ಅಂಕಣ: ಅಶು ಅಡುಗೆ ಮನೆ…

ಅಶ್ವಿನಿ ಲಕ್ಷ್ಮಿನಾರಾಯಣ, ಮೈಸೂರು

ನಮಸ್ಕಾರ…ಇವತ್ತು ಮೈಸೂರಿನ ಸ್ಪೆಷಲ್ ಬಸ್ಸಾರು. ಮಳೆಗಾಲದ ಬೆರಕೆ ಸೊಪ್ಪು ಮತ್ತು ಅವರೆಕಾಳು ಹಾಕಿ ಮಾಡಿದ್ದೇನೆ.


ವಿಧಾನ :ಅವರೆಕಾಳನ್ನು ಚೆನ್ನಾಗಿ ತೊಳೆದುಕೊಂಡು ಸ್ವಲ್ಪ ಉಪ್ಪು ಮತ್ತು ಅರಸಿನ ಪುಡಿಯನ್ನುಹಾಕಿ ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ ,ನಂತರ ಅದಕ್ಕೆಶುಚಿ ಗೊಳಿಸಿದ ಬೆರಕೆ ಸೊಪ್ಪುಗಳನ್ನು ಸಣ್ಣಗೆ ಕಟ್ ಮಾಡಿ ಹಾಕಿ,ಖಾರಕ್ಕೆ ತಕ್ಕಷ್ಟು ಹಸಿಮೆಣಸಿನಕಾಯಿ ಮತ್ತು ಬೇಕಾದಷ್ಟು ನೀರನ್ನು ಹಾಕಿ ಸೊಪ್ಪನ್ನು ಬೇಯಿಸಿಕೊಳ್ಳಿ, ನಂತರ ನೀರನ್ನು ಬಸಿದುಕೊಳ್ಳಿ,ಬೆಂದ ಹಸಿಮೆಣಸನ್ನು ಎತ್ತಿಟ್ಟುಕೊಳ್ಳಿ.

ಸೊಪ್ಪು ಮತ್ತು ಕಾಳನ್ನು ಈರುಳ್ಳಿ ಹಾಕಿ ಅಥವಾ ನಿಮ್ಮ ಇಷ್ಟದಂತೆ ಪಲ್ಯ ಮಾಡಿಕೊಳ್ಳಿ.ಬಸಿದಿಟ್ಟುಕೊಂಡ ನೀರಿಗೆ, ಸ್ವಲ್ಪ ಕಾಯಿತುರಿ, ಎತ್ತಿಟ್ಟುಕೊಂಡ ಹಸಿಮೆಣಸಿನಕಾಯಿ ಅರ್ಧ ಚಮಚ ಜೀರಿಗೆ ಬೆಳ್ಳುಳ್ಳಿ ಹುಣಸೆಹಣ್ಣು ಮತ್ತು ನಾಲ್ಕೈದು ಗರಿ ಕೊತ್ತಂಬರಿ ಸೊಪ್ಪು ಹಾಕಿ ಸ್ವಲ್ಪ ಬೆಂದಕಾಳು ಮತ್ತು ಸೊಪ್ಪಿನ ಮಿಶ್ರಣವನ್ನು ಹಾಕಿ ರುಬ್ಬಿಕೊಳ್ಳಿ ಈ ಮಿಶ್ರಣವನ್ನು ಬಸಿದಿಟ್ಟುಕೊಂಡ ನೀರಿಗೆ ಬೆರೆಸಿ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಕುದಿಸಿ ಕೊಂಡು ಸಾಸಿವೆ ಕರಿಬೇವು ಬೆಳ್ಳುಳ್ಳಿಯ ಒಗ್ಗರಣೆಯನ್ನು ಕೊಡಿ ಇದು ಮುದ್ದೆ ಯೊಂದಿಗೆ ಅನ್ನದೊಂದಿಗೂ ತುಂಬಾ ರುಚಿಯಾಗಿರುತ್ತದೆ ಮಳೆಗಾಲದಲ್ಲಿ ಬೆಳ್ಳುಳ್ಳಿಯನ್ನು ಉಪಯೋಗಿಸುವುದರಿಂದ ಶರೀರವನ್ನು ಬೆಚ್ಚಗಿಡುತ್ತದೆ, ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮಾಡಿನೋಡಿ…. ಅವರೆಕಾಳು ಮತ್ತು ಬೆರಕೆ ಸೊಪ್ಪಿನ ಬಸ್ಸಾರು.

ಅಶ್ವಿನಿ ಲಕ್ಷ್ಮಿನಾರಾಯಣ, ಮೈಸೂರು
error: Content is protected !!