ಕೊತ್ತಂಬರಿ ಸೊಪ್ಪಿನ ಉಪ್ಪಿನಕಾಯಿ

ನಮಸ್ಕಾರ,

ಬೇಕಾಗುವ ಸಾಮಗ್ರಿಗಳು

2 ಕಟ್ ಕೊತಂಬರಿ ಸೊಪ್ಪು ಹೆಚ್ಚಿದ್ದು
100 ಗ್ರಾಂ ಹುಣಸೆ ಹಣ್ಣು
2 ಟೇಬಲ್ ಚಮಚ ಸಾಸಿವೆ
2 ಟೀ ಚಮಚ ಮೆಂತೆ ಕಾಳು
1/4 ಟೀ ಚಮಚ ಹಿಂಗ್
1/2 ಟೀ ಚಮಚ ಅರಿಶಿಣ ಪುಡಿ
1 ಒಣ ಮೆಣಸಿನ ಕಾಯಿ
1 ಟೀ ಚಮಚ ಕಡ್ಲೆ ಬೇಳೆ
1 ಟೀ ಚಮಚ ಸಾಸಿವೆ ಒಗ್ಗರಣೆ ಗೆ
1 ಕಪ್ ಎಣ್ಣೆ
1/4 ಕಪ್ ಅಚ್ಚ ಕಾರದ ಪುಡಿ ತರಿ
1 ಟೀ ಚಮಚ ಬೆಲ್ಲ
1 ದೊಡ್ಡ ಗಡ್ಡೆ ಬೇಳುಳ್ಳಿ
ಉಪ್ಪು ರುಚಿಗೆ

ಮಾಡುವ ವಿಧಾನ

ಮೊದಲು ಕೊತಂಬರಿ ಸೊಪ್ಪು ತೊಳೆದು ,ನೀರು ಹೋಗೋ ತನಕ ಒರೆಸಿ ಹೆಚ್ಚಿ ಇಡಿ. ಒಂದು ಪಾತ್ರೆ ನಲ್ಲಿ 1 ಕಪ್ ನೀರು ಹಾಕಿ ಹುಣಸೆ ಹಣ್ಣು ಹಾಕಿ ಅದರ ಪಲ್ಪ್ ತಗೆಯಿರಿ,ಅದಕ್ಕೆ 1/2 ಟೀ ಚಮಚ ಉಪ್ಪು ಹಾಕಿ ಪೇಸ್ಟ್ ಆಗೋ ಹದಕ್ಕೆ ಕುದಿಸಿ ಇಡಿ. ಒಂದು ಹಂಚಿನ ಮೇಲೆ ಸಾಸಿವೆ ಮತ್ತು ಮೆಂತೆ ಕಾಳು ಹುರಿದು ತರಿಯಾಗಿ ಪುಡಿ ಮಾಡಿ ಇಡಿ
ಗ್ಯಾಸ್ ಹಚ್ಚಿ ಒಂದು ಬಾಣಲೆ ಇಡಿ ,ಅದಕ್ಕೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ಸ್ವಲ್ಪ ಕರಿದು ತಗೆಡಿದಿ, ಅದೇ ಎಣ್ಣೆ ಗೆ ಸಾಸಿವೆ, ಒಣ ಮೆಣಸಿನ ಕಾಯಿ ಹಾಕಿ, ಬೇಳುಲ್ಲಿ ಸ್ವಲ್ಪ ಜಜ್ಜಿ ಹಾಕಿ, ಕಡ್ಲೆಬೇಳೆ ಹಾಕಿ, ಹಿಂಗು , ಅರಿಶಿಣ ಪುಡಿ, ಮೆಂತೆ,ಸಾಸಿವೆ ಪುಡಿ ಹಾಕಿ ಕೈಯಾಡಿಸಿ ಕಾರದ ಪುಡಿ ಹಾಕಿ, ಕರಿದ ಕೊತ್ತಂಬರಿ ಸೊಪ್ಪು ಹಾಕಿ ಉಪ್ಪು ಬೆಲ್ಲ ಹಾಕಿ ಎಲ್ಲವನ್ನೂ ಸೇರಿಸಿ ಕಲಿಸಿ 5 ನಿಮಿಷ ಬಿಟ್ಟು ಗ್ಯಾಸ್ ಆಫ್ ಮಾಡಿ ಆರಲು ಬಿಡಿ, ನಂತರ ಅದನ್ನ ಗಾಜಿನ ಬಾಟಲಿ ನಲ್ಲಿ ಹಾಕಿ ಇಡಿ ಹೊರಗೆ ಇಟ್ಟರೆ ಒಂದು ವಾರ ಕೆಡಲ್ಲ,,ಫ್ರಿಡ್ಜ್ ಒಂದು ತಿಂಗಳು ಇತ್ತು ಉಪಯೋಗಿಸಬಹುದು

ಕಾವ್ಯ ಎಸ್. ಬೆಲ್ಲಡ್
error: Content is protected !!
satta king chart