ಆಟಿಸೊಪ್ಪುನ ವಿಶೇಷಮತ್ತೆ ಆಟಿ ಪಾಯಿಸ..

✍ಉಳುವಾರನ ರೋಶನ್ ವಸಂತ್,

ಕೊಡ್ಗ್ ಲ್ಲಿ ಆಟಿ ತಿಂಗ ಪಂಡ್ ಕಾಲಂದ ಇಂದ್ ನವರೆಗೂ ಒಂದು ವಿಶೇಷ ತಿಂಗ ಅಗಿ ಹೆಸ್ರ್ ಪಡ್ಕೊಂಟು .ಆಟಿ ಹದಿನೆಂಟ್ ತ ಹೇಳ್ರೆ ಆಗಸ್ಟ್ ತಿಂಗಳ ಮೂರನೇ ತಾರೀಖ್ ಅಂದ್ ಪಾಯಿಸ ಮಾಡಿ ಉಬ್ಬುವ ಕ್ರಮ ಪಂಡ್ಂದ ಬಂದ ರೂಡಿಯಾಟ್ಟು. ಕೊಡ್ಗ್ ಲ್ಲಿ ಮಳೆಗಾಲ ಸುರು ಅದ್ದಲಿಂದ ಜೂನ್ ತಿಂಗಳ್ಂದ ಸಿಕ್ಕುವ ಮತ್ತೆ ನಾವು ಬಳ್ಸುವ ಕಣಲೆ, ಮರಕೆಸ, ಏಸೆಂಡ್, ಅಳ್ಂಬುನೊಟ್ಟಿಗೆ ಆಟಿಸೊಪ್ಪು ಸಹ ವಿಶೇಷತೆನ ಪಡ್ಕಂಡ ಒಂದು ವಿಶೇಷ ವಸ್ತು ಅಟ್ಟು.

ಆಟಿ ಹದಿನೆಂಟ್ ರಂದ್ ಇ ಸೊಪ್ಪುನ ಗಂಟ್ ಗಳ್ಲಿ ಹದಿನೆಂಟ್ ತರದ ಆಯುರ್ವೇದ ಮೊದ್ದ್ ಗ ತುಂಬಿದದ್ದೇತ ಹೇಳುವ ಹಿರಿಯವರ ನಂಬಿಕೆನ ಪ್ರಕಾರ ಆ ಸೊಪ್ಪುನ ರಸಂದ ಪಾಯಿಸ ಮಾಡಿ ಉಂಬ ಕ್ರಮ ಉಟ್ಟು. ಅದರ್ಂದ ಕೊಡ್ಗ್ ಲ್ಲಿ ಆಟಿ ಹದಿನೆಂಟರಂದ್ ಹೆಂಗಾರ್ ಮಾಡಿ ಎಲ್ಲಿಂದರ್ ಈ ಸೊಪ್ಪುನ ತಂದ್ ಪಾಯಿಸ ಮಾಡಿವೆ. ಮಳೆ ಬಿದ್ದ ಮ್ಯಾಲೆ ಸುಮಾರಾಗಿ ಪಸೆ ಇರುವ ಜಾಗಗಳ್ಲಿ ಕೆರೆ, ತೋಡು, ಕೊಲ್ಲಿ, ಕಾಡ್ಗಳ್ಲಿ ನೀಲಿ ಗೋರಟೆ ಗಿಡದಂಗೆ ಅದೆ ಬಣ್ಣದಂಗೆ ಅದೆ ತರದ ರೂಪನ ಹೋಲುವ ಈ ಸೊಪ್ಪುನ ಗಿಡ ಸಿಕ್ಕಿದೆ. ಈ ಗಿಡಲ್ಲಿ ಅರ್ಧ ಅಡಿಗೊಂದು ನೀಲಿ ಗಂಟ್ ಗ ಇದದ್ದೆ.

