ಪದ್ಮ ಶ್ರೀ ಬಲ್ಬೀರ್ ಸಿಂಗ್ ಇನ್ನು ನೆನಪು ಮಾತ್ರ …
ಅದ್ವಿತೀಯ ಭಾರತೀಯ ಹಾಕಿ ಆಟಗಾರ ಬಲ್ಬೀರ್ ಸಿಂಗ್ ಲಂಡನ್(1948), ಹೆಲ್ಸಿಂಕಿ(1952) ಮತ್ತು ಮೆಲ್ಬೋನ್೯(1956)ರಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದು, ದೇಶಕ್ಕೆ ಹೆಮ್ಮೆ ಉಂಟು ಮಾಡಿದರು.
ಧ್ಯಾನ್ ಚಂದ್ ನಂತರ ದೇಶದ ಹಾಕಿ ಕ್ರೀಡೆ ದಂತಕತೆ ಎನಿಸಿಕೊಂಡಿರುವ ಬಲ್ಬೀರ್ ಸಿಂಗ್ 95 ವಯಸ್ಸಾಗಿತ್ತು ಮತ್ತು ಅವರು ಅನಾರೋಗ್ಯದ ಬಹಳಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದರು.
ಇಂದು ಬೆಳಿಗ್ಗೆ 6:30 ಗಂಟೆಗೆಲ್ಲಾ ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಇಹಲೋಕದ ಯಾತ್ರೆ ಮುಗಿಸಿ ಚಿರಸ್ತಬ್ಧರಾದರು.
ಅವರು ಭಾರತೀಯ ಹಾಕಿ ರಂಗದಲ್ಲಿ ಕಣ್ಮರೆಯಾಗದ ತಾರೆಯಾಗಿ ಇತಿಹಾಸ ಪುಟಗಳಲ್ಲಿ ಉಳಿದುಕೊಳ್ಳಲಿದ್ದಾರೆ.