“ಅಶು” ಅಡುಗೆ ಮನೆ
ಅಂಕಣಕಾರರು: ಅಶ್ವಿನಿ, ಮೈಸೂರು
ಇನ್ನು ಪ್ರತಿ ಭಾನುವಾರ ಅಡುಗೆಯ ರೆಸಿಪಿಯ ಅಂಕಣವನ್ನು ಇವರು ನಮ್ಮ ಸುದ್ದಿ ಸಂತೆಗೆ ಬರೆಯಲಿದ್ದಾರೆ
ನಮಸ್ಕಾರ ಅಶು ಅಡುಗೆ ಅರಮನೆಗೆ ಸ್ವಾಗತ ….
ಬೇಕಾಗುವ ಪದಾರ್ಥಗಳು :ಗಟ್ಟಿ ಇರುವ ಹಣ್ಣಾಗಲು ಶುರು ವಾದಂತಹ ಎಂಟರಿಂದ 10 ತೋತಾಪುರಿ ಮಾವು ,ತಕ್ಕಷ್ಟು ಪ್ರಮಾಣದ ಸಕ್ಕರೆ ,1 ಚಮಚ ಏಲಕ್ಕಿ ಪುಡಿ.
ಮಾಡುವ ವಿಧಾನ :ಮಾವಿನ ಸಿಪ್ಪೆಯನ್ನು ಹೆರೆದುಕೊಂಡು ತುರಿದುಕೊಳ್ಳಿ.ಅಷ್ಟೇ ಪ್ರಮಾಣದಲ್ಲಿ ಸಕ್ಕರೆಯನ್ನು ಹಾಕಿಕೊಂಡು ಒಂದು ದಪ್ಪ ತಳದ ಪಾತ್ರೆಯಲ್ಲಿ ಮಗುಚಿ ಕೊಳ್ಳಿ,ನೀರಿನಂಶ ಇಂಗಿ ಗಟ್ಟಿಯಾದಾಗ ಉರಿಯನ್ನು ಆರಿಸಿ ತಣಿದ ನಂತರ ಬಾಟಲಿಯಲ್ಲಿ ತುಂಬಿ ಶೇಖರಿಸಿಟ್ಟು ಕೊಳ್ಳಿ.ಹುಳಿಮಿಶ್ರಿತ ,ಸಿಹಿಯಾದ ರುಚಿಯಾದ ಮಾವಿನ ಜಾಮ್ ರೆಡಿ…