ಅರೆಬಾಸೆ ಹಾಡು ರಿಲೀಸ್ ಗೆ ರೆಡಿ..
ದಿನಾಂಕ 9/10/2020 ರ್ರ ಸಂಜೆ 6 ಕ್ಕೆ ಅರೆಬಾಸೆ ಹಾಡು Facebook ಮತ್ತು YouTube ಅಲ್ಲಿ ರಿಲೀಸ್ ಆಗಲಿದೆ, ಕೊಡಗು, ದಕ್ಷಿಣಕನ್ನಡ ಮತ್ತು ಕಾಸರಗೋಡು ಯುವಕರ ತಂಡದವರು ಮಾಡಿರುವ “ವಿಹ ಕ್ರಿಯೇಶನ್” ಅವರ ಸಹಾಯದಿಂದ ಮತ್ತು ಪರಿಶ್ರಮದಿಂದ “ರಾಣಿ ನೀ” ಎಂಬ ಲಿರಿಕಲ್ ಹಾಡು ರಿಲೀಸ್ಗೆ ಸಜ್ಜಾಗುತ್ತಿದ್ದು ಎಲ್ಲರ ಗಮನಸೆಳೆಯುವ ನಿರೀಕ್ಷೆಯಲ್ಲಿದ್ದಾರೆ.
ಇನ್ನು ಈ ಅರೆಬಾಸೆ ಹಾಡಿಗೆ ಅರೆಬಾಸೆ ಕಥೆ
ಬರಹಗಾರರಾದ ಅಂಜೇರಿರ ವಿಶು ರಾಘವಯ್ಯ ಲಿರಿಕ್ ಅನ್ನು ಬರೆದಿದ್ದರೆ. streame line studio ಬೆಂಗಳೂರಿನಲ್ಲಿ ರೆಕಾರ್ಡಿಂಗ್ ಮತ್ತು ಮಾಸ್ಟರಿಂಗ್ ಮಾಡಿದ್ದು ಹಾಡಿಗೆ ಪೃಥ್ವೀಂದ್ರ ಬಲ್ಯಾಯ ಕಾಸರಗೂಡು ಇವರು ಧ್ವನಿ ನೀಡಿದ್ದು ಕುತೂಹಲದಿಂದ ಜನರು ಕಾಯುತ್ತಿದ್ದಾರೆ.
ಈ ಹಿಂದೆ ಪೃಥ್ವಿ ಅವರು “ಕನ್ಸನ್ ಹಾಡು” ಎಂಬ ಹಾಡು ಹೇಳಿದ್ದು, ರವಿ ದೇರನ ಅವರು ಲಿರಿಕ್ ಬರೆದಿದ್ದು ಜನರಿಗೆ ಮೆಚ್ಚುಗೆ ಆಗಿತ್ತು ಮತ್ತು ಈ ಹಾಡಿಗೆ ಮುಖ್ಯ ಪ್ರಡ್ಯೂಜರ್ (producer) ಆಗಿರುವ ಅಚ್ಚಲ್ಪಾಡಿ ಜೀವನ್ ದೇವಯ್ಯ ಇವರು ಕೈ ಜೋಡಿಸಿದ್ದು ಯುವಕರ ಹುಮ್ಮಸ್ನು ಹೆಚ್ಚಿಸಿದಂತಾಗಿದೆ.
ಈ ಯುವಕರ ತಂಡಕ್ಕೆ ಮ್ಯೂಸಿಕ್ composition ಕೈ ಜೋಡಿಸಿದ್ದು ಗಿಡಿಯೋನ್ ಮ್ಯಾಥಿವ್ ಮತ್ತು ದೀಕ್ಷಿತ್ ನೆಲ್ಲಿತಾಯ ಇವರೆಲ್ಲರ ಪ್ರರಿಶ್ರಮದ ಫಲ ಅರೆಬಾಸೆ ಜನರ ಮನಸ್ಸು ಮುಟ್ಟಲಿ ಎಂದು ಆಶಿಸೋಣ.