fbpx

ಉಳ್ಸುನೋ‌ ಬನ್ನಿ ಅಂತರ್ಜಲ..

✍🏻ವಿನೋದ್ ಮೂಡಗದ್ದೆ

ಈ ತಲೆ ಬರಹನ ನೀವೆಲ್ಲ ಬಾಳಷ್ಟ್ ಕಡೆ ನೋಡಿರುವರಿ, ಕೇಳಿರುವರಿ. ಆದರೆ ನೋಡ್ದ, ಕೇಳ್ದ ಈ ಸಾಲ್’ಗಳ ಅನ್ಸರ್ಸಿಕಂಡ್ ಹೋಗ್ತಾ ಇರವ್ ಎಷ್ಟ್ ಜನ?

ಹೇಳಿಕೇಳಿ ಕೊಡಗು ಕೃಷಿ ಪ್ರಧಾನ ಜಿಲ್ಲೆ, ಕನ್ನಡ ನಾಡ್’ನ ದಾಹ ತೀರ್’ಸೋ ಕಾವೇರಿ ಮಾತೆ ಇಲ್ಲಿ ಹುಟ್ಟಿರೂ, ಕಾವೇರಿ ನೀರ್ ಕುಡಿವ ಪುಣ್ಯ ಹೆಚ್ಚಿನವ್ಕೆ ಇಲ್ಲೆ. ಮನೆ ಸುತ್ತಮುತ್ತಲ್’ನ ಬೆಟ್ಟಗುಡ್ಡೆಗಳ್ಂದ ಬರುವ ಕೊಲ್ಲಿ ನೀರ್, ತೋಟ ಗದ್ದೆ ನಡುಲಿ ಹರಿವ ತೋಡ್, ಹೊಳೆ. ಮನೆ ಜಾಲ್’ಲಿ ಇರುವ ಬಾಮಿ ನೀರ್, ಹಿಂಗೆ ನೀರಡಿಕೆನ ಹೋಗ್ಸಿಕೆ ಬೇಕಷ್ಟ್ ಮೂಲಗ ಉಟ್ಟು. ಕೊಳವೆ ಬಾಮಿಗ ಈಗೀಗ ಹೆಚ್ಚಾಗ್ತಾ ಉಟ್ಟು. ಅಂರ್ತಜಲನ ಹೀರಿ ಖಾಲಿ ಮಾಡ್ತಾ ಉಟ್ಟು.

ಇತ್ತೀಚೆಗೆನ ಒಂದು ಸಂಶೋಧನೆ ಹೇಳುವಂಗೆ ಅಂತರ್ಜಲ ನೀರ್’ನ ಮಟ್ಟ ೭೦೦ ಅಡಿಗಳಷ್ಟ್ ಆಳಕ್ಕೆ ಹೋವ್ಟು ಗಡ‌. ಹಂಗೆ ಬಾಮಿಲಿ ಹೋಗಲಿ, ಕೊಳವೆ ಬಾವಿಲೂ ನೀರ್ ಸಿಕ್ಕದ ಪರಿಸ್ಥಿತಿ‌ ಬಂದುಟು. ನೂರು ಇನ್ನೂರು ಅಡಿಲಿ ಸಿಗ್ತಾ ಇದ್ದ ನೀರ್ ಇಂದ್ ಸಾವಿರ ಅಡಿ ಮುಟ್ಟ ಕೊರ್ದರೂ ಹನಿ ನೀರ್’ನ ಪಸೆ ಕಾಂಬೊದ್ಲೆ.

ಆದ್ರೂ ಜನಂಗ ಬುಡದೆ ಒಂದ್ ಎರಡ್ ಮೂರ್ ತ ಲೆಕ್ಕ ಇಲ್ಲದೆ ಕೊಳವೆ ಬಾಮಿನ ತೆಗಿತನೇ ಒಳೊ. ಸರಕಾರ ಇದಕ್ಕೆ ನಿಯಮ ಮಾಡಿರೂ ಕ್ಯಾರೆ ಹೇಳದೆ ಅಲ್ಲಲ್ಲಿ ಕಂಡಕಂಡ ಕಡೆ ಕೊಳವೆ ಬಾವಿಗ ತಲೆಎತ್ತ್’ತಾ ಉಟ್ಟು.

ಸರಕಾರ ೨೦೧೨ ಲಿ ಅಂತರ್ಜಲ ಪ್ರಾಧಿಕಾರನ ಸ್ಥಾಪನೆ ಮಾಡುಟು. ಅದರಂಗೆ ಪ್ರತಿ ಕೊಳವೆ ಬಾಮಿನೂ ನೋಂದಣಿ‌ ಮಾಡಿಕಣಕು. ಆದ್ರೆ ಈ ಕಾನೂನು ಅಷ್ಟ್ ಪರಿಣಾಮಕಾರಿ ಆತ್ಲೆ. ಈಗ ಇದಕ್ಕೆ‌ ಇರುವ ಉಪಾಯ ತೇಳ್ರೆ ನಾವುಗ ಹಂಞ ಗಮನ ಕೊಡೊಕು.

