ಸರ್ಕಾರಿ ಶಾಲೆಯಲ್ಲಿ ಅಡುಗೆ ಸಿಲಿಂಡರ್ ಕಳುವು

ಸೋಮವಾರಪೇಟೆಯ ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕು ಕೊಠಡಿಗಳ ಬೀಗ ಒಡೆದು ಅಕ್ಷರ ದಾಸೋಹಕ್ಕೆ ಬಳಸಲಾಗುತ್ತಿದ್ದ 2 ಅಡುಗೆ ಸಿಲಿಂಡರ್ ಕಳುವು ಮಾಡಿರುವ ಘಟನೆ ನಡೆದಿದೆ.

ಕಳೆದ 5 ದಿನಗಳಿಂದ ಶಾಲೆಗೆ ರಜೆ ಇರುವುದನ್ನು ಗಮನಿಸಿ ಸಮಯ ಸಾಧಿಸಿದ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು, ದಾಸೋಹಕ್ಕೆ ಬಳಸಲಾಗುತ್ತಿದ್ದ ಪರಿಕರ, ದಿನಸಿ ಸಾಮಗ್ರಿ ಸಂಗ್ರಹಿಸಿರುವ ಸ್ಟೋರ್ ರೂಂನಲ್ಲಿ ಖಾಲಿ ಇದ್ದ ಸಿಲಿಂಡರ್ ಬಿಟ್ಟು, ತುಂಬಿದ್ದ ಸಿಲಿಂಡರ್ ಹೊತ್ತೊಯ್ದಿದ್ದು, ಇತರೆ ಕೊಠಡಿಗಳಲ್ಲಿ ಶೋಧನೆ ಮಾಡಿದ್ದಾರೆ. ಏನು ಸಿಗದ ಹಿನ್ನಲೆ ಕಳ್ಳರು ತೆರಳಿದ್ದು, ಮುಖ್ಯೋಪಾಧ್ಯಾಯಿನಿ ತಂಗಮ್ಮ ಶಾಲೆಗೆ ಆಗಮಿಸಿದ ಸಂದರ್ಭ ಬೆಳಕಿಗೆ ಬಂದಿದೆ.

ಈ ಸಂಬಂಧ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಆರ್ ಸತೀಶ್ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಕಳ್ಳರ ಪತ್ತೆಗಾಗಿ ಪ್ರತ್ಯೇಕ ತಂಡವನ್ನು ರಚಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!