Pop ಲೋಕದ ದೊರೆಯಾಗಿ ಮೆರೆದು ಮರೆಯಾದ ಎಂ.ಜೆ ಜನುಮ ದಿನವಿಂದು!

ಎಲುಬೇ ಇಲ್ಲವೇನೋ ಎಂಬಂತೆ ಮಸ್ತ್ ಮಸ್ತ್ ನೃತ್ಯದ ಮೈ ಚಳಕ. ಒಂದೊಂದು ಹೆಜ್ಜೆಗೂ ಪ್ರೇಕ್ಷಕರು ಆಗುತ್ತಿದ್ದರು ಪುಳಕ, ಅವನ ಹಾಡು ಕೇಳಿ ಅಂತೂ ಜನರಾಗುತ್ತಿದ್ದರು ಮೂಕ ವಿಸ್ಮಿತ, ಅವನೇ ಅಸಮಾನ್ಯ ಪ್ರತಿಭಾವಂತ ‘ಮೈಕಲ್ ಜಾಕ್ಸನ್!

ಅವನತ್ತ ಜಗತ್ತೇ ತಿರುಗಿ ನೋಡಿ, ಅಚ್ಚರಿ ಪಡುವಂತೆ ಬೆಳೆದು ಸಂಗೀತ ಸಂಯೋಜಕ, ಗೀತ ಸಾಹಿತಿ, ಹಾಡುಗಾರ, ನೃತ್ಯಪಟು. ಮೈಕಲ್ ಜಾಕ್ಸನ್ ತನ್ನ 5ನೇ ವಯಸ್ಸಿಗೇ ‘Jackson 5’ ಎಂಬ ತಂಡ ಕಟ್ಟಿ ಜನ ಮನರಂಜಿಸಲು ಆರಂಭಿಸಿದರು ಜಾಕ್ಸನ್ ಸಹೋದರರು.

ಅವನ Bad, Dangerous, Invincible, Triller, Off the wall, Music and we, Got to be there ಇತ್ಯಾದಿ ಜಾಕ್ಸನ್ ಹಾಡುಗಳ ಧ್ವನಿಸುರುಳಿಗಳು ಲೋಕಾದ್ಯಂತ ಭರ್ಜರಿ ಮಾರಾಟವಾಗಿ ಪ್ರಸಿದ್ಧವಾದವು.

ಎಂ.ಜೆ ಒಟ್ಟು 200 ಹಾಡುಗಳನ್ನು ಮಾಡಿದರು. 10 ಸ್ಟುಡಿಯೋ ಶುರು ಮಾಡಿದರು. ಒಂದು ನೇರ ಪ್ರಸಾರದ ಧ್ವನಿ ಸುರುಳಿ ಮಾಡಿದರು‌. 34 ಹಾಡುಗಳ ಸಂಕಲನದ ಧ್ವನಿ ಸುರುಳಿ, ಏಳು ರಿಮಿಕ್ಸ್ ಆಲ್ಭಂಗಳನ್ನು ತಯಾರಿಸಿದರು. ಇನ್ನೂ ಜಾಕ್ಸನ್ನಿನ 180ಕ್ಕೂ ಹೆಚ್ಚು ಹಾಡುಗಳು ಬಿಡುಗಡೆ ಭಾಗ್ಯವನ್ನೇ ಇನ್ನೂ ಕಂಡಿಲ್ಲ.

ಜಾಕ್ಸನ್ ಮೊದಲ ಗ್ರಾಮ್ಮಿ ಪ್ರಶಸ್ತಿಯನ್ನು ‘Off the Wall’  ಎಂಬ ಧ್ವನಿ ಸುರುಳಿಗೆ ಗೆದ್ದರು. ‘ತ್ರಿಲ್ಲರ್’ ಧ್ವನಿ ಸುರುಳಿಯೂ ಜಗತ್ತಿನೆಲ್ಲೆಡೆ ಅತಿ ಹೆಚ್ಚು ಖರೀದಿಸಲ್ಪಟ್ಟ ಸಂಗೀತದ ಆಲ್ಭಂ ಆಗಿ ಒಟ್ಟು 47 ಮಿಲಿಯನ್ ಪ್ರತಿಗಳು ಮಾರಾಟವಾದವು. ಮತ್ತು ಇದು 1971-75ರ ತನಕವೂ ಅತ್ಯಂತ ಜಾಸ್ತಿ ಮಾರಾಟವಾದ ಆಲ್ಭಂ ಎಂಬ ಹೆಗ್ಗಳಿಕೆ ಗಳಿಸಿತ್ತು.

ಅಂತಹ ಸೃಜನಶೀಲ ವ್ಯಕ್ತಿಗೂ ವೈಯಕ್ತಿಕ ಜೀವನ ಸರಿ ಇರಲಿಲ್ಲ. ಹಲವಾರು ಸಮಸ್ಯೆ, ಗೊಂದಲ, ಭಯವಿತ್ತು ಅವನಲ್ಲಿ. ಪರಿಣಾಮ ಜಾಕ್ಸನ್ ಯಶಸ್ಸಿನ ಉತ್ತುಂಗಕ್ಕೆ ಏರಿದರೂ ನೆಮ್ಮದಿಯೆಂಬುದು ಲವಲೇಶವೂ ಇರಲಿಲ್ಲ. ಜೂನ್ 25, 2009ರಂದು ಅನುಮಾನಾಸ್ಪದ ರೀತಿಯಲ್ಲಿ ಇಹಲೋಕ ತ್ಯಜಿಸಿದ ಮೈಕಲ್‌ ಜಾಕ್ಸನ್ ಅಲ್ಲಿಂದೀಚೆಗೆ ಅಭಿಮಾನಿಗಳಿಗೆ ನೆನಪಿನಲ್ಲಿ‌ ಮಾತ್ರವೇ‌ ಉಳಿದಿದ್ದಾನೆ. ಅಂತಹ ವಿಶ್ವ ಖ್ಯಾತಿ ಪಡೆದ ಮೈಕಲ್ ಜಾಕ್ಸನ್ ಹುಟ್ಟು ಹಬ್ಬ ಇಂದು ಎಂಬುದು ಸಡಗರದ ವಿಚಾರವೇ ಸರಿ…

error: Content is protected !!
satta king chart