ಕೈಲ್ ಮುಹೂರ್ತ ಹಬ್ಬದ ವಿಶೇಷತೆ..
✍ಉಳುವಾರನ ರೋಶನ್ ವಸಂತ್, ಕಾಂತೂರು.
ಕೊಡ್ಗ್ ಕೃಷಿ ಪ್ರದಾನ ಜಿಲ್ಲೆ ಇಲ್ಲಿನ ಜನ ಕೃಷಿಕರ್. ಪಂಡ್ ಕಾಲಂದನು ನಮ್ಮ ಹಿರಿಯವು ಕೃಷಿನ ಮಾಡಿಕಂಡ್ ಹಬ್ಬ ಹರಿದಿನಗಳ ಅಚರಣೆ ಮಾಡಿಕಂಡ್ ಬಂದೊಳೊ. ನಾವು ಹತ್ತು ಕುಟುಂಬ ಹದಿನೆಂಟ್ ಗೋತ್ರದ ಗೌಡ ಜನಾಂಗದವು ಅಚರಣೆ ಮಾಡುವ ಎಲ್ಲಾ ಹಬ್ಬ ಹರಿದಿನಗ ಕೃಷಿನೊಟ್ಟಿಗೆ ಸಮ್ಮಂದ ಇರ್ದುನೇ. ಕೊಡ್ಗ್ ನ ಸಾಂಪ್ರದಾಯಿಕ ಗೌಜಿ ಗದ್ದಳದ ಹಬ್ಬನೆ ಈ ಕೈಲ್ ಮುಹೂರ್ತ ಹಬ್ಬ.
ಕೈಲ್ ತ ಹೇಳ್ರೆ ಅಯುಧ, ಮುಹೂರ್ತತ ಹೇಳ್ರೆ ಪೂಜೆ. ಒಟ್ಟಾರೆ ಕೈಲ್ ಮುಹೂರ್ತತ ಹೇಳ್ರೆ ಕೃಷಿನ ಅಯುಧ ಪೂಜೆತ ಅರ್ಥ. ಈ ಹಬ್ಬನ ಸಾಮಾನ್ಯ ಅಗಿ ಅಗಸ್ಟ್ ಮತ್ತೆ ಸೆಪ್ಟೆಂಬರ್ ತಿಂಗಳ ಸೋಣ ತಿಂಗಳ್ಲಿ ಅಚರಣೆ ಮಾಡಿವೆ. ಸೋಣ ೧೨ ರ ಕೈಲ್ ಮುಹೂರ್ತ ಹಂಗೆ ಸೋಣ ೧೮ ರ ಕೈಲ್ ಮುಹೂರ್ತತ ಕರ್ದವೆ.
ನಾಟಿ ಕೆಲ್ಸ್ ಎಲ್ಲಾ ಮುಗ್ಸಿ ಅದ್ ಕರಿನಾಟಿ ಹತ್ತ್ಕಾನ ಈ ಹಬ್ಬ ಬಂದರೆ ನಾಟಿ ಬೆಳೆ ತೆನೆ ಬಾಗಕಾನ ಹುತ್ತೆರಿ ಹಬ್ಬ ಬಂದದೆ. ಕೈಲ್ ಮುಹೂರ್ತ ಹಬ್ಬದ ದಿನ ಹೊತ್ತಾರೆ ಕೊಡ್ಗ್ ನ ಎಲ್ಲಾ ರೈತ ಜನ ಗದ್ದೆ ಕೆಲ್ಸ ಕೆ ಬಳ್ಸಿದ ಅಯುಧಗಳ್ನ ಮನಾರ ತೊಳ್ದ್ ಸಾಲಾಗಿ ಅದನ ಜೋಡ್ಸಿ ಮಡ್ಗಿ ಗಣಪತಿ ದೇವ್ರ್ ಗೆ ಅಯುಧಗಳಿಗೆ ಪೂಜೆ ಮಾಡಿವೆ.
