ಸುದ್ದಿ ಸ್ವಾರಸ್ಯ
ಅಪರೂಪದ ಹಸಿರು ಹಾವು ಪತ್ತೆ.
ಹಿಮಾಲಯದ ಜೀವ ವೈದ್ಯದಲ್ಲಿ ಅಪರೂಪದ ಹಸಿರು ಹಾವು ಪತ್ತೆಯಾಗಿದೆ. ವಿಷಕಾರಿ ವೈಪರ್ ಸಂಕುಲಕ್ಕೆ ಸೇರಿದ ಹಾವು ಇದಾಗಿದ್ದು, ಮೈ ಭಾಗ ಸಂಪೂರ್ಣ ಹಸಿರಿನಿಂದ ಕೂಡಿದ್ದು,ಕೆಳ ಭಾಗದಲ್ಲಿ ತಲೆಯಿಂದ ಬಾಲದವರೆಗೆ ಹಳದಿ, ಕೇಸರಿ, ಕೆಂಪು ಮಿಶ್ರಿತ ಪಟ್ಟಿಗಳನ್ನು ಹೊಂದಿದೆ. ವೈಪರ್ ಗಳ ಜಾತಿಗಳ ಹಾವಿನಲ್ಲಿ ಇದು 48ನೆಯದಾಗಿ ಹೊಸದಾಗಿ ಸೇರ್ಪಡೆಗೊಂಡಿದೆ. ಇದೇ ರೀತಿ ಹೋಲುವ ಹಾವು ಹ್ಯಾರಿ ಪಾಟರ್ ಸಿನಿಮಾದಲ್ಲಿ ಕಂಡು ಬಂದಿದ್ದ ಹಿನ್ನಲೆಯಲ್ಲಿ,ಈ ಪಾತ್ರವನ್ನು ಸೃಷ್ಟಿಸಿದ್ದ ಸಲ್ಜಾರ್ ಎಂಬುವವರ ಹೆಸರನ್ನು ಸೇರಿಸಿ ಸಲ್ಜಾರ್ ಗ್ರೀನ್ ಪಿಟ್ ವೈಪರ್ ಎಂದು ನಾಮಕರಣ ಮಾಡಲಾಗಿದೆ.
ಭಾರತದಲ್ಲಿ ಅಪರೂಪದ ಜಂತುಗಳ ಸಂಶೋಧನೆ ನಡೆಸುತ್ತಿರುವ ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಞಾನ ಸಂಸ್ಥೆಯ ಸಂಶೋಧಕ ಡಾ.ಝೀಶಾನ್ ಎ.ಮಿರ್ಜಾ ಮತ್ತು ತಂಡ ಅರಣ್ಯದಲ್ಲಿ ಅಡ್ಡಾಡುತ್ತಿದ್ದ ಸಂದರ್ಭ ಕಾಲು ದಾರಿ ಬಳಿಯೊಂದರಲ್ಲಿ ಗೋಚರಿಯಸಿದ್ದು ಇದರ ಡಿಎನ್ ಎ ಪರೀಕ್ಷೆ ಬಳಿಕ ವೈಪರ್ ವಿಭಾಗಕ್ಕೆ ಸೇರಿದ್ದಾಗಿದ್ದು ನಿಷಾಚರಿ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.