fbpx

ವೈಝಾಗ್ ಅನಿಲ ದುರಂತವಾಗದಿರಲಿ, ಇನ್ನೊಂದು ಬೋಪಾಲ್ ಅನಿಲ ದುರಂತ!

ಕೊರೋನ ಅಬ್ಬರದ ನಡುವೆ ಮನೆಯಲ್ಲೇ ಧಿಗ್ಭಂದನವಾಗಿ ನೆಮ್ಮದಿಯಿಂದ ರಾತ್ರಿ ಗಂಜಿ ಕುಡಿದು ಕಣ್ಮುಚ್ಚಿ ನಿದ್ರಿಸುತ್ತಿದ್ದ ಜನರು, ಸುಖನಿದ್ರೆಗೆ ಜಾರಿದ್ದರು. ಜೀವನದ ಬಗ್ಗೆ ಅದೆಷ್ಟು ಕನಸ್ಸು ಕಾಣುತ್ತದ್ದರೋ ಏನೋ, ವಿಧಿ ಅವರನ್ನು ಸುಮ್ಮನೇ ಬಿಟ್ಟಿರಲಿಲ್ಲ ಉಸಿರುಗಟ್ಟುವ ಒಮ್ಮೆಲೆ ವಾತಾವರಣ, ನಿದ್ದೆಯಲ್ಲಿದ್ದವರಿಗೇನು ಗೊತ್ತು ತಾವು ಉಸಿರಾಡುತಿದ್ದದ್ದು ವಿಷಾನಿಲವೆಂದು, ಅದೆಷ್ಟೋ ಮಂದಿ ಬೆಳಗ್ಗೆ ಕಣ್ತೆರೆಯಲೇ ಇಲ್ಲ. ಪ್ರಾಣಿ ಪಕ್ಷಿಗಳು ಕೂಡ ಎಂದಿಗೂ ಏಳದಂತೆ ನೆಮ್ಮದಿಯ ನಿದ್ರೆಗೆ ಜಾರಿದ್ದವು.   

ಹೌದು.!   ಆಂದ್ರಪ್ರದೇಶದ ವಿóಷಾಖಪಟ್ಟಣಂ ನ ವೈಝಾಗ್ ನಗರದಲ್ಲಿ 70 ರ ದಶಕದಲ್ಲಿ ಸೌತ್ ಕೊರಿಯಾದ ಕೃಪಪೋಷಿತ ಎಲ್ ಜೆ ಪಾಲಿಮಾರ್ ಎಂಬ ಯಮಕಿಂಕರನೊಬ್ಬ ಜನಿಸಿದ್ದ. ಅವನು ನಿಧಾನವಾಗಿಯೇ ಬುಸುಗುಡುತ್ತಿದ್ದ, ಇದ್ದಕ್ಕಿದ್ದಂತೆ 1985 ಜೋರಾಗಿ ತನ್ನ ಒಡಲಲಿದ್ದ ಸ್ಟೀರೈನ್ ವಿಷಗಾಳಿಯನ್ನು ಬಿಟ್ಟು 200 ಕ್ಕೂ ಹೆಚ್ಚಿನ ಜನರನ್ನು ತನ್ನ ವಶಮಾಡಿಕೊಂಡಿದ್ದ, ಆಗಲೇ ಜನ ಬುದ್ದಿ ಕಲಿಯಬೇಕಿತ್ತು, ಇನ್ನೇನು ನಮಗೆ ಜೀವನ ನೀಡುತ್ತಿದೆಯಲ್ಲ ಎಂದು ಸುಮ್ಮನಿದ್ದರು ಆ ಸುಮ್ಮನಿದ್ದ ಪರಿಣಾಮ ಇಂದು ಜೀವಕಳೆದುಕೊಂಡಿದ್ದಾರೆ. ಕಂಕುಳಿನಲ್ಲಿಟ್ಟುಕೊಂಡ ಬೆಂಕಿಯಾಗಿದೆ.

