ಚುಟುಕು ಸ್ಪರ್ಧೆ
ಐಚೆಟ್ಟಿರ ಮುತ್ತಣ್ಣ, ಬಾಚಮಾಡ ಗಣಪತಿ ಜನ್ಮ ಶತಮಾನೋತ್ಸವ ಅಂಗವಾಗಿ ಮೂರನೇಯ ತಿಂಗಳು
ಕೊಡವಾಮೆರ ಕೊಂಡಾಟ ಕೂಟದಿಂದ ಚುಟುಕು ರಚಿಸುವ ಸ್ಪರ್ಧೆ ನಡೆಯಲಿದೆ.
ತ್ರಿಭಾಷಾ ಸಾಹಿತ್ಯದ ಕೃಷಿ ಮಾಡಿ ಸಾಹಿತ್ಯ ಕ್ಷೇತ್ರದ ಮೇರು ನಕ್ಷತ್ರಗಳಾಗಿರುವ ಡಾ. ಐ.ಮಾ. ಮುತ್ತಣ್ಣ ಹಾಗೂ ಬಿ.ಡಿ. ಗಣಪತಿಯವರ ಜನ್ಮ ಶತಮಾನೋತ್ಸವದ ಅಂಗವಾಗಿ, ಕೊಡವಾಮೆರ ಕೊಂಡಾಟ ಕೂಟದ ವತಿಯಿಂದ ನಡೆಯುತ್ತಿರುವ ಸಾಹಿತ್ಯ ಸ್ಪರ್ಧೆ ಯಲ್ಲಿ ಮೊದಲನೆ ತಿಂಗಳು ಕೊಡವ ಭಾಷೆಯಲ್ಲಿ ಕವನ ರಚಿಸುವ ಸ್ಪರ್ಧೆ ಏರ್ಪಡಿನಲಾಗಿತ್ತು. ಹಾಗೇ ಎರಡನೆ ತಿಂಗಳು ಸಣ್ಣ ಕತೆ(ಚೆರ್ ಕಥೆ) ರಚಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದೀಗ ಮೂರನೆ ತಿಂಗಳು ಕೊಡವ ಚುಟುಕ ರಚಿಸುವ ಸ್ಪರ್ಧೆಯನ್ನು ಏರ್ಪಡಿಸಿದ್ದು, ಈ ಸ್ಪರ್ಧೆಯ ಮೊದಲ ಬಹುಮಾನ 2000, ಎರಡನೆ ಬಹುಮಾನ 1000,ಹಾಗು ಮೂರನೆ ಬಹುಮಾನ 500 ರೂ ಬಹುಮಾನವನ್ನು ಶಾಸ್ತ್ರೀಯ ಸಂಗೀತ ಖ್ಯಾತಿಯ ಮೊಣ್ಣಂಡ ಶೋಭ ಸುಬ್ಬಯ್ಯ ಅವರು ಪ್ರಾಯೋಜಕತ್ವ ವಹಿಸಿದ್ದು, ಸಂಚಾಲಕರಾಗಿ ಸಣ್ಣುವಂಡ ಕಿಸು ದೇವಯ್ಯ ಅವರು ವಹಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಯಾವುದೇ ಜಾತಿ, ಬೇದದ ಅಂತರ ವಿಲ್ಲದೆ, ವಯಸ್ಸಿನ ಅಂತರವಿಲ್ಲದೆ, ಯಾರು ಬೇಕಾದರೂ ಭಾಗವಹಿಸಬಹುದಾಗಿದ್ದು, ಚುಟುಕ ಕೊಡವ ಬಾಷೆಯಲ್ಲೆ ಇರಬೇಕು, ಚುಟುಕದ ನಿಯಮಗಳು, ಶೀರ್ಷಿಕೆ ಕಡ್ಡಾಯ, ಚುಟುಕ 5 ರಿಂದ 6 ಗೆರೆ ಮೀರಿರ ಬಾರದು, ಕನ್ನಡ ಲಿಪಿಯಲ್ಲೆ ಟೈಪ್ ಮಾಡಿರಬೇಕು, ಮೊಬೈಲ್’ನಲ್ಲಿ ಟೈಪ್ ಮಾಡಲು ಸಾದ್ಯವಾಗದವರು ಬರೆದು ಅದರ ಪೋಟೊ ತೆಗೆದು ಕೆಳಗೆ ಕೊಟ್ಟಿರುವ ಮೊಬೈಲ್ ಸಂಖ್ಯೆಗೆ ಕಳುಹಿಸತಕ್ಕದ್ದು, ಸ್ವಂತ ರಚನೆಯದಾಗಿರಬೇಕು, ನಿಮ್ಮ ಚುಟುಕು ಈ ಹಿಂದೆ ಬೇರೆಲ್ಲೂ ಪ್ರಕಟವಾಗಿರ ಬಾರದು, ಒಬ್ಬರಿಗೆ 5 ಚುಟುಕು ರಚಿಸಲು ಅವಕಾಶವಿದೆ, ಚುಟುಕು ಕಳುಹಿಸುವಾಗ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಒಂದು ಸ್ಟಾಂಪು ಸೈಜ್ ಪೊಟೊ ಕಡ್ಡಾಯವಾಗಿ ಕಳುಹಿಸಬೇಕು. ಹಾಗೂ ನೀವು ರಚಿಸಿದ ಚುಟುಕು ಇದೇ ತಿಂಗಳ 25 ನೇ ತಾರೀಖು ರಾತ್ರಿ 10 ಗಂಟೆ ಒಳಗೆ ಕೆಳಗೆ ಕೊಟ್ಟಿರುವ ಮೊಬೈಲ್ ಸಂಖ್ಯೆಗೆ ಕಳುಹಿಸಬೇಕು ಎಂದು ಕೊಡವಾಮೆರ ಕೊಂಡಾಟ ಕೂಟದ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಹಾಗೂ ಆಡಳಿತ ಮಂಡಳಿಯು ಪ್ರಕಟಣೆ ತಿಳಿಸಿದ್ದಾರೆ. ಚುಟುಕು ಕಳುಹಿಸ ಬೇಕಾದ ಮೊಬೈಲ್ ಸಂಖ್ಯೆ :- 9880578830.