ನಿಮಿಷವೊಂದಕ್ಕೆ 350 ಕರಾಟೆ ಪಂಚ್!!
ಕರಾಟೆಯಲ್ಲಿ ಮರಳು ಮೂಟೆಗೆ ಒಂದು ನಿಮಿಷಕ್ಕೆ 350 ಪಂಚ್ ಗಳನ್ನು ಮಾಡುವ ಮೂಲಕ ವಿರಾಜಪೇಟೆಯ ಕಾಕೋಟುಪರಂಬುವಿನ ಕಡಂಗಮರೂರಿನ ಹಿತೈಶ್ ಭೀಮಯ್ಯ ಸಾಧನೆ ಮಾಡಿದ್ದಾರೆ.
ಪೊನ್ನಂಪೇಟೆಯ ಕುಂದಾ ಗ್ರಾಮದ ಕೂರ್ಗ್ ಇಸ್ಟಿಟ್ಯೂಟ್ ನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿರುವ ಇವರು ಆನ್ ಲೈನ್ ನಲ್ಲಿ 350 ಪಂಚ್ ನೀಡುವುದನ್ನು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಗೆ ಕಳುಹಿಸಲಾಗಿತ್ತು,ಇದನ್ನು ಪರಿಶೀಲಿಸಿದ ಸಂಸ್ಥೆ ಪ್ರಶಸ್ತಿ ಪತ್ರ ಮತ್ತು ಚಿನ್ನದ ಪದಕ ನೀಡಿ ಗೌರವಿಸಿದೆ.ಈ ಹಿಂದೆ ಒಡಿಶಾದ ಅಭಿನ್ ಕುಮಾರ್ ಎಂಬುವವರು ಪಂಚಿಂಗ್ ಪ್ಯಾಡ್ ಗೆ ನಿಮಿಷಕ್ಕೆ 292 ಬಾರಿ ಹೊಡೆಯುವ ಮೂಲಕ ದಾಖಲೆ ಮಾಡಿದ್ದರು,ಇದನ್ನು ಹಿತೈಶ್ ಹಿಮ್ಮೆಟ್ಟಿಸಿ ಹೊಸ ದಾಖಲೆ ಬರೆದಿದ್ದಾರೆ.ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಮಾಡುವ ಗುರಿ ಹೊಂದಿರುವ ಇವರು,ಸಿದ್ದತೆಯಲ್ಲಿ ತೊಡಗಿಕೊಂಡಿದ್ದಾರೆ.