ನಿಂತಲ್ಲಿಯೇ ಕುಸಿದು ಬೀಳುವ ಜನ, ಮಗುವಿಗೆ ಹುಷಾರು ತಪ್ಪಿದೆ ಎಂದು ಹೊತ್ತೊಯ್ಯುತ್ತಿರುವ ತಾಯಿ, ಇದ್ದಕ್ಕಿದಗ್ದಂತೆಯೇ ಆ ಮಗುವಿನ ಸಮೇತ ಧರೆಗುರುಳುವುದು, ಚರಂಡಿ ಗೊಚ್ಚೆ ಯಾವುದನ್ನು ಗಮನಿಸದೆ ಅಲ್ಲಲ್ಲಿ ಬಿದ್ದಿರುವ ಜನರು, ಮಲಗಿದಲ್ಲೇ ಉಸಿರುಬಿಟ್ಟ ಕೆಲ ಮಕ್ಕಳು, ಅಂಬಾ… ಎನ್ನುವುದನ್ನೇ ಮರೆತ ದನಗಳು, ದೂರದೂರಿಗೆ ಓಡಲು ಹಾತೊರೆಯುತ್ತಿದ್ದ ನಾಯಿಗಳು, ಸ್ವತಂತ್ರ್ಯವಾಗಿ ಹಾರಾಡುತ್ತಿದ್ದ ಹಕ್ಕಿಗಳು ಇದ್ದಕ್ಕಿದ್ದಂತೆ ಅಂಗಾತ ಮಲಗಿದ್ದ ಕ್ಷಣ, ಹಚ್ಚ ಹಸಿರಿನಿಂದ ಕೂಡಿದ್ದ ಮರ ಗಿಡಗಳು ನಿಧಾನವಾಗಿ ಹಳದಿಗಟ್ಟುತ್ತಿರುವುದು, ಬೈಕ್ ಓಡಿಸುತ್ತಿದ್ದವರು ಪಾರ್ಸಿ ಹೊಡೆಸವರಂತೆ ಬೀಳುವುದ ನೋಡಿದರೆ ಎಂತಹ ಕಲ್ಲು ಜೀವಕ್ಕೂ ಕಣ್ಣಂಚ್ಚಲ್ಲಿ ಬೇಡವೆಂದರೂ ನೀರು ಪ್ರತ್ಯಕ್ಷವಾಗುತ್ತದೆ. ಕೊರೋನ ಬಂದನಂತರವಂತೂ ಯಾವ ಟಿವಿ ಚಾನೆಲ್ ನೋಡಿದರೂ ಅದರದ್ದೇ ಹಾವಳಿ, ಇನ್ನೇನು ಅದೇ ಸುದ್ದಿಯಲ್ಲ ಎಂದು ಟಿವಿ ನೋಡುವುದನ್ನೇ ಬಿಟ್ಟಿದ್ದೆ, ಅಚಾನಕ್ಕಾಗಿ ಸುದ್ದಿ ಚಾನೆಲ್ ಒಂದರಲ್ಲಿ ನಿಂತಜಾಗದಲ್ಲೇ ಕುಸಿದುಬಿದ್ದ ಮಹಿಳೆಯನ್ನು ನೋಡಿ ಗಾಬರಿಯಾಯಿತು.

ತಲೆ ಸುತಿರ್ತಬೇಕೇನೋ ಎನ್ನುವಷ್ಟರಲ್ಲೆ ಕೆಳಗೆ ಒಂದು ಸುದ್ದಿ ಸ್ಕ್ರಾಲ್ ಆಗುತ್ತಿತ್ತು. ಅಯ್ಯೋ ಇದೆಂತ ಹೀಗಾಯಿತಲ್ಲ ಎಂದುಕೊಳ್ಳುತ್ತಿರುವಾಗ ಸಾವಿನ ಸಂಖ್ಯೆ 9 ಕ್ಕೆ ಏರಿಕೆಯಾಗಿತ್ತು 5 ಸಾವಿರಕ್ಕೂ ಹೆಚ್ಚಿನ ಮಂದಿ ಅಸ್ವಸ್ಥರಾಗಿದ್ದರು. ಅದು ನೆಡೆದದ್ದು ಆಂದ್ರಪ್ರದೇಶದ ವಿಶಾಖಪಟ್ಟಣಂ ನಗರದ ವೈಜಿಂಗ್ ನಗರದಲ್ಲಿರುವ ಸೌತ್ ಕೊರಿಯಾ ದೇಶದ ಕಂಪನಿಯಾದ ಎಲ್ ಜೆ ಪಾಲಿಮರ್ಸ್ ಖಾರ್ಖಾನೆಯಲಿ.್ಲ ಅನೇಕ ದಿನಗಳಿಂದ ಚಾಲನೆಯಲ್ಲಿಲ್ಲ ಹೊರಬಂದ ಸ್ಟೀರೈನ್ ಎಂಬ ವಿಷಾನಿಲದಿಂದ ಈ ದುರಂತ ನೆಡೆದದ್ದು. ಅದೇನು ಪಾಪಮಾಡಿದ್ದರೋ ಆ ಮುಗ್ದಜನ, ರಾತ್ರಿ ಸಮಯದಲ್ಲೇ ಈ ದುರಂತ ನೆಡೆದಿದೆ, ಬಹುಷಃ ಹಗಲಿನ ವೇಳೆಯಲ್ಲಿ ನೆಡೆದಿದ್ದರೆ ತಮ್ಮಮಕ್ಕಳನ್ನು ದೂರದೂರಿಗೆ ಹೊತ್ತೊಯ್ದು ತಮ್ಮ ಪ್ರಾಣ ಉಳಿಸಿಕೊಳ್ಳುತ್ತಿದ್ದರೇನೋ.

