ಡೋಸಿಗೆ, ಕಾಸಿಗೆ ಮತಗಳ ಮಾರಿಕೊಳ್ಳಬೇಡಿ!

ಇಂದು ರಾಜಕೀಯ ರಂಗ ಅನ್ನೋದು ಸಂಪೂರ್ಣ ಕಲುಷಿತವಾಗಿದೆ. ರಾಜಕಾರಣದಲ್ಲಿ ಕಾಸು ಇದ್ದೋನೇ ಬಾಸು ಎಂಬಂತಾಗಿದೆ. ಪ್ರಾಮಾಣಿಕತೆ, ನೀಯತ್ತು, ಸಾಮಾಜಿಕ ಕಾಳಜಿ, ಸಮಾಜಮುಖಿ ವ್ಯಕ್ತಿಗಳನ್ನು ಜನತೆ ಗಣನೆಗೂ ತೆಗೆದುಕೊಳ್ಳುತ್ತಿಲ್ಲ‌.

ಪರಿಣಾಮ ಈಗ ಕೊರೋನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಚುನಾಯಿತರಾದ ಪ್ರಭುಗಳು ಪ್ರಜೆಗಳೇ ಪ್ರಜಾಪ್ರಭುತ್ವದಲ್ಲಿ ಜನರು ಎಂಬುದನ್ನು ಮರೆತು, ಅವರ ಜೇಬು ತುಂಬಿಸಿಕೊಳ್ಳೋದರಲ್ಲಿ ಬ್ಯುಸಿ ಆಗಿದ್ದಾರೆ. ಹಾಗಾಗಿ ಅವರಿಗೆ ಕೊರೋನಾದ ಹೆಸರಿನಲ್ಲಿ ಹಣ ಮಾಡುವುದು ಅಭ್ಯಾಸವಾಗುತ್ತಿದೆ. ಜನ ಸತ್ತರೆ ಸಾಯಲಿ ಎಂದು ಬಿಟ್ಟಿದ್ದಾರೆ.

ಮಾತೆತ್ತಿದರೆ ಲಾಕ್ ಡೌನ್ ಒಂದೇ ಪರಿಹಾರ ಎನ್ನು ತಜ್ಞರಿಗೆ ಪಾಪ ಸಮಾಜದ ಕಟ್ಟ ಕಡೆಯ ಪ್ರಜೆ ದಿನ ನಿತ್ಯ ದುಡಿಯದಿದ್ದರೆ, ಅನುಭವಿಸುವ ಹಸಿವಿನ ನೋವು ಗೊತ್ತಿಲ್ಲ. ಅವರೇನಿದ್ದರೂ ಸರಕಾರಕ್ಕೆ ಸಲಹೆ ನೀಡುತ್ತಿದ್ದಾರೆ ಅಷ್ಟೇ.

ನಮ್ಮ ನಾಯಕರುಗಳಿಗಂತೂ ಚುನಾವಣಾ ಪ್ರಚಾರ, ರಾಲಿ, ಸಮಾವೇಶಗಳಲ್ಲಿ ಇಷ್ಟು ದಿನಗಳ ಕಾಲ ಕೊರೋನಾ ಮರೆತು ಹೋಗಿತ್ತು. ಜನರು ಅವರು ಕೊಡುವ ಮದ್ಯಪಾನದ ಡೋಸಿಗೆ ಕಾಸಿಗೆ ಕೈ ಒಡ್ಡಿ, ನಂತರ ಅವರಿಗೆ ಓಟು ಹಾಕಿ ಕುಳಿತ.

ನಾಯಕನಿಗೆ ಆಳಾಗಿ ದುಡಿಯುವ ಯೋಚನೆ ಬರದೆ, ಆಳುವ ಯೋಚನೆ ಒಂದೇ ಇತ್ತು. ಜನರಿಗೆ ಚಿಲ್ಲರೆ ಕಾಸಿಗೆ ಮತ ಮಾರಿಕೊಳ್ಳೋದು ಮಾತ್ರ ಗೊತ್ತಿತ್ತು. ಈಗ ಅದೇ ಮತದಾರ ಕೊರೋನಾದ ಭಯದಿಂದ ಅಭಯಕ್ಕಾಗಿ ಅಂಗಲಾಚುತ್ತಿದ್ದರೂ ಅದು ಸಮಯಕ್ಕೆ ಸರಿಯಾಗಿ ಅವನಿಗೆ ಸಿಗುತ್ತಿಲ್ಲ.

ಇದಕ್ಕೆಲ್ಲಾ ನಾವೇ ಕಾರಣ. ಸಮಸ್ಯೆಯ ಮೂಲ ಹುಡುಕಿದರೆ, ಇಂತಹ ನಾಯಕರನ್ನು ಚುನಾಯಿಸಿದ ನಾವುಗಳೇ ತಪ್ಪಿತಸ್ಥರು ಅನಿಸುತ್ತದೆ. ಇನ್ನು ಮುಂದಾದರೂ ಆಡಳಿತ ನಡೆಸುವ ನಾಯಕರನ್ನು ಅಳಿದು ತೂಗಿ ಚುನಾಯಿಸಬೇಕಿದೆ. ಮುಂಬರುತ್ತಿರುವ ನಗರ ಸಭಾ ಚುನಾವಣೆ, ತಾಲೂಕು ಪಂಚಾಯ್ತಿ ಚುನಾವಣೆ, ಜಿಲ್ಲಾ ಪಂಚಾಯ್ತಿ ಚುನಾವಣೆಗಳಲ್ಲಿ ಜವಾಬ್ದಾರಿಯುತವಾಗಿ‌ ನಮ್ಮ ಮತಗಳನ್ನು ಚಲಾಯಿಸಬೇಕಿದೆ.

error: Content is protected !!