ನಮ್ಮ ಮನೆಯಲ್ಲಿ ಇಂದು ಮಲೆನಾಡಿನ ಮಳೆಗಾಲದ ವಿಶೇಷ ತಿಂಡಿ ಪತ್ರೋಡೆ..
ಮೊನಿಕ ಪ್ರಕಾಶ್ ಮೂಲೆಮಜಲು
ಯಾರ ಮನೆಯಲ್ಲಿ ಎಲ್ಲ ಈ ತಿಂಡಿ ಮಾಡಿದ್ರು?
ಪತ್ರೋಡೆ ಮಾಡುವ ವಿಧಾನ:
ಮರದ ಕೆಸದ ಎಲೆಯಿಂದ ಮಾಡುವ ಪತ್ರೊಡೆಗೆ ಮೊದಲು ಅಕ್ಕಿಯನ್ನು ನೆನೆಸಿಟ್ಟು, ಅದಕ್ಕೆ ಕೆಸದ ಸೊಪ್ಪನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿ, ತೆಂಗಿನಕಾಯಿ, ಅಚ್ಚಕಾರದ ಪುಡಿ, ಸಂಬಾರ, ಹುಣಸೆಹುಳಿ, ಈರುಳ್ಳಿ, ಚೆಕ್ಕೆ, ಲವಂಗ, ಜೀರಿಗೆ, ಬೆಳ್ಳುಳ್ಳಿ ಹಾಕಿ ರುಬ್ಬಬೇಕು.
ನಂತರ ತುಪ್ಪ ಅಥವಾ ಎಣ್ಣೆಯಲ್ಲಿ ಒಗ್ಗರಣೆ, ರುಬ್ಬಿರುವ ಮಸಾಲೆಯನ್ನು ಹಾಕಿ ಬೇಯಿಸಿಕೊಂಡ ಹಿಟ್ಟನ್ನು ಮರಕೆಸದ ಎಲೆಯಲ್ಲಿ ತೆಳುವಾಗಿ ಹರಡಿ ಸೊಪ್ಪನ್ನು ಸುತ್ತಿ ಸ್ವಲ್ಪ ಹೊತ್ತು ಹಬೆಯನ್ನು ಬೇಯಿಸಿದರೆ ಪತ್ರೊಡೆ ರೆಡಿ. ಅದನ್ನು ಚಿಕ್ಕದಾಗಿ ಕತ್ತರಿಸಿ ಸೇವಿಸುತ್ತಾರೆ.
ತುಂಬಾ ರುಚಿಕರವಾದ ಈ ತಿಂಡಿಯನ್ನು ಸೇವಿಸಿದರೆ, ಸಣ್ಣ ಪುಟ್ಟ ಕಾಯಿಲೆಗಳು ದೂರವಾಗುತ್ತದೆ, ಮತ್ತು ದೇಹದ ಉಷ್ಣತೆಯನ್ನು ಕಾಪಾಡುತ್ತದೆ ಎಂದು ಹೇಳುತ್ತಾರೆ.
ಮೊನಿಕ ಪ್ರಕಾಶ್ ಮೂಲೆಮಜಲು