fbpx

ಇರುವೆ ಸಾಮ್ರಾಜ್ಯ

ಸುದ್ದಿ- ಸರಸ್ಯ

ಗಿರಿಧರ್ ಕೊಂಪುಳೀರಾ

ಸಾಮಾನ್ಯವಾಗಿ ಮನೆಯಲ್ಲಿ,ಜಮೀನುಗಳಲ್ಲಿ ಸಾಲು ಸಾಲಾಗಿ ತನ್ನ ಕುಟುಂಬದೂಂದಿಗೆ ಸದಾ ಚಟುವಟಿಕೆಯಿಂದ ಓಡಾಡುವುದನ್ನು ನೋಡಿದ್ದೇವೆ. ನಮಗೆಲ್ಲಾ ಗೊತ್ತಿರುವ ಅವುಗಳು ಗೂಡು ಕಟ್ಟುವುದಕ್ಕೂ,ಆಹಾರ ಸಂಗ್ರಹಿಸುವುದಕ್ಕೆ ತೆರಳುತ್ತಿರಬುದೆಂದು ನಾವು ಊಹಿಸಿರುವುದಂತೂ ನಿಜ.ಆದರೆ ಅವುಗಳ ಗೂಡನ್ನು ಒಳಹೊಕ್ಕಿ ನೋಡಿದರೆ ಒಂದು ಸಾಮ್ರಾಜ್ಯವನ್ನೇ ಕಟ್ಟುವ ಗೂಡೊಂದನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಹೌದು ಇರುವುದು ಬ್ರೆಜಿ಼ಲ್ ದೇಶದ ಖಾಸಗಿ ಜಮೀನಿನಲ್ಲಿ.ಈ ಜಮೀನಿನ ರೈತ ಕೃಷಿ ಮಾಡುತ್ತಿದ್ದ ಸಂದರ್ಭ ಇರುವೆ ಗೂಡನ್ನು ಕೆಡವಲು ಮುಂದಾಗುತ್ತಾನೆ,ಆದರೆ ಅದರಲ್ಲಿ ಇರುವೆಗಳು ಇಲ್ಲದಿದ್ದರಿಂದ ಆ ಗೂಡನ್ನು ಹಾಗೆ ಬಿಡುತ್ತಾನೆ.ಇದೇ ಸಂದರ್ಭ ಇರುವೆಗಳ ಸಂಶೋಧನೆ ನಡೆಸುತ್ತಿದ್ದ ಪ್ರೋ.ಲೂಯಿಸಿ ಫೋರ್ಜಿ ಎಂಬುವವರಿಗೆ ಲೀಫ್ ಕಟ್ಟರ್ ಜಾತಿಯ ವಿಭಿನ್ನ ಬಗೆಯ ಇರುವೆ ಗೂಡಿನ ಬಗ್ಗೆ ತಿಳಿದು ಅದರ ಸಂಶೋಧನೆಗೆ ಮುಂದಾದಾಗ ಕಂಡು ಬಂದಿದ್ದು ಅಚ್ಚರಿ ಮೇಲೆ ಅಚ್ಚರಿ.

ಮೂದಲಿಗೆ ಗೂಡಿನ ಬಾಗಿಲ ಮೂಲಕ ಹತ್ತು ಟನ್ ಸಿಮೆಂಟ್ ತುಂಬಿಸಿ ಅದನ್ನು ಅಲ್ಲೇ ಗಟ್ಟಿಗೊಳಿಸಿ ಅದರ ಅಚ್ಚನ್ನು ಪಡೆದು ಸಂಶೋಧನೆ ಮಾಡಲು ಮುಂದಾಗುತ್ತಾರೆ.ಅದು ಪ್ರಯೋಜನ ವಾಗದಿದ್ದಾಗ ಗೂಡನ್ನು ತೆರೆಯುವ ಕೆಲಸಕ್ಕೆ ಮುಂದಾಗುತ್ತಾರೆ.

ಪಅಂದಾಜು 500 ಚದರ ಅಡಿ ಅಗಲ, 26 ಅಡಿ ಆಳ ಕೊರೆಯಲಾಗುತ್ತದೆ,ಈ ಗೂಡನ್ನು ತೆರೆಲು ಜೆಸಿಬಿಗಳನ್ನು ಬಳಸಲಾಗುತ್ತದೆ.ಇದರಿಂದ ಸಂಗ್ರವಾದ ಮಣ್ಣು ಒಂದು ಗುಡ್ಡವನ್ನೇ ನಿರ್ಮಿಸಿದೆ.

ಗೂಡಿನಲ್ಲಿ ಕಂಡದ್ದು: ಪ್ರೊ.ಲೂಯಿಸ್ ಫೋರ್ಜಿ ಹೇಳುವಂತೆ ಇರುವೆಗಳು ನಿಜಕ್ಕೂ ಶ್ರಮ ಜೀವಿಗಳು,ಇವುಗಳು ನಿರ್ಮಾಣದ ಗೂಡಿನ ಶ್ರಮ ಚೀನಾದ ಮಹಾ ಗೋಡೆಗೆ ಸಮಾ ಎಂದಿದ್ದಾರೆ.ಎರಡು ವಾರಗಳ ಕಾಲ ನಡೆದ ಗೂಡನ್ನು ತೆರೆಯುವಲ್ಲಿ ಯಶಸ್ವಿಯಾದರು. ಬಳಿಕ ಕಂಡು ಬಂದ್ದು ಇರುವೆಗಳ ಹೆದ್ದಾರಿ,ಸಂಚಾರಿ ರಸ್ತೆ, ಇದರ ಉದ್ದ ಬರೋಬ್ಬರಿ 50 ಕಲೋಮೀಟರ್ ನಷ್ಟಿತ್ತು ಅಂದರೆ ನಂಬಲು ಅಸಾಧ್ಯ.ಆಹಾರ ಸಂಗ್ರ ಮಾಡಲು ಗೋದಾಮು,ಗಾಳಿ ಬೆಳಕಿನ ವ್ಯವಸ್ತೆ,ಅಣಬೆ ಮಾದರಿಯಲ್ಲಿ ಪುಟ್ಟ ಗೂಡುಗಳು. ಹೌದು ಈ ಗೂಡು ಮುಂದಿನ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಲ್ಪಡಲಿದೆ. ಪುರಾತತ್ವ ಇಲಾಖೆ ಇದರ ಮೇಲ್ವಿಚಾರಣೆ ನಡೆಸುತ್ತಿದೆ.ಇದರ ಸಂರಕ್ಷಣೆಗೆ ಬ್ರೆಸಿಲ್ ಸರ್ಕಾರ ನಿರ್ಧರಿಸಿದೆ.ಅಂದು ರೈತ ಇರುವೆ ಗೂಡನ್ನು ಕೆಡವಿದ್ದರೆ,ಇಂದು ನಮ್ಮೆಲ್ಲಿರಿಗೆ ಇರುವ ಸಾಮ್ರಾಜ್ಯದ ಬಗ್ಗೆ ಗೊತ್ತೇ ಇರುತ್ತಿರಲಿಲ್ಲ ಅಲ್ಲವೇ.

error: Content is protected !!