ನೇರ ವೇತನ ಹಾಗು ನೇರ ನೇಮಕಾತಿಗೆ ಮನವಿ
ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣಪಂಚಾಯಿತಿ ಹೊರಗುತ್ತಿಗೆ ನೌರರ ಸಂಘ ಮಡಿಕೇರಿ ಘಟಕದಿಂದ ನೇರವೇತನ ಹಾಗೂ ನೇರ ನೇಮಕಾತಿಗಾಗಿ ಮನವಿ ಮಾಡಲಾಗಿದೆ.
ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಮಡಿಕೇರಿ ನಗರಸಭೆಯ ಎಲ್ಲಾ ಹೊರಗುತ್ತಿಗೆ ನೌಕರರು ಇದೇ ತಿಂಗಳ ದಿನಾಂಕ 19 ರಂದು ನೇರ ವೇತನ ಮತ್ತು ನೇರ ನೇಮಕಾತಿ ಮಾಡಿಕೊಡಬೇಕೆಂದು ನಗರಾಭಿವೃದ್ಧಿ ಕೋಶ ಮತ್ತು ಉಪ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಪತ್ರ ಸಲ್ಲಿಕೆ ಸಂದರ್ಭ ಮಡಿಕೇರಿ ಘಟಕದ ಅಧ್ಯಕ್ಷ ಈರಪ್ಪ ಶೆಟ್ಟಿ, ಉಪಾಧ್ಯಕ್ಷ ಬೋಪಣ್ಣ, ಕಾರ್ಯದರ್ಶಿ ರಮೇಶ್ ಕುಟ್ಟಪ್ಪ, ಖಜಾಂಜಿ ಕಬೀರ್ ಅಹಮದ್ ಹಾಗೂ ಸಂಘದ ಸದಸ್ಯರು ಹಾಜರಿದ್ದರು