fbpx

ಮಕ್ಕಳಿಗೆ ಉಚಿತ ಬರೆಯುವ ಪುಸ್ತಕಗಳು ಮತ್ತು ಪರಿಕರಗಳನ್ನು ವಿತರಣೆ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ 58 ಮಕ್ಕಳಿಗೆ ದಾನಿಗಳಾದ ಅಬ್ದುಲ್ ಮೇಸ್ತ್ರಿ ರವರು ಮಕ್ಕಳಿಗೆ ಉಚಿತ ಬರೆಯುವ ಎಲ್ಲ ಪುಸ್ತಕಗಳು ಹಾಗೂ ಕಂಪಾಸ್ ಮತ್ತು ಪೆನ್ನು ಮತ್ತು ಪೆನ್ಸಿಲ್ (ಅಂದರೆ 1ವಿದ್ಯಾರ್ಥಿಗೆ 1ವರ್ಷಕ್ಕೆ ಆಗುವಷ್ಟು ಎಲ್ಲಾ ತರದ ಬರೆಯುವ ಪುಸ್ತಕಗಳು ) ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗೌಡಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಮಂಜಯ್ಯನವರು ಕರ್ನಾಟಕ ರಕ್ಷಣಾ ವೇದಿಕೆ ಉತ್ತಮ ಕೆಲಸಗಳ ಹಮ್ಮಿಕೊಂಡು ಬರುತ್ತಿದೆ ಹಾಗೆಯೇ ನಮ್ಮ ಶಾಲೆಗೆ ಉಚಿತ ಬರೆಯುವ ಪುಸ್ತಕಗಳು ಮತ್ತು ಪರಿಕರಗಳು ಕೊಡುತ್ತಿರುವುದು ನಮಗೆ ಹೆಮ್ಮೆಯ ವಿಷಯ ಹಾಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಧನ್ಯವಾದಗಳನ್ನು ಅರ್ಪಿಸಿದರು . ಹಾಗೆಯೇ ವೇದಿಕೆಯಲ್ಲಿ ಆಸೀನರಾದ ನವದುರ್ಗಾ ಪರಮೇಶ್ವರಿ ದೇವಾಲಯದ ಗೌರವ ಅಧ್ಯಕ್ಷರಾದ ಮುತ್ತಣ್ಣನವರು ಮಾತನಾಡಿ ನಾನು ಇದೇ ಶಾಲೆಯಲ್ಲಿ ಓದಿದ ವಿದ್ಯಾರ್ಥಿ ಹಾಗಾಗಿ ಈ ಶಾಲೆಯ ಬಗ್ಗೆ ನನಗೆ ಹೆಮ್ಮೆ ಇದೆ ಈ ಶಾಲೆಯಲ್ಲಿ ಓದಿ ನಾನು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿರುತ್ತೇನೆ ಹಾಗಾಗಿ ತಾವುಗಳು ಚೆನ್ನಾಗಿ ಓದಿ ಒಳ್ಳೆಯ ವಿದ್ಯಾರ್ಥಿಗಳೆಂದು ಹೆಸರು ಮಾಡಿ ಸರ್ಕಾರಿ ಉದ್ಯೋಗ ಪಡೆದು ಬಡವರಿಗೆ ಸಹಾಯ ಮಾಡಿ ಎಂದು ವಿದ್ಯಾರ್ಥಿಗಳ ಹಿತ ನುಡಿ ನುಡಿದರು. ಹಾಗೆಯೇ ವೇದಿಕೆಯಲ್ಲಿದ್ದ ಗಣ್ಯರಾದ ಮಹೇಶ್ ಗೌಡಳ್ಳಿ ನವದುರ್ಗಾ ಪರಮೇಶ್ವರಿ ದೇವಾಲಯ ಸಮಿತಿಯ ಸಮುದಾಯ ಭವನದ ಅಧ್ಯಕ್ಷರು ಇವರು ಮಾತನಾಡಿ ಈಗಿನ ಕಾಲದಲ್ಲಿ ಎಷ್ಟೇ ಹಣ ಇದ್ದರೂ ದಾನ ಮಾಡಲು ಮುಂದೆ ಬರುವುದಿಲ್ಲ ಹಾಗಾಗಿ ಇವತ್ತು ಪುಸ್ತಕ ದಾನಿಗಳಾದ ಅಬ್ದುಲ್ ಮೇಸ್ತ್ರಿ ರವರಿಗೆ ಧನ್ಯವಾದ ಅರ್ಪಿಸಿದರು ಹಾಗೆ ಮಾತನಾಡುತ್ತಾ ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್ ಈಗಿನ ವಿದ್ಯಾರ್ಥಿಗಳಿಗೆ ಒಳ್ಳೆಯ ಮೌಲ್ಯಗಳನ್ನು ಅರಿತು ಅರಿತು ಓದಿದರೆ ನಿಮ್ಮ ಜೀವನವೇ ಗೋಲ್ಡನ್ ಲೈಫ್ ಆಗುತ್ತದೆ ಎಂದು ಹೇಳಿದರು ಮತ್ತು ಚೆನ್ನಾಗಿ ಓದಿ ಒಳ್ಳೆಯ ಹೆಸರು ಮಾಡಿ ಎಂದು ತಿಳಿಹೇಳಿದರು . ಇದೇ ಸಂದರ್ಭದಲ್ಲಿ ಮತ್ತೊಬ್ಬ ಗಣ್ಯರಾದ ಕರವೇ ತಾಲ್ಲೂಕು ಕಾರ್ಯದರ್ಶಿಗಳಾದ ರಾಮನಹಳ್ಳಿ ಪ್ರವೀಣ್ ಅವರು ಮಾತನಾಡಿ ಸರ್ಕಾರಿ ಶಾಲೆಗಳು ಯಾವ ಖಾಸಗಿ ಶಾಲೆಗಿಂತಲೂ ಹೆಚ್ಚಾಗಿ ಸರ್ಕಾರಿ ಶಾಲೆಯ ಉತ್ತಮ ಸೌಲಭ್ಯಗಳಿವೆ ಮತ್ತು ಒಳ್ಳೆಯ ವಿದ್ಯಾರ್ಜನೆ ಸಹ ಸರ್ಕಾರಿ ಶಾಲೆಯಲ್ಲಿ ಸಿಗುತ್ತದೆ ಹಾಗಾಗಿ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಮುಂದೆ ಬಂದರೆ ಕರವೇ ವತಿಯಿಂದ ಪುಸ್ತಕಗಳು ವಿತರಿಸಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ತಿಳಿಸಿದರು . ಹಾಗೆಯೇ ಸರ್ಕಾರಿ ಶಾಲೆಯ (CRP) ಸಂಪನ್ಮೂಲ ಅಧಿಕಾರಿಗಳಾದ ಚಂದ್ರೇಗೌಡ ಮಾತನಾಡಿ ಕರ್ನಾಟಕ ರಕ್ಷಣಾ ವೇದಿಕೆ ಮಕ್ಕಳಿಗೆ ಬರೆಯುವ ಪುಸ್ತಕಗಳು ಹಾಗೂ ಪರಿಕರಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ ವಿಚಾರ ಹಾಗೆಯೇ ತುಂಬಾ ಶಾಲೆಗಳಿಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪುಸ್ತಕಗಳು ಹಾಗೂ ಪರಿಕರಗಳನ್ನು ವಿತರಿಸುತ್ತಿರುವುದು ತುಂಬಾ ಒಳ್ಳೆಯ ವಿಚಾರ ಎಂದು ತಿಳಿಸಿದರು ಇದೇ ತರ ಬೇರೆ ಸಂಘ ಸಂಸ್ಥೆಗಳು ಸರ್ಕಾರಿ ಶಾಲೆಗಳಿಗೆ ಸಹಕರಿಸುವಂತೆ ತಿಳಿಸಿದರು . ಇದೇ ಸಂದರ್ಭದಲ್ಲಿ ನವದುರ್ಗಾ ಪರಮೇಶ್ವರಿ ದೇವಾಲಯ ಸಮಿತಿಯ ಗೌರವ ಅಧ್ಯಕ್ಷರಾದ ಮುತ್ತಣ್ಣನವರು ಮಕ್ಕಳಿಗೆ ಪುಸ್ತಕಗಳನ್ನು ವಿತರಣೆ ಮಾಡಿದರು ಮಾಡಿದರು. ಹಾಗೆಯೇ ನವದುರ್ಗಾ ಪರಮೇಶ್ವರಿ ದೇವಾಲಯ ಸಮುದಾಯ ಸಮನ್ವಯ ಸಮಿತಿಯ ಅಧ್ಯಕ್ಷರಾದ ಮಹೇಶ್ ರವರು ಸಹ ಪುಸ್ತಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು . ಹಾಗೆಯೇ ಕರವೇ ತಾಲ್ಲೂಕು ಅಧ್ಯಕ್ಷ ರಾದ ಫ್ರಾನ್ಸಿಸ್ ಡಿಸೋಜಾ ರವರು ಹಾಗೂ ಕರವೇ ತಾಲ್ಲೂಕು ಕಾರ್ಯದರ್ಶಿ ರಾಮನಳ್ಳಿ ಪ್ರವೀಣ್ ಹಾಗೂ ಕರವೇ ಹೋಬಳಿ ಘಟಕದ ಅಧ್ಯಕ್ಷರಾದ ಕುಸುಮ ನವರು ಹಾಗೂ ಕರವೇ ಹೋಬಳಿ ಉಪಾಧ್ಯಕ್ಷರಾದ ರಫೀಕ್ ರವರು ಮಕ್ಕಳಿಗೆ ಪುಸ್ತಕಗಳನ್ನು ವಿತರಣೆ ಮಾಡಿದರು .

ಕರ್ನಾಟಕ ರಕ್ಷಣಾ ವೇದಿಕೆಯ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜಾ ರವರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಸೋಮವಾರಪೇಟೆ ತಾಲ್ಲೂಕು ಕಾರ್ಯದರ್ಶಿಗಳಾದ ರಾಮನಹಳ್ಳಿ ಪ್ರವೀಣ್ ಹಾಗೂ ನವದುರ್ಗಾ ಪರಮೇಶ್ವರಿ ದೇವಾಲಯದ ಗೌರವ ಅಧ್ಯಕ್ಷರಾದ ಮುತ್ತಣ್ಣ ರವರು ಮತ್ತು ಮಹೇಶ್ ಗೌಡಳ್ಳಿ ನವದುರ್ಗಾ ಪರಮೇಶ್ವರಿ ದೇವಾಲಯ ಸಮುದಾಯ ಸಮಿತಿಯ ಅಧ್ಯಕ್ಷರು ಹಾಗೂ ಕರವೇ ಮಹಿಳಾ ಘಟಕದ ಹೋಬಳಿ ಅಧ್ಯಕ್ಷರಾದ ಕುಸುಮ ರವರು ಹಾಗೂ ಶನಿವಾರಸಂತೆ ಕರವೇ ಹೋಬಳಿ ಘಟಕದ ಉಪಾಧ್ಯಕ್ಷರಾದ ರಫೀಕ್ ಹಾಗೂ ಸಂಪನ್ಮೂಲ ಅಧಿಕಾರಿ ಚಂದ್ರೇಗೌಡ ಹಾಗೂ ಹಾಗೂ ಎಸ್ ಡಿಎಂಸಿ ಸದಸ್ಯರಾದ ಗಣೇಶ್ ರವರು ಹಾಗೂ ಗೌಡಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಮಂಜಯ್ಯ ರವರು ಹಾಗೂ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

error: Content is protected !!