fbpx

ಕಸಾಪ ಅಮ್ಮತ್ತಿ ಹೋಬಳಿ ಘಟಕ ರಚನೆ

ಮಡಿಕೇರಿ ಜೂ.17 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ವಿರಾಜಪೇಟೆ ತಾಲ್ಲೂಕು ಅಮ್ಮತ್ತಿ ಹೋಬಳಿ ಘಟಕವನ್ನು ಸಿದ್ದಾಪುರದಲ್ಲಿ ಹೋಬಳಿ ಸದಸ್ಯರ ಸಮಾಲೋಚನಾ ಸಭೆಯನ್ನು ವಿರಾಜಪೇಟೆ ತಾಲೂಕು ಅಧ್ಯಕ್ಷ ಡಿ.ರಾಜೇಶ್ ಪದ್ಮನಾಭ ರವರ ಅಧ್ಯಕ್ಷತೆಯಲ್ಲಿ ನಡೆಸಿದ್ದು ಪದಾದಿಕಾರಿಗಳ ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಸಿದ್ದಾಪುರದ ಟಿ.ಹೆಚ್.ಮಂಜುನಾಥ್ ಆಯ್ಕೆಯಾಗಿದ್ದಾರೆ.

ಗೌರವ ಕಾರ್ಯದರ್ಶಿಗಳನ್ನಾಗಿ ಸಿದ್ದಾಪುರದ ವಿ.ಎಸ್.ಗುರುದರ್ಶನ್, ಮಾಲ್ದಾರೆ ಗುಡ್ಲೂರಿನ ಸಿ.ವಿಜಯಲಕ್ಷ್ಮಿ ಹಾಗೂ ಗೌರವ ಕೋಶಾಧ್ಯಕ್ಷರನ್ನಾಗಿ ಕರಡಿಗೋಡಿನ ಕೆ.ಆರ್.ಸೂರಜ್ ಅವರನ್ನು ನೇಮಕ ಮಾಡಿರುವುದಾಗಿ ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ತಿಳಿಸಿದ್ದಾರೆ.

error: Content is protected !!