fbpx

ವೆಜಿಟೇಬಲ್ ಔ-ಗ್ರಟಿನ್

ಪದಾರ್ಥಗಳು:
3tbsp. ಬಟರ ಅಥವಾ ತುಪ್ಪ
2tbsp. ಮೈದಾ
1-1/2 ಕಪ್ ಹಾಲು
1tsp. ಜಜ್ಜಿದ ಬೆಳ್ಳುಳ್ಳಿ
1 ಸಣ್ಣದಾಗಿ ಹೆಚ್ಚಿರುವ ಈರುಳ್ಳಿ
1 ಕಪ್ ಅರ್ಧ ಬೆಂದಿರುವ ತರಕಾರಿಗಳು (ಹುರಳಿಕಾಯಿ, ಕ್ಯಾರೆಟ್ ,ದೊಡ್ಮೆಣಸಿನಕಾಯಿ ಆಲೂಗಡ್ಡೆ ,ಹಸಿ ಬಟಾಣಿ)
2 ಕಪ್ ಮೋಜರೆಲ್ಲ ಚೀಸ್
ಮಿಕ್ಸ್ ಹರ್ಬ್ಸ್, ಕಾಳುಮೆಣಸಿನಪುಡಿ, ರೆಡ್ ಚಿಲ್ಲಿ ಫ್ಲೇಕ್ಸ್, ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ..
. ಒಂದು ಪ್ಯಾನ್ ನಲ್ಲಿ ತುಪ್ಪ ಹಾಕೋಳಿ, ತುಪ್ಪ ಕರಗಿ ತಕ್ಷಣ ಹೆಚ್ಚಿರುವ ಬೆಳ್ಳುಳ್ಳಿ ಹಾಕಿ ಮತ್ತು ಒಂದು ನಿಮಿಷ saute ಮಾಡಿ
. ಈಗ ಇದರಲ್ಲಿ ಅರ್ಧ ಬೆಂದಿರುವ ಎಲ್ಲ ತರ ತರಕಾರಿಗಳು ಹಾಕಿ ಚಿಟಿಕೆಯಷ್ಟು ಉಪ್ಪು ಸಹ ಹಾಕಿ 2 ನಿಮಿಷ ಕಲಸಿ
. ಈಗ ಇದರಲ್ಲಿನ ವೈಟ್ ಸಾಸ್ ತಯಾರಿಸೋಣ.
ಈ ತರಕಾರಿ ಮಧ್ಯ ಮೈದಾ ಹಾಕಿ ಚೆನ್ನಾಗಿ ಕೈಯಾಡಿಸಿ ಈಗ ಇದರಲ್ಲಿ ಒಂದು ಕಪ್ಪಿನಷ್ಟು ಹಾಲ್ ಹಾಕಿ ಕುಕ್ ಮಾಡಿ
. ಮಿಶ್ರಣ ಸ್ವಲ್ಪ ಗಟ್ಟಿಯಾಗುತ್ತೆ ಹಾಗಾಗಿ ಅರ್ಧ ಕಪ್ಪಿನಷ್ಟು ಹಾಲು ಮತ್ತೆ ಹಾಕಿ ಕೈಯಾಡಿಸಿ ಸಾರ್ ಹಾಗೆ ಕನ್ಸಿಸ್ಟೆನ್ಸಿ ಬರುವತನಕ ಕಮ್ಮಿ ಉರಿಯಲ್ಲಿ ಕೈಯಾಡಿಸಿ.
. 3-4ನಿಮಿಷ ಆದ ಮೇಲೆ ಇದರಲ್ಲಿ ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಚೀಸ್ ಕಾಳುಮೆಣಸಿನಪುಡಿ, ರೆಡ್ ಚಿಲ್ಲಿ ಫ್ಲೇಕ್ಸ್ ಮತ್ತು ಮಿಕ್ಸ ಹರ್ಬ್ಹಾ,ಕೈಯಾಡಿಸಿ..1-2 ನಿಮಿಷ ಕೈಯಾಡಿಸಿ ತೆಗೆದುಕೊಳ್ಳಿ.
. ಈಗ ಒಂದು ಮೈಕ್ರೋವೇವ್ ಸೇಫ್ ಕಂಟೇನರ್ ನಲ್ಲಿ ಈ ಮಿಶ್ರಣವನ್ನು ಹಾಕಿ
ಮೇಲ್ಗಡೆ ಇಂದು ಭರಪೂರ ಪ್ರಮಾಣದಲ್ಲಿ ಮೋಜ್ಜಾರೆಲ್ಲ ಚೀಸ ತುರಿದು ಹಾಕಿ
. ಈಗ 180degree preheated ಮೈಕ್ರೋವೇವ್ ನಲ್ಲಿ 10 ನಿಮಿಷ ಬೇಕ್ ಮಾಡಿ
(ಮೈಕ್ರೋವೇವ್ ಇಲ್ಲದಿದ್ದರೆ ಒಂದು ಬಾಂಡಲೆಯಲ್ಲಿ 1 ಕಪ್ ಉಪ್ಪು ಹಾಕಿ ಸ್ಟ್ಯಾಂಡ್ ಇಟ್ಟು ಅದರ ಮೇಲೆ ಟೀನ್ ಇಟ್ಟು ಮುಚ್ಚುಳ ಮುಚ್ಚಿ 15-20mins. ಕಮ್ಮಿ ಉರಿಯಲ್ಲಿ ಬೇಕ ಮಾಡಿ)
. ಅಗ್ರೇ ಟೆನ್ ಮೇಲಿನ ಕ್ರಸ್ಟ್
ಬ್ರೌನ್ ಆಗೋವರೆಗೆ ಬೇಕ ಪಾಡಿ..
ಇದಕ್ಕೆ ಗಾರ್ಲಿಕ್ ಬ್ರೆಡ್ ಅಥವಾ ಪೋಸ್ಟ್ ಮೇಲೆ ಹಾಕ್ಕೊಂಡು ತಿನ್ನುತ್ತಾರೆ.

ಸೋನಿಯಾ ಶೆಟ್ಟಿ
error: Content is protected !!