ಮಡಿಕೇರಿಯ ನಗರಸಭೆಗೆ ಧಿಕ್ಕಾರವಿರಲಿ!

ವೃಕ್ಷ ಪ್ರೇಮಿಯ ಕನಸ್ಸಿನ ಮೇಲೆ ಮಣ್ಣು. ಕೆಲವು ದಿನಗಳ ಹಿಂದೆ ಕಡಗದಾಳು ನಿವಾಸಿ. ಆಟೋ ಚಾಲಕ ಗಣೇಶ್ ಅವರು ಮಡಿಕೇರಿಯ ಕಾಲೇಜು ರಸ್ತೆ( ಸಾಯಿ ಹಾಕಿ ಮೈದಾನದ)ಯ ಬಳಿ ಪರಿಸರ ಕಾಳಜಿಯಿಂದ ಗಿಡಗಳನ್ನು ನೆಟ್ಟಿದ್ದು. ಎರಡು ದಿನಕ್ಕೊಮ್ಮೆ ಅವರೇ ತಮ್ಮ ಆಟೋದಲ್ಲಿ ನೀರನ್ನು ಕ್ಯಾನ್ಗಳಲ್ಲಿ ಸಾಗಿಸಿ, ಗಿಡಗಳಿಗೆ ಹಾಕಿ ಬೆಳೆಸುತ್ತಾ, ಜನಮೆಚ್ಚುಗೆಗೆ ಭಾಜನರಾಗಿದ್ದರು.

ಹಾಗು ಈ‌ ಕುರಿತು ನಗರಸಭೆಯ ಆಯುಕ್ತರಿಗೆ ಮಾಹಿತಿ‌ ನೀಡಿ, ಆ ಸ್ಥಳದಲ್ಲಿ ಫುಟ್‌ಪಾತ್ ನಿರ್ಮಿಸುವುದಾದರೆ ಗಿಡಗಳನ್ನು ಹಾಗೆಯೇ ಬಿಟ್ಟು ನಿರ್ಮಿಸುವಂತೆ ವಿನಂತಿಸಿ ಕೊಂಡಿದ್ದರು. ಅವರು ಅದಕ್ಕೆ ಸಮ್ಮತಿಯನ್ನೂ ಸೂಚಿಸಿದ್ದರು.

ಇಂದು ಮುಂಜಾನೆ ಅಲ್ಲಿ ಲಾರಿಯಲ್ಲಿ ಮಣ್ಣನ್ನು ತಂದು ಹಾಕುತ್ತಿರುವ ವಿಷಯ ತಿಳಿದು. ಸ್ಥಳಕ್ಕೆ ಭೇಟಿ‌ ನೀಡಿದ ಗಣೇಶ್ ಅವರು ಲಾರಿ ಚಾಲಕನಿಗೂ ಈ ಕುರಿತು ಗಮನಿಸಿ ಮಣ್ಣು ಹಾಕುವಂತೆ ವಿನಂತಿಸಿ ಅಲ್ಲಿಂದ ತೆರಳಿದ್ದಾರೆ. ಹಾಕಿದ್ದ ಮಣ್ಣನ್ನು ಜೆ.ಸಿ.ಬಿ ಯಂತ್ರದಲ್ಲಿ ಸರಿ ಪಡಿಸುವ ಸಂದರ್ಭ ಚಾಲಕನ ನಿರ್ಲಕ್ಷ್ಯದಿಂದ ಅಲ್ಲಿದ್ದ ಗಿಡಗಳು ಮಣ್ಣಿನಲ್ಲಿ ಸಮಾಧಿಯಾಗಿದೆ. ಈ ಕುರಿತು ನೊಂದ ಗಣೇಶ್ ಅವರು ನಗರ ಆಯುಕ್ತರಿಗೆ ದೂರವಾಣಿ ಮೂಲಕ ದೂರನ್ನು ನೀಡಿದ್ದು. ಕೂಡಲೇ ಗಮನಿಸಿ ಸರಿಪಡಿಸುವುದಾಗಿ ಅವರು ಸಮಾಧಾನ ಹೇಳಿರುತ್ತಾರೆ. ಪರಿಸರ ಕಾಳಜಿಯಿಂದ ಗಿಡ ನೆಡುವ ಗಣೇಶ್ ಅವರಿಗೆ ಪ್ರೋತ್ಸಾಹಿಸಬೇಕಾದ ನಗರಸಭೆಯ ಸಿಬ್ಬಂದಿಗಳು ಈ ರೀತಿ ಅಸಡ್ಡೆ ತೋರಿಸಿರುವುದು ಖಂಡನೀಯ.

ಇವರ ಯೋಗ್ಯತೆಗೆ ನಾಲ್ಕು ಗಿಡಗಳನ್ನು ನೆಡಲಿಕ್ಕಂತೂ ಆಗಲ್ಲ. ಹಾಗಿರುವಾಗ ನೆಟ್ಟ ಗಿಡಗಳನ್ನು ಸುರಕ್ಷಿತವಾಗಿ ಬೆಳೆಯಲು ಕೂಡ ಬಿಡೊದಿಲ್ಲವೆಂದರೆ ವ್ಯವಸ್ಥೆಯ ಬಗ್ಗೆ ಅಸಹ್ಯ ಮೂಡುತ್ತದೆ. ನಮ್ಮ ಅಧಿಕಾರಿಗಳು ಯಾವುದಾದರೂ ಹೆಮ್ಮರಗಳು ದೊಡ್ಡದಾಗಿ ಬೆಳೆದಿದ್ದರೆ, ಅದನ್ನು ಕ್ಷುಲ್ಲಕ ಕಾರಣಕ್ಕೆ ಕಡಿಸಿ ಕಿಸೆ ತುಂಬಿಸಿಕೊಳ್ಳುವಲ್ಲಿ ತೋರಿಸುವ ಆಸಕ್ತಿಯನ್ನು ಒಬ್ಬ ಪರಿಸರ ಪ್ರೇಮಿ ಗಿಡ ನೆಟ್ಟು ಬೆಳಸುವಾಗ ಅದರಲ್ಲಿ ಏಕೆ ತೋರಿಸುವುದುಲ್ಲ.

error: Content is protected !!
satta king chart