fbpx

ಮನುಷ್ಯ ಇಷ್ಟು ಕ್ರೂರಿಯಾಗಬಾರದಿತ್ತು…!

ಇದು ವಿನಾಶ ಕಾಲೇ ವಿಪರೀತ ಬುದ್ಧಿ ಅಲ್ಲದೆ ಮತ್ತೇನು?

ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಪರಿಸರ ಹಾಗು ಬೇರೆ ಜೀವ ಜಂತುಗಳ ಸಂಕುಲದ ಮೇಲೆ ಅಪಚಾರ ಮಾಡುತ್ತಾ ಬಂದ ಪರಿಣಾಮವಾಗಿ ಇಂದು ಕಣ್ಣಿಗೆ ಕಾಣದ ವೈರಾಣು ಕೊರೋನಾ ಮನುಷ್ಯ ಕುಲದ ವಿನಾಶಕ್ಕಾಗಿಯೇ ಬಂದ ಸೋಂಕಾಗಿ ಕಾಡುತ್ತಿದೆ. ಇನ್ನಾದರೂ ಮನುಷ್ಯ ಬುದ್ಧಿ ಕುರಿತು ತಪ್ಪು ತಿದ್ದಿಕೊಂಡು ನಡೆಯುವನೆಂದರೆ ಅದೂ ಇಲ್ಲ.

ಏಕೆಂದರೆ ವಿಶ್ವ ಆರೋಗ್ಯ ಸಂಸ್ಥೆ ಹಾಗು ಪ್ಯಾರಿಸ್ ಮೂಲದ ವಿಜ್ಞಾನಿಗಳು ಕೈಗೊಂಡಿರುವ ಅಧ್ಯಯನದಲ್ಲಿ ಮುಂಗುಸಿ ಜಾತಿಗೆ ಸೇರಿದ ಮಿಂಕ್ ಪ್ರಾಣಿಯಿಂದಲೇ ಕೊರೋನಾ ಸೊಂಕು ಹರಡುತ್ತಿದೆ ಎಂದು ಅನುಮಾನಿಸಿದ್ದಾರೆ. ಆದರೆ ಇನ್ನೂ ದೃಢವಾಗಿಲ್ಲ.

ಡೆನ್ಮಾಕ್೯ ಪ್ರಧಾನಿ ಮೆಟ್ಟೆ ಫ್ರಡೆಇಕ್ಸೆನ್

ಅಷ್ಟರಲ್ಲೇ ಡೆನ್ಮಾಕ್೯ ದೇಶದ ಪ್ರಧಾನಿ ಮೆಟ್ಟೆ ಫ್ರಡರಿಕ್ಸೆನ್,’ಮಿಂಕ್ ಪ್ರಾಣಿಯನ್ನು ತಪಾಸಣೆ ಮಾಡುವಾಗ ಅದರಲ್ಲಿ ಕೊರೋನಾ ವೈರಸ್ ಇರುವುದು ಕಂಡು ಬಂದಿದೆ. ಹೀಗಾಗಿ ನಮ್ಮ ಜನರನ್ನು ಕಾಪಾಡುವುದು ಮುಖ್ಯ ಆದ್ದರಿಂದ ಈ ಪ್ರಾಣಿಗಳನ್ನು ಕೊಂದು ಇನ್ನಿಲ್ಲವಾಗಿಸುವುದೇ ಸದ್ಯದ ದೊಡ್ಡ ಜವಾಬ್ದಾರಿ’ ಎಂದು ಹೇಳಿಕೆ ನೀಡಿದ್ದಾಳೆ. ಅಲ್ಲದೇ ಆ ದೇಶದಲ್ಲಿ ಇರುವ ಒಟ್ಟು 1.70 ಕೋಟಿ ಮಿಂಕ್ ಗಳನ್ನು ಕೊಂದು ಹಾಕಲು ನಿಶ್ಕರುಣಿಯಂತೆ ಆದೇಶ ನೀಡಿದ್ದಾಳೆ.

ಯುರೋಪ್ ರಾಷ್ಟ್ರಗಳಲ್ಲೇ ಅತಿ ಹೆಚ್ಚು ಮಿಂಕ್ ಪ್ರಾಣಿಯನ್ನು ಹೊಂದಿರುವ ಡೆನ್ಮಾಕ್೯ ತನ್ನ ದೇಶದಲ್ಲಿರುವ ಎಲ್ಲಾ ಆ ಪ್ರಭೇಧದ ಪ್ರಾಣಿಯನ್ನು ಕೊಲ್ಲುವಂತೆ ಆದೇಶಿಸಿರುವುದು ಮನುಷ್ಯ ಬಿಸಿ ರಕ್ತದ ಪ್ರಾಣಿಯಾ ಎಂಬ ಅನುಮಾನ ಮೂಡಿಸುತ್ತದೆ. ಏಕೆಂದರೆ ತಣ್ಣಗಿನ ಕ್ರೌರ್ಯ ಮೆರೆಯಲು ಅಟ್ಟಹಾಸ ಬೀರಲು ಹೊರಟಿದ್ದಾನೆ.

ಮನುಷ್ಯನೇಕೆ ಹೀಗಾಗಿ ಹೋದ!