ಕಟ್ಟಿದ ಜಾಗದಲ್ಲೇ ಹೊಟ್ಟೆ ಉಬ್ಬಿಸಿಕೊಂಡು ಪ್ರಾಣ ಬಿಟ್ಟಿದ್ದ ಗೋಮಾತೆಯನ್ನು ಉಳಿಸಲು ಬಗವಂತನಿಂದಲೂ ಸಾದ್ಯವಾಗಲಿಲ್ಲ. ಸಾವಿನಿಂದ ಪಾರಾಗಲು ಅದೆಷ್ಟು ಹರ ಸಾಹಸ ಮಾಡಿದವೋ ಏನೋ. ಬಹುಷಃ ಕೊರೋನ ಲಾಕ್ ಡೌನ್ ಇಲ್ಲದಿದ್ದರೆ ಅನೇಕ ಮಂದಿ ಈ ದುರಂತದಿಂದ ಪಾರಾಗುತ್ತಿದ್ದರು.

   ಕೊರೋನ ಆವರಿಸಿದ್ದರಿಂದ ಇಲ್ಲಿಯವರೆಗೂ ವಿಶಾಕಪಟ್ಟಣದಲ್ಲಿ ಒಂದೇ ಒಂದು ಸಾವು ಸಂಭವಿಸಿರಲಿಲ್ಲ ವಿಧಿಯ ಆಟಕ್ಕೆ ಇಂತದ್ದೊಂದು ದುರಂತ ನೆಡೆದು ಅನೇಕ ಜನರು ಪ್ರಾಣಬಿಡುವಂತಾಯಿತು. ಆಸ್ಪತ್ರೆಗಳೆಲ್ಲ ಕೊರೋನ ಪೀಡಿತರಿಂದ ತುಂಬಿದ್ದವು, ನೆಲಕ್ಕುರುಳಿದವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ವಾಹನಗಳು ಇರಲಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ದೇವರು ಬರಲಿಲ್ಲವೆಂದರು ದೇವರ ರೂಪದಲ್ಲಿ ನಮ್ಮ ಯೋಧರು ಬರುತ್ತಾರೆ, ತಮ್ಮ ಹೆಗಲ ಮೇಲೆ ಹೊತ್ತು ನೆಡೆಯುತ್ತಾರೆ. ಈ ಘಟನೆ ಬೋಪಾಲ್ ನ ಅನಿಲ ದುರಂತವನ್ನು ನೆನಪಿಸುತ್ತದೆ. 

 ಅಭಿವೃದ್ಧಿ ಎಂಬ ಹೆಸರಿನಲ್ಲಿ ನಾವು ಸಾವನ್ನು ಸಮೀಪಕ್ಕೆ ಕರೆದುಕೊಳ್ಳುತ್ತಿದ್ದೇವೆ, ಕತ್ತಿ ಹರಿಯುತ್ತದೆ ಎಂದು ತಿಳಿದಿದ್ದರೂ ಅದರ ಮೇಲೆ ನೆಡೆದಂತಾಗುತ್ತದೆ ನಮ್ಮ ಬದುಕು. ಸುತ್ತಲೂ ಕಾರ್ಖಾನೆಗಳಿದ್ದು, ಬೇಕಾದ ಸೌಲಭ್ಯಗಳು ಬೆರಳಂಚಿನಲ್ಲೇ ದೊರೆತು ಅರಮನೆಯಲ್ಲಿ ಬದುಕುವುದಕ್ಕಿಂತ, ದೂರದ ಹಳ್ಳಿಯಲ್ಲಿ ಸಾಕು ಪ್ರಾಣಿಗಳ ಜೊತೆ, ಮೂರೊತ್ತು ಗಂಜಿ ಕುಡಿದು ನೆಮ್ಮದಿಯಿಂದ ಸಾವಿನ ಭಯವಿಲ್ಲದೆ ಬದುಕುವುದು ಒಳಿತು. ಈ ದುರಂತ ಇನ್ನೊಂದು ಬೋಪಾಲ್ ಅನಿಲ ದುರಂತವಾಗದಿರಲಿ ಎಂದು ಪ್ರಾರ್ಥಿಸೋಣ.

error: Content is protected !!
satta king chart