ಅರೆಭಾಷೆ ಕಲಿಕಾ ಪಠ್ಯ ಮತ್ತು ಶಬ್ದಕೋಶದ ಪೂರ್ವಭಾವಿ ಸಭೆ..
✍🏻ವಿನೋದ್ ಮೂಡಗದ್ದೆ,
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಮಡಿಕೇರಿ ಇದರ ವತಿಯಿಂದ ಇಂದು ಚೆಂಬು ಗ್ರಾಮದ ಕರುಣಾಕರ ನಿಡಿಂಜಿ ಅವರ ಮನೆಯಲ್ಲಿ ಅರೆಭಾಷೆ ಕಲಿಕಾ ಪಠ್ಯ ರಚನೆಯ ಪೂರ್ವಭಾವಿ ಸಭೆ ನಡೆಯಿತು.
ಅರೆಭಾಷೆ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಚಲಿತ ಇರುವ ಭಾಷೆ. ಇದನ್ನು ಕಲಿಯಲು ಬಹಳ ಜನ ಉತ್ಸುಕರಾಗಿದ್ದು, ಕಲಿಕೆಗೆ ಒಂದು ಪಠ್ಯದ ರಚನೆ ಅವಶ್ಯಕ ಎಂದು ಮನಗೊಂಡ ಅಕಾಡೆಮಿ ಒಂದಷ್ಟು ಬಾಷಾ ತಜ್ಞರೊಂದಿಗೆ ಪಠ್ಯ ರಚನೆಯ ಪೂರ್ವಭಾವಿ ಸಭೆ ನಡೆಸಿತು.
ವ್ಯಾಕರಣ, ವಸ್ತು ವಾಚಕ ಪದಗಳು, ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಬದಲಾಗುವ ಪದಗಳು ಹೀಗೆ ಎಲ್ಲವನ್ನೂ ಸೇರಿಸಿ ಒಂದು ಉಪಯುಕ್ತ ಪಠ್ಯ ತಯಾರಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ, ಸದಸ್ಯರಾದ ಧನಂಜಯ್ ಅಗೋಳಿಕಜೆ, ಪುರುಷೋತ್ತಮ ಕಿರ್ಲಾಯ, ಎ.ಟಿ ಕುಸುಮಾಧರ, ವಿಶ್ವನಾಥ್ ಬದಿಕಾನ ಹಾಗು ಪಠ್ಯ ಕ್ರಮದ ಸಮಿತಿಯ ಸದಸ್ಯರಾದ ನಿಡ್ಂಜಿ ಕರುಣಾಕರ, ಬಾರಿಯಂಡ ಜೋಯಪ್ಪ, ಜೀವನ್ ಪುರ, ಪುನೀತ್ ರಾಘವೇಂದ್ರ ಕುಂಟುಕಾಡು, ವಿನೋದ್ ಮೂಡಗದ್ದೆ, ರಮ್ಯಶ್ರೀ ನಡುಮನೆ ಅವರು ಉಪಸ್ಥಿತರಿದ್ದರು.
ನಂತರ ಪುತ್ತೂರಿನಲ್ಲಿರುವ ಪ್ರೊ. ಕೋಡಿ ಕುಶಾಲಪ್ಪ ಅವರನ್ನು ಭೇಟಿ ಮಾಡಿ ಅರೆಭಾಷೆ ಶಬ್ದಕೋಶದ ರಚನೆಯ ಬಗ್ಗೆ ಸಹಲೆಗಳನ್ನು ಪಡೆಯಲಾಯಿತು.
ಆದಷ್ಟು ಬೇಗ ಕಾರ್ಯಯೋಜನೆ ರೂಪಿಸಿ ಅರೆಭಾಷೆ ಪಠ್ಯ ಪುಸ್ತಕ ಹಾಗು ಶಬ್ದಕೋಶವನ್ನು ಹೊರತರಲಾಗುವುದು ಎಂದು ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮಿನಾರಾಯಣ ಕಜೆಗದ್ದೆ ಅವರು ತಿಳಿಸಿದರು.
✍🏻ವಿನೋದ್ ಮೂಡಗದ್ದೆ