fbpx

ಆ.15 ರಂದು ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಉಚಿತ ಪ್ರವೇಶ

ಮಡಿಕೇರಿ: ಸ್ವಾತಂತ್ರ್ಯ ಮಹೋತ್ಸವ ಪ್ರಯುಕ್ತ ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ(ತಿಮ್ಮಯ್ಯ ಮ್ಯೂಸಿಯಂ) ಸಂದರ್ಶಕರಿಗೆ ಆಗಸ್ಟ್ 15 ರಂದು ಸೋಮವಾರ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಪ್ರತೀ ಸೋಮವಾರ ದೇಶವ್ಯಾಪಿ ಮ್ಯೂಸಿಯಂಗಳಿಗೆ ರಜೆ ಇದ್ದರೂ, ಅಮೃತ ಮಹೋತ್ಸವ ಹಿನ್ನಲೆಯಲ್ಲಿ ನಗರದ ಜನರಲ್ ತಿಮ್ಮಯ್ಯ ಮ್ಯೂಸಿಯಂನ್ನು ಆ.15 ರಂದು ಸೋಮವಾರ ವೀಕ್ಷಕರ ಸಂದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮ್ಯೂಸಿಯಂ ಸಾರ್ವಜನಿಕರ ಸಂದರ್ಶನಕ್ಕೆ ಅವಕಾಶವಿದೆ.

ಜಿಲ್ಲಾಧಿಕಾರಿ ಅವರ ಸೂಚನೆಯಂತೆ ಆ.15 ರ ರಜೆಯನ್ನು ಆ.16 ರಂದು ಮಂಗಳವಾರ ನೀಡಲಾಗುತ್ತಿದ್ದು, ಮಂಗಳವಾರ ಮ್ಯೂಸಿಯಂ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಇರುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

error: Content is protected !!
satta king chart