ಸದಾ ಸ್ವಾರ್ಥ ದುರಾಸೆಯಿಂದ ಬೀಗುತ್ತಿರುವ ಮನುಷ್ಯ ಕುಲ ತನ್ನಷ್ಟೇ ಬೇರೆ ಪ್ರಾಣಿ ಪಕ್ಷಿ ಹುಳ ಹುಪಟೆಗಳೂ ಸಮಾನ ಹಕ್ಕು ಈ ನಿಸರ್ಗದಲ್ಲಿ ಇದೆ ಎಂಬುದನ್ನು ಮರೆತು‌ ಮೆರೆಯುತ್ತಿದ್ದಾನೆ. ತಾನು ಬದುಕುವ ಸಲುವಾಗಿ ಬೇರೆ ಜೀವಿಗಳಿಗೆ ಅಕ್ಷರಶಃ ಕಂಟಕ ಪ್ರಾಯವಾಗಿ ಪರಿಣಮಿಸಿ ಬಿಟ್ಟಿದ್ದಾನೆ.

ಇದೇ ಮೊದಲೇನಲ್ಲ!

ಆಸ್ಟ್ರೇಲಿಯಾ ದೇಶದಲ್ಲಿ ಇತ್ತೀಚೆಗೆ ನೀರಿನ ಅಭಾವ ಉಂಟಾಗುತ್ತಿದ್ದ ಕಾರಣ ಹೆಲಿಕಾಪ್ಟರ್ ಬಳಸಿ ಆಗಸದಿಂದ ಬಂದೂಕಿನ ಕಾಡುತೂಸುಗಳಿಂದ ಹೊಡೆದು ಸುಮಾರು ಬರೊಬ್ಬರಿ 10,000 ಒಂಟೆಗಳನ್ನು ಕೊಂದು ಹಾಕಲಾಯಿತು.

ಅದೇ ಆಸ್ಟ್ರೇಲಿಯಾದಲ್ಲಿ ಅಪಘಾತಗಳಿಗೆ ಹಾಗು ಬೆಳೆ ನಾಶಕ್ಕೆ ಕಾರಣವಾಗುತ್ತಿದೆ ಎಂಬ ಕಾರಣಕ್ಕೆ ಕ್ಯಾಂಗರೂಗಳನ್ನು ಬಾರಿ ಸಂಖ್ಯೆಯಲ್ಲಿ ಕೊಲ್ಲಲಾಯಿತು. ಕ್ಯಾಂಗರೂ ಮಾಂಸೋದ್ಯಮವನ್ನು ವಿಶಾಲವಾಗಿಸಲಾಯಿತು. ಅವುಗಳ ಸಂಖ್ಯೆ ಹೇರಳವಾಗಿ ಬೆಳೆದ ಕಾರಣಕ್ಕಾಗಿ ಆ ದೇಶದ ರಾಷ್ಟ್ರೀಯ ಚಿಹ್ನೆ ಅದಾದರೂ ಅವುಗಳನ್ನು ಕಣ್ಣಿನಲ್ಲಿ ರಕ್ತ ಇಲ್ಲದ ರಾಕ್ಷಸರಂತೆ ಕೊಂದು ಹಾಕಿದರು.

ಬೋಟ್ಸ್ನೋವಾ ದೇಶದಲ್ಲಿ ಆನೆ ಮನುಷ್ಯನ ನಡುವಿನ ಸಂಘರ್ಷ ಅತಿ ಹೆಚ್ಚು. ಇತ್ತೀಚೆಗೆ ನೂರಾರು ಆನೆಗಳು ನಿಗೂಢವಾಗಿ ಸಾಯುತ್ತಿರುವ ಘಟನೆ ನಡೆಯಿತು ಸರಣಿಯಂತೆ. ಅದು ಕೂಡ ಮನುಷ್ಯನೇ ವಿಷ ಪ್ರಾಶಾನ ಮಾಡಿಕೊಂಡಿರುವ ಸಂಶಯವಿದೆ.

ಚೀನಾದಲ್ಲಿ ಹಿಂದೆ 1958 ಮಾವೋತ್ಸೆದುಂಗ್ ಬೆಳೆ ನಾಶ ಮಾಡುತ್ತವೆ ಎಂದು ಎಲ್ಲಾ ಗುಬ್ಬಚ್ಚಿಗಳನ್ನೂ ಕೊಲ್ಲಿಸಿದ್ದ. ಅದು ಇತಿಹಾಸವೇ ಕಂಡು ಕೇಳರಿಯದಂತಹ ಸಮಸ್ಯೆಯನ್ನು ಅಲ್ಲಿನ ಪರಿಸರದಲ್ಲಿ ಉಂಟು ಮಾಡಿತ್ತು ಕ್ರಮೇಣ.

ಇನ್ನು ಕಾಡು ಪ್ರಾಣಿಗಳ ಕಳ್ಳ ಸಾಗಣಿ, ಬೇಟೆಗಳು ಪ್ರಪಂಚಾದ್ಯಂತ ಎಲ್ಲಾ ದೇಶಗಳಲ್ಲೂ ಕಾನೂನಿನ ತಡೆ ಇದ್ದರೂ ಕದ್ದು ಮುಚ್ಚಿ ಅವ್ಯಾಹತವಾಗಿ ನಡೆಯುತ್ತಲೇ ಇವೆ. ಮನುಶ್ಯನ ಈ ಕ್ರೌರ್ಯ, ದೌರ್ಜನ್ಯ ಪರಿಸರದ ಮೇಲೆ ನಡೆಯುತ್ತಲೇ ಇದೆ. ನಾನೂ ಒಬ್ಬ ಮನುಷ್ಯನಾಗಿ ಈ ಭೂತಾಯಿಗೆ ‘ಮನುಷ್ಯ ಕುಲವನ್ನು ದಯಮಾಡಿ ಮನ್ನಿಸು ತಾಯೇ’ ಎಂದಷ್ಟೇ ಬೇಡುತ್ತೇನೆ.

ರಜತ್ ರಾಜ್ ಡಿ.ಹೆಚ್, ಸುದ್ದಿ ಸಂತೆ ಸಂಪಾದಕರು
error: Content is protected !!