fbpx

ದೊಡ್ಡ ಪತ್ರೇ ಪೂರಿ

ಔಷಧೀಯ ಗುಣಗಳುಳ್ಳ ದೊಡ್ದ ಪತ್ರೇ ಎಲೇ , ಸಾಮಾನ್ಯವಾಗಿ ಎಲ್ಲರ ಕೈತೋಟದಲ್ಲಿ ಇರುವುದನ್ನು ಕಾಣುತ್ತೇವೇ ..ಹಿಂದೇ ಸಣ್ಣ ಪುಟ್ಟ ನೇಗಡಿ , ಶೀತ , ಕೆಮ್ಮು ,ಜ್ವರ ಗಂಟಲು ನೋವಿಗೆ ಇದರ ರಸ ಕುಡಿಸೋರು !

ಅತ್ಯಂತ ಉಪಯುಕ್ತವಾದ ಈ ಎಲೇಯನ್ನು ಆರೋಗ್ಯದ ದ್ರಷ್ಟಿಯಿಂದ ನಮ್ಮ ಅಡುಗೇಯಲ್ಲಿ (ಅದರಲ್ಲೂ ಮಳೇ -ಚಳಿಗಾಲದಲ್ಲಿ )
ಬಳಸೋದು ತುoಬಾ ಒಳ್ಳೇಯದು ..
ಹಾಗಾಗಿ ಈ ಎಲೇಗಳನ್ನು ಬಳಸಿ ಪೂರಿ try ಮಾಡಿದ್ದೀನಿ ..ತುoಬಾ ರುಚಿಕರವಾಗಿದೇ ..ofcourse healthy too !

ವಿಧಾನ:

12-15ದೊಡ್ದ ಪತ್ರೇ ಎಲೇಗಳನ್ನು ತೊಳೇದು ಸಣ್ಣಗೇ ಕತ್ತರಿಸಿ ಕೊಳ್ಳಿ .

ಬಾಣಲೇಗೇ ತುಪ್ಪ ಒಂದು ಚ ಹಾಕಿ ದೊಡ್ದ ಪತ್ರೇ ಎಲೇಗಳು , 2ಹಸಿಮೇಣಸಿನಕಾಯಿ , ಶೂನ್ಯ ಸ್ವಲ್ಪ ..ಜೀರಿಗೇ ಸ್ವಲ್ಪ ಹಾಕಿದ ಹುರಿದು
ತಣ್ಣಗಾದ ಮೇಲೇ ಚೂರು ನೀರು ಹಾಕಿ
ರುಬ್ಬಿ ಕೊಳ್ಳಿ .

ಒಂದು ಮಿಕ್ಸಿoಗ್ ಬೌಲ್ ಗೇ ಒಂದು ದೊಡ್ದ ಕಪ್ ಗೋಧಿ ಹಿಟ್ಟು ..ಉಪ್ಪು , ರುಬ್ಬಿದ ಮಿಶ್ರಣ , ಹಾಕಿಮಿಶ್ರ ಮಾಡಿ !
ಈಗ ಅಗತ್ಯಕ್ಕೇ ತಕ್ಕಷ್ಟು ನೀರು ಸ್ವಲ್ಪ ಸ್ವಲ್ಪ ಹಾಕಿ ನಾದಿ ..ಒಂದು ಚ ಎಣ್ಣೇ ಹಾಕಿ ಚೇನ್ನಾಗಿ ನಾದಿ ಕೊಳ್ಳಿ .

ಸಣ್ಣ ಸಣ್ಣ ಉಂಡೇ ಮಾಡಿ ..ಪೂರಿ ಲಟ್ಟಿಸಿ ಇಟ್ಟುಕೊಳ್ಳಿ ..

ಬಾಣಲೇಗೇ ಎಣ್ಣೇ ಹಾಕಿ ಕಾದ ಮೇಲೇ ಒಂದೊಂದೇ ಪೂರಿ ಹಾಕಿ ಕರಿದು ತೇಗೇಯಿರಿ ..

ಈಗ ಬಿಸಿ ಬಿಸಿ ಪೂರಿ ಸವಿಯಲು ಸಿದ್ಧ ..
ನಾನು ದಹಿ ಆಲೂ ಜೊತೇ ಸವಿದೇ !

ಬೋಪಯ್ಯ ಚೋವಂಡ
error: Content is protected !!
satta king chart