ಬಾಳಷ್ಟ್ ಜನಕ್ಕೆ ಏನಿಲ್ಲೆ ಹೇಳ್ರು ಹಂಞ ಆದರೂ ಜಾಗೆ ಉಟ್ಟೇ ಉಟ್ಟು‌. ಜಾಗೆ ಇಲ್ಲರೂ ಸ್ವಂತ ಮನೆ ಆದರೂ ಇದ್ದೇ ಇದ್ದದೆ. ಇಂತ ಕಡೆ ನಾವ್ ಮಳೆ ನೀರ್ ಕೊಯ್ಲ್ ನ ಮಾಡ್ರೆ ಅಂತರ್ಜಲದ ಮಟ್ಟ ತನ್ನಿಂತಾನೆ ಏರಿಕೆ ಆದೆ‌.

ಯಾರ್ ಏನ್ ಇದ್ಕೆ ದುಡ್ಡು ಖರ್ಚು ಮಾಡಕುತನೂ ಇಲ್ಲೆ. ಇರುವ ಜಾಗೆಲಿ‌ ಒಂದಷ್ಟ್ ಇಂಗು ಗುಂಡಿಗಳ ಮಾಡಿರೆ ಸಾಕ್. ಮಳೆ‌ ನೀರ್ ಆ ಗುಂಡಿಗಳ್ಲಿ‌ ನಿತ್ತ್ ಮೊಣ್ಣೊಳಗೆ ಇಂಗಿ‌ ಹೋದೆ.

ಇಷ್ಟ್ ಮಾಡ್ರೂ ಸಾಕ್, ಅದೆಷ್ಟೋ‌ ಶೇಖಡ ಅಂತರ್ಜಲ‌ ಮಟ್ಟ ಹೆಚ್ಚಾದೆ. ಕೆಲವ್ ತೋಟಗಳ್ಲಿ ನೀರ್ ನಿಲ್ಲಿಕಾದ್‌ತ ಲಾಯ್ಕ ಕಣಿ‌ ಕಡ್ದ್‌ ನೀರ್ ತೋಡು ಹೊಳೆ‌ ಸೇರುವಂಗೆ ಮಾಡುವೆ. ಅದ್ ಕಡೆಗೆ ಸಮುದ್ರ ಸೇರ್ದೆ ಅಷ್ಟೆ. ನಮ್ಮ ಜಾಗೆಲಿ ನೀರ್ ನ ಅಂಶ ಹೆಚ್ಚಾಕು ತ ಹೇಳ್ರೆ ಇಂಗು ಗುಂಡಿಗ ಅವಶ್ಯ‌..

ಇಂದ್ ಜನಸಂಖ್ಯೆ ದಿನೇ ದಿನೇ ಹೆಚ್ಚಾಕಂಡ್ ಹೋಗ್ತಾ ಉಟ್ಟು, ಹವಮಾನಲಿ ಏರ್ ಪೇರ್ ಸ ಆಗ್ತಾ ಉಟ್ಟು. ಬೇಸಗೆ ಬಾತ್ ಹೇಳ್ರೆ ಪೇಟೆನ ಜನ ಕುಡಿವ ನೀರ್’ಗೆ ಪರ್ದಾಡಿಕಂಡ್ ಇರ್ದರ್ನ ನೋಡ್ತಾ ಒಳೊ. ಆದರೂ ನಾವು ಯಾಕೆ ಇನ್ನ್ ಇದರ ಬಗ್ಗೆ ಹಂಞ ಸ ಗಮನ ಕೊಡ್ತಾ ಇಲ್ಲೆ.

ತೋಟಗಳ್ಲಿ ಇಂಗು ಗುಂಡಿ ಮಾಡಿರೆ, ಮನೆಗಳ್ಲಿ ಮಾಡ್ಂದ ಇಳಿವ ನೀರ್’ನ ಡ್ರಮ್ಮುಗಳ್ಲಿ ತುಂಬಿಸಿ ಇಸಿಕಣಕ್ ಇಲ್ಲರೆ ಅದರ ಶುದ್ಧೀಕರಿಸಿ ಬಾಮಿಗೆ ಬುಡಕ್‌. ಆಗ‌ ಬಾಮಿ ನೀರ್’ನ ಮಟ್ಟ ಸ ಹೆಚ್ಚಾದೆ.

ಲಕ್ಷ ಲಕ್ಷ ಖರ್ಚ್ ಮಾಡಿ ಸಾವಿರಾರ್ ಅಡಿ ಆಳಕೆ ಕೊಳವೆ ಬಾಮಿ ಕೊರ್ಸುವ ಬದ್ಲ್ ಸಾವಿರ ರುಪಾಯಿಲೇ ನಮ್ಮ ಜಾಲ್ ಲಿ‌ ನೀರ್ ಇಂಗಿಸಿರೆ ನಾವ್ಗೂ ನಮ್ಮ ಮುಂದೆನ ಪೀಳಿಗೆಗೂ ಅಂತರ್ಜಲ ಅಳಿಯದೇ ಇದ್ದದೆ‌.

✍🏻ವಿನೋದ್ ಮೂಡಗದ್ದೆ

error: Content is protected !!
satta king chart