ಆಟಿ ಹದಿನೆಂಟರ ದಿನ ಪೂರ್ತಿ ನೀಲಿ ನೇರಳೆ ಬಣ್ಣದಂಗೆ ಇರುವ ಆ ಸೊಪ್ಪುನ ವಾಸನೆಂದ ಈ ಗಿಡನ ಕಂಡ್ ಹಿಡಿಯಕ್ಕ್ . ಸೊಪ್ಪುನ ಹುಡ್ಕಿ ತಂದ್ ಲಾಯಿಕ ಮನ್ನಾರ ತೊಳ್ದ್ ಒಂದು ದೊಡ್ಡ ಪಾತ್ರೆಗೆ ಸೊಪ್ಪು ಮುಚ್ಚುವ ಮುಟ್ಟ ನೀರ್ ಹಾಕಿ ಸ್ವಲ್ಪ ಹೊತ್ತು ಬೇಯಿಸಿರೆ ನೀಲಿ ಬಣ್ಣದ ನೀರ್ ಘಮ, ಘಮತ ಬಂದದೆ. ಇಲ್ಲರೆ ಒಂದು ಪಾತ್ರೆಗೆ ಹಾಕಿ ಸುಮಾರ್ ಹೊತ್ತು ಮಾಡ್ಗಿರೆ ಅದ್ ಬಣ್ಣ ಬುಟ್ಟದೆ. ಅಲ್ಲಿಂದ ಬಣ್ಣ ಬುಟ್ಟ ನೀರ್ ನ ಅಕ್ಕಿ ಪಾಯಿಸ ಮಾಡುವಂಗೆ ಅದೇ ನೀರ್ ಲಿ ತೊಳ್ದ್ ಬೇಯಿಸೋಕು.

ಬೆಂದ ಮ್ಯಾಲೆ ಪಾಯಿಸಕ್ಕೆ ಹಾಕುವಂಗೆ ಎಲ್ಲ ಕ್ರಮನ ಮಾಡಿ ಒಂದು ಕಬ್ಬಿಣದ ವಸ್ತುನ ಬಿಸಿ ಮಾಡಿ ಹಾಕಿರೆ ಸೊಪ್ಪುಲ್ಲಿ ಏನರ್ ವಿಷ ಇದ್ದರೆ ಹೋದೆತ ಹೇಳುವ ನಂಬಿಕೆ ಉಟ್ಟು ಹಂಗೆ ಮಾಡಿವೆ . ಈ ಪಾಯಿಸದೊಟ್ಟಿಗೆ ರಸಬಾಳೆನ ಹಣ್ಣ್ ,ಹಸ್ ನ ತುಪ್ಪ , ಹಪ್ಪಳ , ಜೇನ್ ಸೇರ್ಸಿ ಮನೆಯವು ಎಲ್ಲಾ ಕೂಡಿಕಂಡ್ ಒಟ್ಟಿಗೆ ಕುದ್ದ್ ಕಂಡ್ ರಾತ್ರೆ ಪಾಯಿಸನ ಉಂಬದೇ ಆಟಿ ಸೊಪ್ಪು ಆಟಿ ಪಾಯಿಸದ ವಿಶೇಷ. ಪಾಯಿಸ ಉಂಡ್ ಸ್ವಲ್ಪ ಹೊತ್ತು ಮಲ್ಗಿರೆ ಆಯುರ್ವೇದ ಮೊದ್ದ್ ಮೈಗೆ ಲಾಯಿಕಗಿ ಹಿಡ್ದದದೆ. ರೈತರಿಗೆ ಮಳೆಗಾಲಲ್ಲಿ ಮಳೆ, ಚಳಿ, ಗಾಳಿಲ್ಲಿ ಕೆಲ್ಸ್ ಮಾಡಿ ಮೈ,ಕೈ ಬ್ಯಾನೆ ಇದ್ದರೆ ಪರಿಹಾರ ಅದೆ.

ಹಂಗೆ ಮಾರನೇ ದಿನ ಮೂತ್ರದ ಬಣ್ಣ ಕೆಂಪಗಿದದ್ದೆ. ಹಿಂಗೆ ಆಟಿಸೊಪ್ಪು ತನ್ನದೆ ಆದ ವಿಶೇಷತೆನ ಪಡ್ಕಂಡ್ ಬಂದುಟ್ಟು. ಆಟಿ ಹದಿನೆಂಟಕ್ಕೆ ಆಟಿ ಪಾಯಿಸದೊಟ್ಟಿಗೆ ವಿಶೇಷ ಊಟೋಪಚಾರನು ಇದ್ದದೆ.

✍ಉಳುವಾರನ ರೋಶನ್ ವಸಂತ್

error: Content is protected !!
satta king chart