fbpx

ಸಿಲ್ವರ್ ಮರ ಜೀವ ಸಂಕುಲದ ಮಾರಿ: ಸಿಲ್ವರ್ ಓಕ್ ಬೇಡ ಎನ್ನುತ್ತಿದ್ದಾರೆ ಬೆಳೆಗಾರರು

ವಿಶೇಷ ವರದಿ: Giridhar kompulira

ಕಾಫಿ ಬೆಳೆಗಾರರಿಗೆ ಚಿನ್ನದ ಮೊಟ್ಟೆಯಂತಿದ್ದ ಸಿಲ್ವರ್ ಓಕ್ ಇದೀಗ ಬೇಡವಾಗಿದೆ.ಇದಕ್ಕೆ ಕಾರಣವಾಗಿರುವುದು ಭವಿಷ್ಯದಲ್ಲಾಗುವ ದುಷ್ಪರಿಣಾಮಗಳು. ಕಾಫಿ ತೋಟಗಳಲ್ಲಿ ಇರುವ ಮರಗಳನೆಲ್ಲಾ ಕಡಿದು ಸಿಲ್ವರ್ ಗಿಡ ಹಾಕಿ,ಇವುಗಳ ಬೆಂಬಲದಿಂದ ಕಾಳು ಮೆಣಸ್ಸು ಬೆಳೆಯುತ್ತಿದ್ದರೆ, ಮರ ಬಲಿತಂತೆಲ್ಲಾ ಹಣ ದುಪ್ಪಟ್ಟು ಆಗುವ ನಿರೀಕ್ಷೆಯಲ್ಲಿದ್ದ ಕಾಫಿ ಬೆಳೆಗಾರರು ಈ ವಿದೇಶಿ ಸಿಲ್ವರ್ ಮರಕ್ಕೆ ತಿಲಾಂಜಿ ಹೇಳುವ ಲಕ್ಷಣಗಳು ಘೋಚರಿಸಿದೆ.

ಇದಕ್ಕೆ ತಾಜಾ ಉದಾಹರಣೆ ಅಂದರೆ ಅರಣ್ಯ ಇಲಾಖೆಯಿಂದ ಉಚಿತವಾಗಿ ನೀಡಲಾಗುವ ಗಿಡಗಳು ಹಾಗೆ ನರ್ಸರಿಯಲ್ಲೇ ಉಳಿದುಕೊಂಡಿರುವುದು. ಕಾಡಿನ ಮರ ಕಡಿದು ನೆರಳಿನ ಮರ ಎಂದು ಹೆಚ್ಚಾಗಿ ಸಿಲ್ವರ್ ಮೊರೆ ಹೋಗಿದ್ದ ಬೆಳೆಗಾರರು,ಇದರ ದುಷ್ಪರಿಣಾಮಗಳನ್ನು ಅರಿತಿದ್ದಾರೆ. ಇಳಿಜಾರು ಪ್ರದೇಶದ ತೋಟದಲ್ಲಿ ಬೆಳೆದರೆ ಅಲ್ಲಿ ಮಣ್ಣು ಸವೆತವನ್ನೂ ಕಾಪಾಡಿಕೊಳ್ಳದಂತಹಾ ಈ ಮರಗಳಿಂದಲೇ ಜಿಲ್ಲೆಯಲ್ಲಿ ಭೂಕುಸಿತಕ್ಕೆ ಒಂದು ಕಾರಣ ಎಂದು ತಜ್ಞರು ಹೇಳಿದ್ದರು. ಇದರ ಜೊತೆ ಅರೇಬಿಕಾ ಕಾಫಿ ಬೆಳೆದವರೂ ಕಾಫಿಯ ಇಳುವರಿಗೂ ಪೆಟ್ಟು ಬೀಳುತ್ತಿರುವುದು ಮನದಟ್ಟಾಗಿರುವ ಬೆಳೆಗಾರರು ಸಿಲ್ವರ್ ನಿಂದ ದೂರವಾಗಿ ಮಹಗನಿಯತ್ತ ಒಲವು ತೋರುತ್ತಿದ್ದಾರೆ.

ಸಿಲ್ವರ್ ಮರಗಳಿಂದ ನೇರ ಹಾನಿಗಳನ್ನು ನೋಡುವುದಾದರೆ.ಇವುಗಳು ಬೆಳೆಯುವ ಜಾಗದಲ್ಲಿ ಮಣ್ಣಿನ ಪೋಷಕಾಂಶಗಳನ್ನು, ಗೊಬ್ಬರವನ್ನು ಸೆಳೆದುಕೊಳ್ಳುತ್ತವೆ.

ಜೇನು ನೋಣ, ಪಕ್ಷಿಗಳ ಆವಾಸ ತಾಣಗಳ ನಾಶವಾಗಿದೆ. ಕಾಡು ಹಣ್ಣುಗಳನ್ನು ತಿಂದು ಬದುಕುವ ಹಾರ್ನ್ ಬಿಲ್, ಜೈಂಟ್ ಸ್ಕ್ವಿರಿಲ್ ಆಹಾರವಿಲ್ಲದಂತಾಗಿರುವುದು ಮತ್ತು ಸಂತಾನ ಹಾನಿಯಾಗಿರುವುದು ವಿಪರ್ಯಾಸ…!

error: Content is protected !!