ಹಬ್ಬದ ದಿನ ಸುಮಾರ್ ಕುಟುಂಬಗಳ ಐನ್ಮನೆಗಳ್ಲಿ ಎಲ್ಲಾವು ಕೂಡಿಕಂಡ್ ನೆಲ್ಲಕಿ ಮುಂದೆ ಹಬ್ಬಕೆ ಮಾಡ್ದ ಅಡಿಗೆನ ಮಡ್ಗಿ ಕೋವಿ- ಒಡಿಕತ್ತಿಗಳ್ನ ಸಾಲಾಗಿ ಇಟ್ಟ್ ಅದರ ಮುಂದೆ ದೇವ್ರ್ ನ ಗ್ಯಾನ ಮಾಡಿಕಂಡ್ ಕಾಯಿನ ಒಡ್ದ್ ಒಂದು ವಡೆನ ದೂರದ ಒಂದು ಮರದ ಕೊಡಿಲಿ ಮಡ್ಗುವೆ. ಗೌರಿ ಹೂ ಹಬ್ಬದ ವಿಶೇಷ ಹೂವಾಗಿದ್ದದೆ. ಮಡ್ಗಿದ ಆ ಕಾಯಿನ ವಡೆಗೆ ಗುರಿ ನೋಡಿ ಕೋವಿಲಿ ಗುಂಡು ಹೊಡ್ದವೆ.
ಇದ್ ಯಾಕೆತ ಹೇಳ್ರೆ ಗುರಿಕಾರರ ಶಕ್ತಿ ಸಾಮರ್ಥ್ಯದ ಮಟ್ಟನ ಪ್ರದರ್ಶನ ಮಾಡ್ಡು ಹಂಗೆ ಗುರಿ ಕಲಿಯವು ಬೇಟೆ ಕಲಿಯಕೆ ಖುಸಿ ಇರಾವುಕೆ ಅಂದ್ ನ ದಿನ ಗುರಿನ ತೊರ್ಸಿವೆ. ಹಂಗೆ ಅಂದ್ ನ ದಿನ ಊರವು ಎಲ್ಲಾ ಕೂಡಿಕಂಡ್ ಊರುನ ಆಟದ ಬಾಣೆಗಳ್ಲಿ – ಆಟೋಟಗಳ ಏರ್ಪಡ್ ಮಾಡಿಕಂಡವೆ ಭಾರದ ಕಲ್ಲ್ ಏಸೆದು , ಕಾಯಿಗೆ ಗುಂಡು ಹೊಡಿಯದು ಹಿಂಗೆ ರೈತರ ಶ್ರಮ ಪರಿಹಾರಕ್ಕಾಗಿ ವಿಶೇಷ ಮನ್ಸಿಗೆ ಖುಸಿ ಕೊಡುವ ಆಟಗಳ್ನ ಆಡಿ ಹಿರಿಯವು – ಕಿರಿಯವು ಮಕ್ಕ – ಮರಿಗ ಎಲ್ಲಾ ಖುಸಿಪಟ್ಟವೆ.
ಹಬ್ಬನ ಯಾಕೆ ಎರಡ್ ದಿನ ಅಚರಣೆ ಮಾಡಿವೆತ ನಾವು ನೋಡ್ರೆ ನಮ್ಮ ಹಿರಿಯವು ಹೇಳುವ ಪ್ರಕಾರ ಹಿಂದೆನ ಕಾಲಲ್ಲಿ ಹಾಲೇರಿ ರಾಜರ್ ಮಡಿಕೇರಿ ಕ್ವಾಟೆನ ಆಳ್ತಾಯಿದ್ದ ಅ ಕಾಲಲ್ಲಿ ಕೊಡ್ಗ್ನ ಕೈಲ್ ಮೂಹೂರ್ತ ಹಬ್ಬಕೆ ರಾಜರ್ ಅಗ ವಿಶೇಷ ಅಸಕ್ತಿನ ಕೊಡ್ತಿದೊ. ಅಗನ ಆ ಕಾಲಲ್ಲಿ ಕ್ವಾಟೆನ ಮ್ಯಾಲೆ ಅಗ ಅಗ ತುಂಬಾ ಧಾಳಿಗ ನಡಿತ ಇತ್ತ್.
