ವೇತನ ತಾರತಮ್ಯ ಪರಿಗಣಿಸುವಂತೆ ಸರಕಾರದ ಮುಂದೆ ಸಿಬ್ಬಂದಿಗಳ ಪಟ್ಟು

ನಾಡಹಬ್ಬ ಮೈಸೂರು ದಸರಾದ ಜಂಬು ಸವಾರಿಯಲ್ಲಿ ಕೊಡಗಿನ ಬಹುಪಾಲು ಆನೆಗಳು ಪಾಲ್ಗೊಳ್ಳುತ್ತವೆ, ಆದರೆ ಅವುಗಳ ನಿರ್ವಹಣೆ ಮಾಡುವ ಮಾವುತ, ಕಾವಾಡಿಗಳು ಸೇರಿದಂತೆ ಕುಶಾಲನಗರದ ದುಬಾರೆ ಮತ್ತು ತಿತಿಮತಿಯ ಮತ್ತಿಗೋಡಿನ ಕ್ಯಾಂಪಿನ ಸಿಬ್ಬಂದಿಯಿಂದ ಅಸಮಾಧಾನ ವ್ಯಕ್ತವಾಗಿದ್ದು, ತಮ್ಮ ಸಮಸ್ಯೆ ಬಗೆಹರಿವರೆಗೂ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ವೇತನ ತಾರತಮ್ಯ ಪರಿಗಣಿಸದಿದ್ದಲ್ಲಿ ಸರ್ಕಾರದ ಆನೆ ತೆಗೆದುಕೊಂಡು ಹೋಗಿ,ನಾವು ಮಾತ್ರ ನಿರ್ವಹಿಸಲು ಬರುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸ್ಥಳೀಯ ಶಾಸಕರಿಗೂ ಮನವಿ ಸಲ್ಲಿಸಲಾಗಿದ್ದು ಮುಂದಿನ ಕ್ರಮ ಬಗ್ಗೆ ಕಾದು ನೋಡಬೇಕಿದೆ.