ಇಂಡೋ-ಚೀನಾ ಯುದ್ಧ ನಿಜಕ್ಕೂ ನಡೆಯಲಿದೆಯೇ!?
ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ-ಚೀನಾ ನಡುವಣ ತೀರಾ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಪರಸ್ಪರ ಎರಡೂ ದೇಶದ ಗಡಿಯಲ್ಲಿ ಜಮಾವಣೆ ಆಗುತ್ತಲೇ ಇದೆ.ಸಂಘರ್ಷದ ಪರಿಣಾಮ ಈವರೆಗೆ ಸುಮಾರು 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ.
ಇತ್ತೀಚೆಗೆ ಚೀನಾ ಸರಕಾರದ ಹತೋಟಿಯಲ್ಲಿರುವ ‘Biggie Global Times’ನಲ್ಲಿ ಪ್ರಕಟವಾದ ಸಂಪಾದಕೀಯದಲ್ಲಿ ಅದು,’ಚೀನಾ ಭಾರತದೊಂದಿಗೆ ಯುದ್ಧ ಮಾಡಲು ಇಚ್ಛಿಸುವುದಿಲ್ಲ. ಇದು ನಮ್ಮ ದೇಶದ ದೊಡ್ಡತನವೇ ಹೊರತು ದೌರ್ಬಲ್ಯವಂತೂ ಅಲ್ಲವೇ ಅಲ್ಲ. ಚೀನಾ ಅದರ ಸೇನಾ ಬಲದ ಕುರಿತು ಸಂಪೂರ್ಣ ವಿಶ್ವಾಸವನ್ನು ಹೊಂದಿದೆ. ಮತ್ತು ಚೀನಾ ತಾನಾಗೇ ಸಂಘರ್ಷಕ್ಕೆ ಇಳಿಯುವ ಅಥವಾ ಯುದ್ಧಕ್ಕೆ ಮುನ್ನುಡಿ ಬರೆವ ಕೆಲಸಕ್ಕೆ ಮುಂದಡಿ ಇಡುವುದಿಲ್ಲ.
ಇದು ಚೀನಾದ ಬಲವೂ ಹೌದು,ನೈತಿಕತೆಯೂ ಹೌದು. ಭಾರತ ಗಡಿಯಲ್ಲಿ ಬಹಳ ಉದ್ಧಟತನ ಪ್ರದರ್ಶಿಸಿ, ಉದ್ವಿಘ್ನತೆ ಸೃಷ್ಟಿಸುತ್ತಿದೆ. ಭಾರತ ಚೀನಾ ಕುರಿತು ಎರಡು ಪೂರ್ವಾಗ್ರಹ ಪೀಡಿತ ನಂಬಿಕೆಗಳನ್ನು ಇಟ್ಟುಕೊಂಡಿದೆ.
1) ಮೇರಿಕಾ ಲೆಕ್ಕಾಚಾರಯುಕ್ತವಾಗಿ ಒತ್ತಡ ತಂತ್ರ ಹೇರಿದರೆ ಭಾರತದ ಮೇಲೆ ಚೀನಾ ಯುದ್ಧ ಮಾಡುವುದಿಲ್ಲ ಎಂಬುದು.
2) ಮತ್ತೊಂದು ಚೀನಾ ಭಾರತದಷ್ಟು ಬಲಶಾಲಿ ಅಲ್ಲ ಎಂಬುದು.
ಈ ಎರಡು ಅಂಶಗಳು ಸುಳ್ಳಾದವು. ‘ಚೀನಾ ಯಾವುದೇ ಕಾರಣಕ್ಕೂ ಗಡಿಯಿಂದ ಹೆಜ್ಜೆ ಹಿಂದಿಡುವುದಿಲ್ಲ. ಭಾರತದ ನಡೆಗಳಿಗೆ ತಕ್ಕ ಉತ್ತರ ನೀಡಲು ಸಿದ್ಧವಾಗಿದೆ. ಆದರೆ ಯುದ್ಧವನ್ನು ಚೀನಾ ಯಾವುದೇ ಕಾರಣಕ್ಕೂ ಆರಂಭಿಸುವುದಿಲ್ಲ’ ಎಂದು ಸ್ಪಷ್ಟ ಪಡಿಸಿದೆ.
ಆದರೆ ಕೆಂಪು ರಾಷ್ಟ್ರ ಕಮ್ಯುನಿಷ್ಟ್ ಚೀನಾ ಎಂಥಹ ನೀಚ್ಛತನಕ್ಕೂ ಇಳಿಯಬಲ್ಲದು ಎಂಬುದು ಮುಕ್ತ ಸತ್ಯ.