ಸೋಣ ತಿಂಗಳ ಪರ್ಚಯ..

✍🏻 ಉಳುವಾರನ ರೋಶನ್ ವಸಂತ್, ಕಾಂತೂರು.

ಗೌಡ ಜನಾಂಗದ ಅರೆಭಾಸೆ ತಿಂಗಗಳ ಪ್ರಕಾರ ಇಂದ್ಂದ ಸೋಣ ತಿಂಗ ಸುರು. ಈ ತಿಂಗ ಸಿಂಹ ಸಂಕ್ರಮಣ ಕಳ್ದ ಮಾರನೇ ದಿನಂದ ಸುರಾಗಿ ಕನ್ಯಾ ಸಂಕ್ರಮಣ ಮುಟ್ಟ ಇದದ್ದೆ. ಅಂದರೇ ( ಆಗಸ್ಟ್ ೧೫ ರ್ಂದ ಸೆಪ್ಟೆಂಬರ್ ೧೫ ಕ್ಕೆ ಮುಟ್ಟ ) ಆಟಿ ತಿಂಗ ಕಳ್ದಂಗೆ ಮುಂದೆ ಬರುವ ತಿಂಗಳೇ ಸೋಣ ತಿಂಗ. ಎರಡ್ ವರ್ಷಗಳ್ಂದ ಆಟಿ ತಿಂಗ ಎಲ್ಲವ್ರ ಮನ್ಸ್ ಲ್ಲಿ ಉಳ್ಕಂಡ್ ಈ ವರ್ಷನು ಎಲ್ಲವ್ರ ತುಂಬಾ ಹೆದ್ರಸಿಟ್ಟ್ ಆಸೆ ಭಾಸೆ ಇಲ್ಲದ ಅಶ್ಲೇಷ ಮಳೆ ಸರಿಯಾಗಿ ರಭಸನ ತೋರ್ಸಿ ಜಿಲ್ಲೆನ ಎಲ್ಲ ಕಡೇನು ಮಾರಿ ಮಳೆ ಬಿದ್ದ್ ಹೊಳೆ ,ತೋಡುಗ, ಜಲಪಾತಗ ತುಂಬಿ ಹರ್ದ್ ಒಂದಲ್ಲ ಒಂದು ತರಲಿ ಕಷ್ಟ – ನಷ್ಟಗ ಅಗಿ ಮನ್ಸರ್, ಪ್ರಾಣಿಗ ಎಲ್ಲಾವು ಕಷ್ಟನ ಅನುಭವಿಸಿಯೊಳ್ಳೊ.

ಕಳ್ದ ವರ್ಷ ಅದ ಪ್ರಕೃತಿ ವಿಕೋಪ ಎಲ್ಲವ್ರ ಮನ್ಸ್ಂದ ಹೋಕೆ ಮುಂದೆನೇ ಈ ವರ್ಷನು ಮಾರಿ ಮಳೆ ಬಿದ್ದ್ ಗಾಯದ ಮ್ಯಾಲೆ ಬರೇ ಹಾಕಿದಂಗೆ ತುಂಬಾ ಕಷ್ಟ – ನಷ್ಟಗ ಅಗಿ ಎಲ್ಲರ ಮನ್ಸ್ ಲಿ ಉಳ್ಕಂಡ್ ಅಂತೂ ಇಂತೂ ಆಟಿ ತಿಂಗ ಹೋಗಿ ಸೋಣ ತಿಂಗ ಬಂದುಟ್ಟು.

ಈ ತಿಂಗಳ್ಲಿ ಗೌರಿ ಗಣೇಶ ಹಬ್ಬ , ಕೊಡ್ಗ್ ನ ಗೌಜಿ ಗದ್ದಲದ ಸಾಂಪ್ರದಾಯಿಕ ಹಬ್ಬ ಕೈಲ್ ಮುಹೂರ್ತ ಬಂದದೆ. ಸೋಣ ೧೨ ಅಗಸ್ಟ್ ೨೮ ಕ್ಕೆ ನಾಲ್ಕುನಾಡ್ಲಿ ಕೈಲ್ ಮುಹೂರ್ತನ ಅಚರಣೆ ಮಾಡಿವೆ. ಸೋಣ ೧೮ ಸೆಪ್ಟೆಂಬರ್ ಮೂರನೇ ತಾರೀಖ್ಗೆ ಸುಮಾರ್ ಕಡೆ ಈ ಹಬ್ಬನ ಅಚರಣೆ ಮಾಡುವ ಕ್ರಮ ತುಂಬಾ ಹಿಂದೆನ ಕಾಲಂದನು ನಡ್ಕಂಡ್ ಬಂದುಟ್ಟು. ಈ ತಿಂಗಳ್ಲಿ ಮಖಾ, ಮತ್ತೆ ಹುಬ್ಬಾ ನಕ್ಷತ್ರದ ಮಳೆ ಬಿದದ್ದೆ. ನಾಟಿ ಕೆಲ್ಸ ಎಲ್ಲ ಮುಗ್ದ್ ನಟ್ಟ ನಾಟಿ ಕರಿ ನಾಟಿ ಹತ್ತಿಕೆ ಸುರಾದೆ‌.

ರೈತರ್ ತ್ವಾಟಲಿ ಕಾಡ್ ಕಡಿಯೋದು, ಗದ್ದೆಲ್ಲಿ ಕಳೆ ತಗಿಯೋದು ಇಂತ ಕೆಲ್ಸಗಳ ಮಾಡಿವೆ. ಇನ್ನ್ ಹೊಸ ತ್ವಾಟ ಮಾಡಿಕೆ, ಬಾಳೆ ಹಾಕಿಕೆ, ತರ್ಕಾರಿ ಮಾಡಿಕೆ ಈ ತಿಂಗ ತುಂಬಾ ಒಳ್ಳ ತಿಂಗತ ಹಿರಿಯವು ಹೇಳಿವೆ. ಈ ತಿಂಗಳ್ಲಿ ಮಳೆನ ರಭಸ ತುಂಬಾ ಕಮ್ಮಿ ಅಗಿ ಬಿಸ್ಲ್ ಬಂದದೆ. ಶುಭ ಕಾರ್ಯಗ, ಮದುವೆ ಜಂಬರಗ, ಪೂಜೆಗ ಈ ತಿಂಗಳ್ಂದ ಸುರು ಅದೆ‌. ಹಂಗೆ ಆಟಿ ತಿಂಗಳ್ಲಿ ಸತ್ತವುಕ್ಕೆ ಇದೇ ತಿಂಗಳ್ಲಿ ತಿಥಿ ಕರ್ಮಾಂತರ ಮಾಡಿವೆ. ಇದ್ದಿಷ್ಟ್ ಸೋಣ ತಿಂಗಳ ವಿಶೇಷ ಆವ್ಟು.

ಇನ್ನೂ ಮುಂದೆ ಬರುವ ನಿರ್ನಾಲ್ ತಿಂಗಳ ಪರ್ಚಯದೊಟ್ಟಿಗೆ ಬರುವ ತಿಂಗ ಕಾಂಬನೋ ಎಲ್ಲಾವುಕ್ಕೂ ನಮಸ್ಕಾರಗ

error: Content is protected !!
satta king chart