✍ಸಚಿನ್ ಕೇನೆರ,

ಚಿತ್ರ: ಪೂಜಾರಿರ ಕುಟುಂಬದ ಐನ್ ಮನೆ (ದೊಡ್ಡಮನೆ), ಅರ್ವತೊಕ್ಲು

ನಾವು ಗೌಡ ಜನಾಂಗದವು ಹತ್ತು ಕುಟುಂಬ ಹದಿನೆಂಟ್ ಗೋತ್ರದವು ಕೊಡ್ಗ್ ಲಿ ತಮ್ಮದೇ ಅದ ಅಚಾರ – ವಿಚಾರ ಪದ್ದತಿಂದ ಹೆಸ್ರ್ ಮಾಡಿಯೊಳೊ.

ನಮ್ಮ ಜನಾಂಗದ ಪದ್ದತಿಗಳ ಅಚರಣೆ ಮಾಡ್ಕನ ಆಗುವ ಕುಸಿ ಉಟ್ಟಲ ಅದನ ಹೇಳಿಕೆ, ವರ್ಣಿಸಿಕೆ ಸಾಧ್ಯ ಇಲ್ಲೆ. ನಾವು ಹೆಚ್ಚಾಗಿ ಕುಟುಂಬದ ಜಂಬರನ ದೊಡ್ಡಮನೆಲ್ಲಿ ಅಚರಣೆ ಮಾಡಿವೆ. ಇಂತ ಹೊತ್ತ್ ಲಿ ಆ ದೊಡ್ಡಮನೆಲ್ಲಿ ಹಬ್ಬದ ಗೌಜಿ ಇದ್ದದೆ. 

ಕೊಟ್ಟವು – ತಂದವು, ಮಕ್ಕ – ಮರಿಗ ಎಲ್ಲಾ ಕೂಡಿಕಂಡ್ ಗೌಜಿಲಿ ಇದ್ದವೆ. ಏನಾರ್ ಜಂಬರ ನಡಿಯಕೆ ಒಂದಿನ ಮುಂದೆ  ನೆಂಟ್ರ್ ಗ ಬಂದವೆ. ಆ ನೆಂಟ್ರ್ ಬಾಕನ ನಡ್ಸಿಕೆ ಇರುವ ಜಂಬರಕ್ಕೆ ಒಂದು ಗೌಜಿ ಬಂದಂಗೆ ಆದೆ.

ಸಾಮಾನ್ಯ ಅಗಿ ದೊಡ್ಡಮನೆತ ಹೇಳ್ರೆ ಆ ಮನೆಲಿ ಮೂರು ನಾಲ್ಕ್ ಕಡೆವು ವಾಸ ಇದ್ದವೆ. ನೆಂಟ್ರ್ ಬಾಕನ ಎಲ್ಲವ್ರ ಮನೆಒಳಗೆಂದ ನೀರ್ ತಕಂಡ್ ಬಂದ್ ಕಾಲ್ ಹಿಡಿಯೋದು ಪದ್ದತಿ. ಹಿರಿಯವರ ಕಾಲ್ ಹಿಡ್ದು ಅವರ ಆಶೀರ್ವಾದ ತಕಂಬದು ನಮ್ಮ ಸಂಪ್ರದಾಯನ ಎತ್ತಿ ತೋರ್ಸಿದೆ.

ಹಿಂಬೊತ್ತ್ ಆಕನ ಎಲ್ಲಾವು ಮಾರ್ನೆ ದಿನ ನಡೀವ ಜಂಬರಕ್ಕೆ ತಯಾರಿ ಮಾಡಿಕಂಡವೆ‌. ಎಲ್ಲಾವು ಒಳಗೆಂದ ಎದ್ದ್ ಬಂದ್ ಒಂದ್ ಕಡೆ ಕುದ್ದ್ ಮಾತಡಿಕಂಡ್ ಕೆಲ್ಸ ಮಾಡಿವೆ. ಹಂಗೆ ನೆರೆಮನೆಯವು ಸಹ ಬಂದ್ ದೊಡ್ಡಮನೆಗೆ ಸೇರಿಕಂಡ್ ಒಂದು ಕುಸಿ ಕೊಟ್ಟ್ ಮನೆಗೆ ಒಂದು ಪೊರ್ಲುನ ತಂದವೆ.

ರಾತ್ರೆ ಎಲ್ಲಾ ಮಾತಡಿಕಂಡ್ ಮಲ್ಗಿ ಬೆಳಿಗ್ಗೆ ಬ್ಯಾಗ ಎದ್ದ್ ಮನೆಯವು ಎಲ್ಲಾ ಕೂಡಿಕಂಡ್ ಕುಟುಂಬದ ಪಟ್ಟೆದಾರ ಕಾರಣಕ್ಕೆ ಮಾಡ್ಗಿ ಗುರುಕಾರೋಣರ ಬೇಡಿಕಂಡ್ ಕಾರ್ ಬಾರ್ ಲಾಯಿಕ ನಡಿಯೋಕುತ ಬೇಡಿಕಂಡವೆ. ಅಲ್ಲಿಂದ ಐಂಬರಕ್ಕೆ ತಂದ್ ಕೊಟ್ಟ ಕರಿಕಾಫಿನ ಕುಡಿಯಕನ ಆಗುವ ಕುಸಿನೇ ಬ್ಯಾರೆ. ಅಲ್ಲಿಂದ ಏನ್ ಜಂಬರ ಉಟ್ಟು ಅದ್ಕೆ ಎಲ್ಲ ಬಟ್ಟೆ – ಬರಿ ಹಾಕಂಡ್ ತಯಾರದವೆ.

