ಅಂತರಾಷ್ಟೀಯ ಹುಲಿ ದಿನದ ವಿಶೇಷ

ಇಂದು ಅಂತರಾಷ್ಟ್ರೀಯ ಹುಲಿ ದಿನಾಚರಣೆ🐯                                     

🐅 ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸೇರಿದ ಹುಲಿಗಳ ಸಂಖ್ಯೆ!

ವಿಶೇಷ ವರದಿ: ಗಿರಿಧರ್ ಕೊಂಪುಳೀರ

ಕೊಡಗು:ವಿನಾಶದ ಅಂಚಿನಲ್ಲಿರುವ ಅಪರೂಪದ ವನ್ಯಜೀವಿ,ನಾಚಿಕೆ ಸ್ವಭಾವದ ಬೆಕ್ಕುಗಳ ಪ್ರಭೇದ ಹುಲಿಗಳ ಸಂರಕ್ಷಣೆ ಮತ್ತು ಸೂಕ್ಮ ಪರಿಸರ ವಲಯಗಳ ಉಳಿಸುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಹುಲಿ ದಿನಾಚರಣೆ ಅಥವಾ ಜಾಗತಿಕ ಹುಲಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.


2010ರಲ್ಲಿ ಸೆಂಟ್ ಪೀಟರ್ಸ್ಬರ್ಗ್ ನಲ್ಲಿ ನಡೆದ ಹುಲಿ ಸಂತತಿಯನ್ನು ಉಳಿಸುವ ನಿಟ್ಟಿನಲ್ಲಿ ನಡೆದ ಏಷಿಯಾದ ಹುಲಿಗಳನ್ನು ಹೊಂದಿರುವ ಸಮಾವೇಶದಲ್ಲಿ ಪ್ರತೀ ವರ್ಷ ಜುಲೈ 29 ರಂದು ಹುಲಿ ದಿನಾಚರಣೆಯನ್ನು ನಡೆಸಲು ನಿರ್ಧರಿಸಲಾಗಿದ್ದು 2022 ರ ಒಳಗಾಗಿ ಹುಲಿಗಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ತೆಗೆದುಕೊಂಡ ನಿರ್ಧಾರದಂತೆ ಇಂದು ಹುಲಿ ದಿನವನ್ನಾಗಿ ಆಚರಿಸಲ್ಪಡುತ್ತಿದೆ.

ಭಾರತದಲ್ಲಿ ನಡೆಸಿದ ನಾಲ್ಕನೆ ಹುಲಿ ಗಣತಿಯಲ್ಲಿ 2019ರಲ್ಲೇ ಹುಲಿ ಸಂಖ್ಯೆ ದುಪ್ಪಟಾಗಿದ್ದು 2010ರಲ್ಲಿ 1411 ಇದ್ದ ಹುಲಿಗಳ ಸಂಖ್ಯೆ 3000 ಗಡಿ ದಾಟಿದೆ. ದೇಶದಲ್ಲಿ ಇರುವ 50 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ನಡೆಸಿದ ಗಣತಿಯಂತೆ 30 ಸಾವಿರ ಕ್ಯಾಮರಾದಲ್ಲಿ 3 ಕೋಟಿಗೂ ಅಧಿಕ ಛಾಯಾಚಿತ್ರಗಳು ಲಭಿಸಿದ್ದು,ಅವುಗಳಲ್ಲಿ 76,000ದಷ್ಟು ಹುಲಿಗಳು ಮತ್ತು 55 ಸಾವಿರ ಚಿರತೆಗಳ ಚಲನವಲನದ ಚಿತ್ರಗಳು ಲಭ್ಯವಾಗಿದೆ.ಇದೇ ಮೊದಲ ಭಾರಿಗೆ ಲಿಂಗಾನುಪತವಾಗಿ ಗಣತಿ ನಡೆಸಲಾಗಿದೆ.ಗಣತಿ ವೇಳೆ 2000 ಆನೆಗಳು ಮತ್ತು 3000 ಘೇಂಡಾಮೃದ ಇರುವಿಕೆ ಬಗ್ಗೆ ದಾಖಲಾಗಿದ್ದು,ವಿಶ್ವದಲ್ಲೇ 8 ವೈವಿದ್ಯ ಕಾಡುಗಳ ರಕ್ಷಣೆಯಲ್ಲಿ ಶೇ 70ರಷ್ಟು ಹುಲಿಗಳು ಭಾರತದಲ್ಲೇ ಇರುವುದರಿಂದ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಮಾಡಿದೆ.

ಭಾರತದ ಮಹತ್ವದ ಹೆಜ್ಜೆ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅಧಿಕಾರವಧಿಯಲ್ಲಿ ಅಪರೂಪದ ಸಸ್ ಸಂಕುಲಗಳ ರಕ್ಷಣೆ ಮತ್ತು ಹುಲಿಗಳ ವಂಶಾಭಿವೃದ್ದಿಗೆ ಪಣ ತೊಟ್ಟು 🐾ಪ್ರಾಜೆಕ್ಟ್ ಟೈಗರ್ 🐾ಅನುಷ್ಠಾನಗೊಳಿಸಿ 1990ರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅಧಿಕಾರವದಿಯ ವರೆಗೆ ನಡೆದುಕೊಂಡು ಬಂದಿದ್ದು,ಇದೇ ಸಂದರ್ಭ ನಮ್ಮ ನಾಗರಹೊಳೆ ಅಭಯಾರಣ್ಯಕ್ಕೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಎಂದು ಹೆಸರಿಡಲಾಯಿತು.ಈ ಸಂದರ್ಭ ಅರಣ್ಯ ಸಂಪತ್ತನ್ನು ಕಾಪಾಡುವ ಹುಲಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಹಲವು ಯೋಜನೆಗಳೂ ಬಂದವು.ಬಳಿಕ ನರೇಂದ್ರ ಮೋದಿ ಪ್ರಧಾನಿಗಳಾದ ಬಳಿಕ ನಡೆಸಿದ ಹಲವು ಯೋಜನೆಗಳ 🐾All India Tiger Estimation Report 🐾ಪ್ರಕಾರ ಭಾರತದಲ್ಲಿ 2,967 ಹುಲಿಗಳನ್ನು ಗುರುತಿಸಲಾಗಿತ್ತು
ಅಂತರಾಷ್ಟ್ರೀಯ ಹುಲಿ ದಿನಾಚರಣೆಯಾಗುವ ಮೂದಲೇ ಹುಲಿಗಳ ಕಳ್ಳಬೇಟೆ ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡ ಹಿನ್ನಲೆಯಲ್ಲಿ 2006 ರಲ್ಲಿದ್ದ 1411 ಹುಲಿಗಳ ಸಂತತಿ 2019 ರ ಹೊತ್ತಿಗೆ ದೇಶದಲ್ಲಿ 3000 ಹುಲಿಗಳ ಸಂತತಿ ಹೆಚ್ಚಳವಾಗಿಸಿ ಶೇ.70 ರಷ್ಟು ಹುಲಿ ಸಂರಕ್ಷಣೆ ಗುರಿ ಮುಟ್ಟಿದೆ,2022 ರ ಒಳಗಾಗಿ ಇನ್ನಷ್ಟು ಗುರಿ ಮುಟ್ಟುವ ಲಕ್ಷಣಗಳಿದೆ.

ಗಿರಿಧರ್ ಕೊಂಪುಳೀರ, ಪ್ರಧಾನ ವರದಿಗಾರರು
error: Content is protected !!