ಸಿಮೆಂಟ್, ಉಕ್ಕಿನ ಬೆಲೆ ಏರಿಕೆ..
ಲಾಕ್ ಡೌನ್ ಇಂದಾಗಿ ಸಿಮೆಂಟ್ ಹಾಗು ಉಕ್ಕಿನ ದರ ಒಮ್ಮೆಲೆ 40 ರಿಂದ 50ರಷ್ಟು ಏರಿಕೆ ಮಾಡಲಾಗಿದೆ. ಲಾಕ್ ಡೌನ್ ಇದ್ದರೂ ಹಲವಾರು ರಾಜ್ಯಗಳಲ್ಲಿ ಪ್ರತಿ ಬ್ಯಾಗ್ ಸಿಮೆಂಟ್ ದರ 100-250 ರೂಪಾಯಿ ಹೆಚ್ಚಾಗಿತ್ತು. ಟನ್ ಉಕ್ಕಿನ ದರ 2000-2500 ರೂಪಾಯಿಗಳು ಜಾಸ್ತಿಯಾಗಿದೆ. ಇದರಿಂದಾಗಿ ಸರಕಾರ ನಿರ್ಮಾಣ ಕ್ಷೇತ್ರಕ್ಕೆ ಕಾರ್ಯ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡಿದ್ದರೂ, ನಿರ್ಮಾಣ ಹಂತದ ಕಟ್ಟಡಗಳು ಈ ಅನಿರೀಕ್ಷಿತ ಬೆಲೆ ಏರಿಕೆಯಿಂದಾಗಿ ತಾತ್ಕಾಲಿಕವಾಗಿ ಹಲವೆಡೆ ನಿಂತಿದೆ. ಸಂಪಾದನೆ ಇಲ್ಲದೆ ಹೈರಾಣಾಗಿರುವ ಜನರು ಈ ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