ಎಲ್ಲಾವುಕ್ಕೆ ಒಂದೇ ದಿನ ರಜ ಕೊಟ್ಟರೆ ಕ್ವಾಟೆನ ಮ್ಯಾಲೆ ಧಾಳಿ ಅದರೆ ಕಷ್ಟ ಅದೇತ ಹೇಳಿಕಂಡ್ ಹಂಗೆ ಒಂದೆ ದಿನ ಹಬ್ಬನ ಮಾಡ್ರೆ ನೆಂಟ್ರ್ಗಳಿಗೂ ಅತ್ತ ಇತ್ತ ಹೋಕೆ ಬಾಕೆ ಕಷ್ಟ ಅದೇತ ಗ್ಯಾನ ಮಾಡಿ ಎರಡ್ ದಿನ ಹಬ್ಬನ ಅಚರಣೆ ಮಾಡ್ದೊ. ಹಾಂಗಗಿ ಎರಡ್ ದಿನ ಹಬ್ಬ ಬಾತ್ ಕೊಡ್ಗ್ ನ ಕೆಲವು ಊರುಗಳ್ಲಿ ಅದರ್ಲು ನಾಲ್ಕುನಾಡ್ನ ಜನ ಸೋಣ ೧೨ ಕ್ಕೆ ಅಂದರೇ ಅಗಸ್ಟ್ ೨೮, ೨೯ ಕ್ಕೆ ಹಂಗೆ ಬಾಕಿದವು ಸೋಣ ೧೮ ಕ್ಕೆ ಅಂದರೇ ಸೆಪ್ಟೆಂಬರ್ ೩ ಕ್ಕೆ ಹಬ್ಬನ ಅಚರಣೆ ಮಾಡಿಕೆ ಸುರು ಮಾಡ್ದೊ. ಅದ್ ಈಗನೂ ಹಂಗೆ ರೂಡಿಲಿ ಉಟ್ಟು.
ಕೈಲ್ ಮುಹೂರ್ತದ ದಿನ ಮಳೆಗಾಲಲ್ಲಿ ಗದ್ದೆಲ್ಲಿ ರೈತರೊಟ್ಟಿಗೆ ಕಷ್ಟ ಪಟ್ಟ್ ಗದ್ದೆ ಕೆಲ್ಸ್ ಮಾಡ್ದ ಎತ್ತ್ ಗಳಿಗೂ ಆ ದಿನ ವಿಶೇಷ ಉಟ್ಟು. ಎತ್ತ್ ಗಳ ಮೈನ ಲಾಯಿಕ್ಕ ತೊಳ್ದ್ ತೊಳಸಿದ ಹಿಟ್ಟ್ ತ ಹೇಳುವ ಅಕ್ಕಿ ಪಾಯಿಸ ಮಾಡಿ ತಿಂಬಕ್ಕೆ ಕೊಡಿ ಬಾಳ್ಲೆಲಿ ಕೊಟ್ಟವೆ.ಒಟ್ಟಾರೆ ಎಲ್ಲಾವು ಕೂಡಿಕಂಡ್ ಹಬ್ಬನ ಗೌಜಿ ಗದ್ದಳಲ್ಲಿ ಅಚರಣೆ ಮಾಡಿವೆ.
ಹಬ್ಬದ ದಿನ ವಿಶೇಷ ಆಗಿ ಊಟೋಪಾಚರಲ್ಲಿ ಮಾಸ ಗೈಪು, ಕಡ್ಂಬು, ಇಡ್ಲಿ, ಬಟ್ಲಿಟ್, ಹಿಂಗೆ ವಿಶೇಷ ಅಡಿಗೆ ಗ ಇದ್ದದೆ.
