಿಗೊಳಿಸಲಾಗುವುದು ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ಸಚಿವಾಲಯ ಹೇಳಿದೆ.
ಖಾದ್ಯ ತೈಲಗಳ ಬೆಲೆಗಳನ್ನು ತಕ್ಷಣವೇ ಕಡಿಮೆ ಮಾಡಬೇಕು, ತಯಾರಕರು ಮತ್ತು ಸಂಸ್ಕರಣಾಗಾರರಿಂದ ವಿತರಕರಿಗೆ ಕಡಿಮೆ ಬೆಲೆಯಲ್ಲಿ ನೀಡಿದಾಗ ಮಾತ್ರ ಸಗಟು ಮಾರಾಟದಲ್ಲೂ ಸಹ ಇಳಿಕೆ ಮಾಡಬಹುದು. ಈ ಕುರಿತು ಇಲಾಖೆಗೆ ಮಾಹಿತಿಯನ್ನು ನೀಡಬೇಕೆಂದೂ ಸಚಿವಾಲಯ ತಿಳಿಸಿದೆ.
ಈ ಹಿಂದೆ ಬೆಲೆಯನ್ನು ಕಡಿಮೆ ಮಾಡದ ಪ್ರಮುಖ ತೈಲ ಉತ್ಪಾದಕರೂ ಕೂಡ ತಮ್ಮ ಬೆಲೆಗಳನ್ನು ಕಡಿತಗೊಳಿಸಲೇಬೇಕೆಂದು ಎಚ್ಚರಿಕೆಯನ್ನೂ ನೀಡಿದೆ.