ಎಲ್ಲಿಗೆ ಬಂದು ನಿಂತಿತು ಭಾರತದ ಘನತೆ…!
ಇದೇನಾ ಸಭ್ಯತೆ…ಇದೇನಾ ಸಂಸ್ಕೃತಿ…!
ಕೇಂದ್ರ ಸರಕಾರ ಜಾರಿಗೆ ತಂದ ರೈತ ಮಸೂದೆಗಳನ್ನು ವಿರೋಧಿಸಿ ಇಂದು ಗಣರಾಜ್ಯೋತ್ಸವದಂದು ರೈತರು ದೆಹೆಲಿಗೆ ಪ್ರತಿಭಟನಾ Rally ಹಮ್ಮಿಕೊಂಡಿದ್ದರು. ಕಾರ್ಮಿಕ ಸಂಘಟನೆಗಳು ಅದರ ಕಾರ್ಯಕರ್ತರಿಂದ ಇದನ್ನು ಶಾಂತಿಯುತವಾಗಿ ನಡೆಸಲು ಒಪ್ಪಿಗೆ ಆಗಿ ಅನುಮತಿ ನೀಡಲಾಗಿತ್ತು.
ಆದರೆ ದೆಹೆಲಿಯ ತುಂಬಾ ರೈತ ಸಂಘಟನೆಗಳ ಸದಸ್ಯರು ಸೇರಿ ಕೆಂಪು ಕೋಟೆಯ ಆವರಣಕ್ಕೆ ಧಾವಿಸಿ, ನುಗ್ಗಿದರು. ನುಗ್ಗಿ ಅನಾಗರಿಕರಂತೆ ವರ್ತಿಸಿದರು. ಪ್ರಧಾನಿ ಹಾರಿಸಿದ ತ್ರಿವರ್ಣ ಧ್ವಜ ಸ್ತಂಭದಲ್ಲಿ ಅವರ ಸಂಘಟನೆಯ, ಖಲಿಸ್ತಾನದ ಉದ್ದೇಶಿತ ಧ್ವಜವನ್ನು ಹಾರಿಸಿದರು. ಕೆಂಪು ಕೋಟೆಯ ಗೋಪುರದ ಮೇಲೂ ಹತ್ತಿ ಖಲಿಸ್ತಾನದ ಧ್ವಜ ಹಾರಿಸಿದರು. ಇದು ಮಹಾನ್ ದೇಶ ದ್ರೋಹ. ಇಂತಹ ರಾಜಕೀಯ ಲಾಭದ ದುರುದ್ದೇಶಿತ ಪ್ರತಿಭಟನೆಗಳಿಗೆ ಅನುಮತಿಗಳನ್ನೇ ನೀಡಬಾರದಿತ್ತು. ದೆಹೆಲಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹರಸಾಹಸವನ್ನು ಮಾಡುತ್ತಿದ್ದಾರೆ. ಅಶ್ರುವಾಯು, ಲಾಠಿ ಚಾಜ್೯ ಅನ್ನು ಮಾಡಬೇಕಾದ ಅನಿವಾರ್ಯತೆ ಉಂಟಾಯಿತು.
ಐತಿಹಾಸಿಕ ದಿನದಂದು ಇದು ನಮ್ಮ ದೇಶದ ಘನತೆಗೆ ಚ್ಯುತಿಯನ್ನು ಉಂಟು ಮಾಡಿದೆ. ಕಾನೂನು ಸುವ್ಯವಸ್ಥೆಗೆ ಈ ಪರಿಯ ಧಕ್ಕೆ ಉಂಟಾಗಿರುವುದು ನಿಜಕ್ಕೂ ನಾಚಿಕೆಗೇಡು. ಈ ಪ್ರತಿಭಟನಾ Rallyಯನ್ನು ಆಯೋಜನೆ ಮಾಡಿದ ಸಂಘಟನೆಗಳಿಂದಲೇ ಇದರಿಂದ ಆದ ನಷ್ಟವನ್ನು ಭರಿಸುವಂತಾಗಬೇಕು. ಹಿಂಸಾತ್ಮಕ ಕೃತ್ಯಗಳನ್ನು ಎಸಗಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡಬೇಕು.