ಹುಲಿ ವಾಚರ್

ಅಂಕಣ: ವನ್ಯ-ಅನನ್ಯ

ಕೊಂಪುಳೀರ ಗಿರಿಧರ್

ಈತ ಮೃಗಗಳಿರುವ ದಟ್ಟಾರಣ್ಯದಲ್ಲಿ ಒಬ್ಬನೇ ಓಡಾಡಬಲ್ಲ,ಎದುರಿಗೆ ಹುಲಿ ಬಂದರೂ ಈತನಿಗೆ ಹೆದರಿಕೆಯೇ ಇಲ್ಲ,ವನ್ಯಜೀವಿ ಛಾಯಾಗ್ರಾಹಕರಿಗೆ,ಸಂಶೋಧಕರಿಗೆ ಈತನೇ ಅಚ್ಚುಮೆಚ್ಚಿನ ಗೈಡ್. ಹೌದು ಇಂತಹಾ ಒಬ್ಬ ಅಪರೂಪದ ವ್ಯಕ್ತಿ ನಮ್ಮ ನೆರೆಯ ರಾಜ್ಯ ಕೇರಳದಲ್ಲಿದ್ದಾರೆ. ಈ ಅಪರೂಪದ ವ್ಯಕ್ತಿ ಇಂದಿನ ಅಂಕಣದಲ್ಲಿ ಪರಿಚಯ ಮಾಡಿಕೊಡುತ್ತೇನೆ.

ಇವರ ಹೆಸರು ಶ್ರೀನಿವಾಸನ್ ಕೇರಳದ ಮಲಸರ್ ಬುಡಕಟ್ಟು ಜನಾಂಗಕ್ಕೆ ಸೇರಿದವರು, 38 ವರ್ಷದ ಇವರು ಕಳೆದ ಇಪ್ಪತ್ತು ವರ್ಷಗಳಿಂದ ಪರಂಬಿಕಿಲುಮ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಬ್ಬ ಸಮಾನ್ಯ ವಾಚರ್. ಈ ರೀತಿಯ ಅರಣ್ಯ ಸಿಬ್ಬಂದಿಗಳು ಸಾಕಷ್ಟು ಮಂದಿ ಇದ್ದಾರೆ ಆದರೆ ಇವರಲ್ಲಿ ಒಂದು ವಿಶೇಷವಿದೆ.ಇವರನ್ನು ಕಂಡರೆ ಹುಲಿಗಳಿಗೆ ಅದ್ಯಾಕೋ ಭಯನೋ ,ಗೌರವನೋ ಗೊತ್ತಿಲ್ಲ ಎಂಥಹಾ ಹುಲಿ ಇವರ ಮುಂದೆ ಪ್ರತ್ಯಕ್ಷವಾದರೆ ಯಾವುದೇ ಹಾನಿ ಮಾಡುವುದಿಲ್ಲವಂತೆ.ಇದು ಅಚ್ಚರಿ ಆದರೂ ಸತ್ಯ..!

ಟೈಗರ್ ಟ್ರ್ಯಾಪ್ ಕ್ಯಾಮರಾದ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವುದು

ಅರಣ್ಯ ಇಲಾಖೆಯಲ್ಲಿ ಮಾವುತರಾಗಿದ್ದ ಇವರ ತಂದೆ ಕರುಪ್ಪನ್ ಅಕಾಲಿಕ ಮರಣ ಹೊಂದಿದ ನಂತರ ಐದನೇ ತರಗತಿ ಓದಿ ಶಾಲೆ ಬಿಟ್ಟು ಅದೇ ಕಾಡಿನಲ್ಲಿ ವಾಸವಿದ್ದ ಶ್ರೀನಿವಾಸ್ ಗೆ ಸಣ್ಣದೊಂದು ಕೆಲಸ ಸಿಕ್ಕಿತ್ತು,ಅದಾಗ ತಾನೆ ಮದುವೆಯಾಗಿದ್ದ ಶ್ರೀನಿವಾಸನ್ ಕಾಡಿನಲ್ಲಿ ಬೀಟ್ ತೆರಳುತ್ತಿದ್ದ ಸಂದರ್ಭ ಏಕಾಏಕಿ ಮೂರು ಮರಿಗಳೊಂದಿಗೆ ಹುಲಿ ಕೇವಲ ಮೂರು ಮೀಟರ್ ಅಂತರದಲ್ಲಿ ಎದುರಾಯ್ತಂತೆ,ಮನೆಯವರ ನೆನಪಾಯಿತು,ದೇವರನ್ನು ಬೇಡಿಕೊಂಡಾಯ್ತು.. ಅಚಾನಕ್ಕಾಗಿ ಈ ಬಡಕಲು ಶ್ರೀನಿವಾಸನ್ ಗೆ ಏನೂ ತೊಂದರೆ ಕೊಡದ ತಾಯಿ ಹುಲಿ ಕಾಡಿನೊಳಗೆ ಕಣ್ಮರೆಯಾಯಿತಂತೆ. ಇದು ನಡೆದು 15 ವರ್ಷಗಳು ಕಳೆದರೂ ಇಲ್ಲಿವರೆಗೆ ಯಾವುದೇ ದಾಳಿ ಮಾಡುವುದಾಗಲಿ,ಭಯ ಹುಟ್ಟಿಸುವುದಂತೂ ಮಾಡಿಲ್ಲ. ಇದನ್ನು ಸ್ವತಃ ಈತನ ಸಿಬ್ಬಂಧಿಗಳು,ಹಿರಿಯ ಅಧಿಕಾರಿಗಳು,ವನ್ಯಜೀವಿ ಛಾಯಗ್ರಾಹಕರಃ ಒಪ್ಪಿಕೊಳ್ಳುತ್ತಾರೆ.

ಒಮ್ಮೆ ಒಬ್ಬ ವನ್ಯ ಜೀವಿ ಛಾಯಗ್ರಾಹಕರು ದಟ್ಟ ಮಂಜಿನ ನಡುವೆ ಶ್ರೀನಿವಾಸನ್ ಜೊತೆ ತೆರುತ್ತಿದ್ದ ಸಂದರ್ಭ ಸನಿಹದಲ್ಲೇ ಹುಲಿ ಹಾದು ಹೋಯ್ತು,ಆದರೆ ಏನು ಮಾಡಿಲ್ಲ ನಾನು ಹೆದರಿ ಫೋಟೋ ತೆಗೆಯುವುದು ಹೋಗಲಿ ಆ ಚಳಿಯಲ್ಲಿ ಬೆವರಿದ್ದೆ ಎನ್ನುತ್ತಾರೆ ಆ ವನ್ಯ ಜೀವಿ ಛಾಯಾಗ್ರಾಹಕ.
ಹುಲಿ ಹೆಜ್ಜೆಗುರುತು,ಚಲನವಲನ,ಆವಾಸ ತಾಣಗಳು,ವಂಶಾಭಿವೃದ್ದಿಗಳ ಬಗ್ಗೆ ಅರಿವು ಇವರಿಗಿದೆ.ಟೈಗರ್ ಕ್ಯಾಮರಾ ಟ್ರಾಪ್ ನಲ್ಲಿ ನಿಸ್ಸೀಮರು.

ವರ್ಷಕ್ಕೊಮ್ಮೆ 10ಕ್ಕಿಂತ ಹತ್ತು ಹುಲಿಗಳನ್ನು ನೇರವಾಗಿ ನೋಡುತ್ತಾರೆ,2000 ಕ್ಕೂ ಹೆಚ್ಚು ಬಾರಿ ದರ್ಶನ ನೀಡಿದೆ,ಸ್ವತಃ ಫೋಟೋಗ್ರಾಫಿ ಕಲಿತಿರುವ ಇವರು ಹತ್ತಿರದಿಂದ ದೊಡ್ಡ ಬೆಕ್ಕನ್ನು ಕ್ಯಾಮಾರದಲ್ಲಿ ಸೆರೆ ಹಿಡಿದಿದ್ದಾರೆ.

ಶ್ರೀನಿವಾಸನ್ ಅವರ ಮನೆ ಮುಂದೆ ನಿಂತಿರುವ ಚಿತ್ರ
ವನ್ಯ ಜೀವಿ ಛಾಯಾಗ್ರಾಹಕರೊಂದಿಗೆ ಶ್ರೀನಿವಾಸನ್

ಇವರ ಈ ವಿಶಿಷ್ಠತಗೆ ಅರಣ್ಯ ಇಲಾಖೆ ವಾಚರ್ ಆಗಿ ನೇಮಿಸಿದೆ,2019ರಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣೆ ಸಂಸ್ಥೆ ಉತ್ತಮ ವಾಚರ್ ಪ್ರಶಸ್ತಿ ನೀಡಿ 1 ಲಕ್ಷ ಬಹುಮಾನ ನೀಡಿ ಗೌರವಿಸಿದೆ. ಪತ್ನಿ ರೂಪಾ ಮತ್ತು ಮೂವರು ಮಕ್ಕಳೂಂದಿಗೆ ಪರಂಬಿಕುಲಂ ಹುಲಿ ಸಂರಕ್ಷಿತ ಪ್ರದೇಶದಲ್ಲೇ ವಾಸವಿದ್ದಾರೆ. ಇವರ ಜನಾಂಗಕ್ಕೆ ಶ್ರೀನಿವಾಸನ್ ದೇವರ ರೂಪದಂತೆ ಕಂಡರೆ.ಕೇರಳದ ಅರಣ್ಯ ಇಲಾಖೆಗೆ ಇವರು “ಟೈಗರ್ ಶ್ರೀನಿವಾಸನ್ “….!

ಗಿರಿಧರ್ ಕೊಂಪುಳೀರಾ, ಪ್ರಧಾನ ವರದಿಗಾರರು ಹಾಗು ಅಂಕಣಕಾರರು

error: Content is protected !!