ಜಂಬರಕ್ಕೆ ಬಂದವುಕ್ಕೆ ದೊಡ್ಡಮನೆ ಅಂಗಳಲ್ಲಿ ಬೆಂಚ್ , ಕುರ್ಚಿ ಮಾಡ್ಗಿ ಶೃಂಗಾರ ಮಾಡಿದವೆ. ದೊಡ್ಡಮನೆಲಿ ನಡೀವ ಜಂಬರಕ್ಕೆ ನೆರಮನೆಯವು, ಊರವು, ನೆಂಟ್ರ್ ಗ ಸೇರ್ಕನ ಅಲ್ಲಿ ಒಂದು ಸ್ವರ್ಗಲೋಕನೆ ಸೃಷ್ಟಿ ಅಗಿದ್ದದೆ‌‌. ಇನ್ನ್ ಬಂದವುಕೆ ಕುಡಿಯಕೆ ಕಾಫಿ – ತಿಂಡಿ ಮೂಲೇಲಿ ಮೇಜ ಮ್ಯಾಲೆ ಇದ್ದದೆ. ಅದನ ಕೊಡಿಕೆ ಸಣ್ಣ ಮಕ್ಕ ನಿತ್ತಿದವೆ. ಅವರ ಗೌಜಿ ಅಂತೂ ಹೇಳ್ದೆ ಬ್ಯಾಡ ಮಧ್ಯಾಹ್ನದ ಊಟಕ್ಕೆ ಹಿಂದೆನ ಕೊಟ್ಟಗೆಲಿ ಊಟ ತಯಾರ್ ಮಾಡಿವೆ‌.

ನೆರಮನೆವು, ನೆಂಟ್ರ್ ಗ, ಮನೆವು ಎಲ್ಲಾ ಕೂಡಿ ಊಟ ಮಾಡಿವೆ. ಊಟ ಅದಂಗೆ ಒಂದು ಕಡೆ ಎಲೆ, ಅಡಿಕೆ ಮಡ್ಗಿದ್ವವೆ. ಜಂಬರ ಮುಗ್ದ ಮ್ಯಾಲೆ ಎಲ್ಲಾವು ಮನೆ ಒಳಗೆ  ಹೋಗಿ ಮನೆಯವರ ಮಾತಡ್ಸಿ ಹೊರ್ಟವೆ. ಇನ್ನ್ ನೆಂಟ್ರ್ ಗಳ ಹಠ ಮಾಡಿ ಒಳ್ಸಿಕಂಡವೆ. ಇನ್ನ್ ಹೆಣ್ಣ್ ಮಕ್ಕ ಎಲ್ಲಾ ಸೇರಿ ಪಾತ್ರೆ ತೊಳ್ದ್ ಎಲ್ಲ ಮನ್ನಾರ ಮಾಡಿವೆ. ಇನ್ನ್ ರಾತ್ರೆ ಸಹ ಅಲ್ಲಿ ಒಂದು ಹಬ್ಬದ ವಾತಾವರಣ ಕಂಡದೆ.

ಹಿಂಗೆ ನಮ್ಮ ದೊಡ್ಡಮನೆಗಳ್ಲಿ ಏನರ್ ಒಂದು ಜಂಬರ ಅದರೂ ಎಲ್ಲಾವುಕ್ಕೂ ಒಂದು ಹಬ್ಬದ ವಾತಾವರಣನೆ ಇಂಥ ದೊಡ್ಡಮನೆಗಳ ಉಳ್ಸಿ ಬೆಳ್ಸಿ ನಮ್ಮ ಅಚಾರ, ವಿಚಾರ, ಪದ್ದತಿನ ಹೇಳಿಕಂಡ್ ನಮ್ಮ ಎಲ್ಲವ್ರ ಮುಖ್ಯ ಕರ್ತವ್ಯ. ಖಂಡಿತ ಎಲ್ಲಾವೂಕ್ಕೂ ಇದರ  ತಿಳುವಳಿಕೆ ಇರೋಕು. ದೊಡ್ಡಮನೆ ( ಐನ್ ಮನೆನ ) ನಾವು ಎಲ್ಲಾವು ಉಳ್ಸಿ ಬೆಳ್ಸನೊ, ಪ್ರಯತ್ನ ಪಡ್ನೊ.

✍ಸಚಿನ್ ಕೇನೆರ

error: Content is protected !!