fbpx

ಚಾಕೊಲೆಟ್ ಫಿಲ್ಲಿಂಗ್ ಗುಲಾಬ್ ಜಾಮೂನ್


ಬೇಕಾಗುವ ಪದಾರ್ಥಗಳು:
ರೆಡಿ ಗುಲಾಬ್ ಜಾಮೂನ್ ಮಿಶ್ರಣ – 175 gm
ಹಾಲು-1/4 ಲೋಟ
ಸಕ್ಕರೆ-2 ಕಪ್
ಏಲಕ್ಕಿ ಪುಡಿ-1tsp
ಚಾಕೋ ಚಿಪ್ಸ್ (choco chips) -25gms
ನೀರು-2ಕಪ್
ಎಣ್ಣೆ ಕರಿಯಲು
ಬಾದಾಮಿ (ಸಣ್ಣದಾಗಿ ಹೆಚ್ಚಿದ್ದು)

ಮಾಡುವ ವಿಧಾನ:

ಸಕ್ಕರೆ ಪಾಕ: 2ಕಪ್ ಸಕ್ಕರೆಗೆ 2ಕಪ್ ನೀರು ಸೇರಿಸಿ 5 ನಿಮಿಷ ಕುದಿಸಿ ಕೊನೆಗೆ ಏಲಕ್ಕಿ ಪುಡಿ ಹಾಕಿ.

ಮೊದಲು ರೆಡಿ ಗುಲಾಬ್ ಜಾಮೂನ್ ಪುಡಿಗೆ ಸ್ವಲ್ಪ ಬೆಚ್ಚಗಿನ ಹಾಲು ಹಾಕಿ ಮೃದುವಾಗಿ ಕಲಸಿಡಿ. 5 ನಿಮಿಷ ಬಿಟ್ಟು ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಿ (ಕೈಗೆ ಎಣ್ಣೆ ಅಥವಾ ತುಪ್ಪ ಸವರಿಕೊಂಡು). ಉಂಡೆ ಸ್ವಲ್ಪ ಚಪ್ಪಟೆ ಮಾಡಿ 3 ರಿಂದ 4 ಚಾಕೋಚಿಪ್ಸ್ ಮದ್ಯದಲ್ಲಿ ಬರುವ ಹಾಗೆ ಇಟ್ಟು ಮತ್ತೆ ಉಂಡೆ ಮಾಡಿ. ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿದು ಸಕ್ಕರೆ ಪಾಕಕ್ಕೆ ಹಾಕಿ. ನಂತರ ಅದರ ಮೇಲೆ ಸಣ್ಣದಾಗಿ ಹೆಚ್ಚಿದ ಬಾದಾಮಿ ಚೂರುಗಳಿಂದ ಅಲಂಕರಿಸಿ.

ಸುಮಾ ಸುಂದರೇಶ್
error: Content is protected !!