ಅದೇನೆ ಇರ್ಲಿ ನಮ್ಮ ಹಿರಿಯವರ ಕಾಲಂದ ಬಂದ ಹಬ್ಬ ಹರಿದಿನಗಳ ಸರಿಯಾಗಿ ಕ್ರಮ ಬದ್ದ ಅಗಿ ಅಚರಣೆ ಮಾಡಿಕಂಡ್ ಹೋದು ಹಂಗೆ ಅದರ ನಮ್ಮ ಮುಂದೆನ ಪೀಳಿಗೆಗೆ ಹೇಳಿಕೊಡ್ದು ಉಳ್ಸಿ ಬೆಳ್ಸುದು ನಮ್ಮ ಎಲ್ಲಾವರ ಕರ್ತವ್ಯ ಆವ್ಟು. ಹಬ್ಬಗ ಬಂದವೆ ಹೋದವೆ ಗೌಜಿನು ಮಾಡಿವೆ ಅದರೆ ಅದರ ಚರಿತ್ರೆ ಗೊತ್ತಿಲ್ಲ ದಿದ್ದರೆ ಹಬ್ಬ ಮಾಡಿನು ಏನ್ ಪ್ರಯೋಜನ ಇಲ್ಲೆ. ಅದ್ದರ್ಂದ ಹಬ್ಬಗಳ ಚರಿತ್ರೆನ ತಿಳ್ಕಂಡ್ ಹಬ್ಬ ಅಚರಣೆ ಮಾಡ್ರೆ ಅದ್ಕೆ ಒಂದು ಅರ್ಥ ಬಂದದೆ.
ನಮ್ಮ ಹಿರಿಯವು ಹೇಳುವ ಪ್ರಕಾರ ಮುಂದೆನ ಕಾಲದ ಹಬ್ಬದ ಅಂದ್ ನ ಆ ಗೌಜಿ ಈಗ ಕಾಂಬಕ್ಕೆ ಸಿಕ್ಕುಲೆತ ಬೇಜಾರ ಪಟ್ಟವೆ. ಪಂಡ್ ಕಾಲಲ್ಲಿ ಹಬ್ಬತ ಹೇಳ್ರೆ ಅದೊಂದು ತರದ ಗೌಜಿನೆ ಬ್ಯಾರೆ ಇತ್ ಅಗ ಎಲ್ಲಾವು ಒಟ್ಟಿಗೆ ಕೂಡಿಕಂಡ್ ಖುಸಿಲ್ಲಿ ಗದ್ದೆ ಕೆಲ್ಸ ಮಾಡಿ ಈ ಕೈಲ್ ಮುಹೂರ್ತ ಹಬ್ಬನ ಅಚರಣೆ ಮಾಡ್ತ ಇದ್ದೊ. ಅದರೆ ಈಗ ಕಾಲಕ್ಕೆ ತಕ್ಕಂಗೆ ಕೋಲತ ಹೇಳುವಂಗೆ ಅಟ್ಟು.
ಈಗೀಗ ಗದ್ದೆ ಕೆಲ್ಸ ಮಾಡವರ ಸಂಖ್ಯೆ ಬರ್ತಬರ್ತ ವರ್ಷಂದ ವರ್ಷಕ್ಕೆ ತುಂಬಾ ಕಮ್ಮಿ ಅಗ್ತ ಉಟ್ಟು. ಹಿಂಗೆ ಅದರೆ ನಮ್ಮ ಕೃಷಿ ಹಬ್ಬಗಳ ಕಥೆ ಎಂಥತ ಎಲ್ಲಾವು ಗ್ಯಾನ ಮಾಡುವ ಅದರ ಕಡೇ ಚಿಂತನೆ ಮಾಡುವ ಅವಶ್ಯಕತೆನು ಉಟ್ಟು. ಅದೆನ್ನೆ ಇರ್ಲಿ ನಾವೆಲ್ಲವೂ ನಮ್ಮ ಕೃಷಿ ಹಬ್ಬಗಳ್ನ ಉಳ್ಸಿ ಬೆಳ್ಸಿ ನಮ್ಮ ಮುಂದೆನ ಪೀಳಿಗೆಗೂ ತಿಳ್ಸಿಕೊಡುವ ಪ್ರಯತ್ನ ಮಾಡ್ನೊ.
ಮತ್ತೊಮ್ಮೆ ಎಲ್ಲಾವುಕ್ಕೂ ಕೊಡ್ಗ್ ನ ಗೌಜಿ ಗದ್ದಳದ ಸಾಂಪ್ರದಾಯಿಕ ಹಬ್ಬ ಕೈಲ್ ಮುಹೂರ್ತ ಹಬ್ಬದ ಹಾರ್ದಿಕ ಶುಭಾಶಯ.
✍ಉಳುವಾರನ ರೋಶನ್ ವಸಂತ್, ಕಾಂತೂರು.