ಗ್ರಾಮದಲ್ಲಿ ‘ಹರ್ ಘರ್ ತಿರಂಗಾ’ಕ್ಕೆ ಚಾಲನೆ
ನಿಟ್ಟೂರು: ಪೋನಂಪೇಟೆ ತಾಲೂಕು ನಿಟ್ಟೂರು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಹರ್ ಘರ್ ತಿರಂಗಾ ಕಾರ್ಯಕ್ರಮಕ್ಕೆ ನಿಟ್ಟೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಡಿರಂಡ ಕವಿತಾ ಪ್ರಭು ಚಾಲನೆ ನೀಡಿ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಮನೆಗಳಲ್ಲೂ ಧ್ವಜಾರೋಹಣ ಮಾಡುಲು ಯೋಜನೆ ರುಪಿಸಿಕೊಂಡಿರುವುದಕ್ಕೆ ಪೂರಕ ಸ್ಪಂದನೆ ದೊರೆತಿರುವುದು ಸಂತಸ ತಂದಿದೆ.
ಸ್ವಾತಂತ್ರ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ರಾಷ್ಟರವು ಶಿಕ್ಷಣ, ವಿಜ್ಞಾನ ,ತಂತ್ರಜ್ಞಾನ ಭಾಯಕಾಶ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯ ಉತ್ತುಂಗಕ್ಕೆ ಎರುತಿದ್ದು ಈ ಸಂದರ್ಭದಲ್ಲಿ ಸಾಧಕರೆಲ್ಲರನ್ನು ಸಮ್ಮರಿಸಿ ಕೂಳ್ಳುವುದರ ಜೋತೆಗೆ ನಮ್ಮ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟ, ತ್ಯಾಗ, ಬಲಿದಾನಗಳನ್ನು ಕೂಡ ಸ್ಮರಿಸಿಕೊಂಡು ಮುಂದೆ ಹೆಜ್ಜೆ ಇಡೋಣ ವೆಂದು ಅಭಿಪ್ರಾಯ ವ್ಯಕ್ತಪಡಿಸಿದರು . ಗ್ರಾಮ ಪಂಚಾಯಿತಿ ಸದಸ್ಯರಾದ ಚಕ್ಕೇರ ಸೂರ್ಯ ಅಯ್ಯಪ್ಪ ಧ್ವಜಗಳನ್ನು ಇಂದು ನಾವು ಮನೆ ಮನೆಗೆಳಲ್ಲಿ ಹಾರಿಸಲು ತೊರಿಸಿದ ಉತ್ಸಾಹ ಅಭಿನಂದನಾರ್ಹ ಹಾಗೆ ದಿನಾಂಕ 15ನೇ ಅಗಸ್ಟ್ ರಂದು ಸೂರ್ಯಾಸ್ತದ ವೇಳೆಗೆ ದ್ವಜವನ್ನು ಇಳಿಸಿ ಜೋಪಾನ ಮಾಡುವ ಜವಾಬ್ದಾರಿ ಕೂಡ ನಮ್ಮದಾಗಿದೆಯೆಂದು ಹೇಳಿದರು, ಕೊಡಗು ದಿಶಾ ಸಮಿತಿ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ ಮಾತನಾಡಿ ರಾಷ್ಟ್ರ ಧ್ವಜದ ಮಹತ್ವವನ್ನು ತಿಳಿಸಿದರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನಮೋಹನ್ ಸ್ವಾಗತಿಸಿ ವಂದಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಅಳಮೇಂಗಡ ಪವಿತಾ ರಮೇಶ್, ಆಮ್ಮಣಿ , ಪ್ರಮುಖರಾದ ಕೊಟ್ಟಂಗಡ ಮಧು ,ಪಡಿಞರಂಡ ಪ್ರಭು ಕುಮಾರ್, ಕಳ್ಳೇಂಗಡ ಉತ್ತಯ್ಯ ,ತುಂಬುಕುತ್ತೀರ ರಾಮಪ್ಪ,ತಿರನೇಲಿಮಾಡ ಪೂಣಚ್ಚ, ದೀಪ್ತಿ, ಭರತ್, ಕವಿತಾ,ಶಿವು, ಹರೀಶ್ ವಿ.ಪಿ ಬಿ.ಕೆ.ರವಿ,ಹೊಟ್ಟೇಂಗಡ ಅಜಿತ್,ಮುಕ್ಕಾಟಿರ ರೊಷನ್, ಪುಟ್ಟಮಾಧ,ಮಲ್ಲೇಂಗಡ ಜೀವನ್,ಮೇಚಂಡ ವಿನು, ಶಿಕ್ಷಕರಾದ ನಿರಂಜನ್, ಮುಂತಾದರು ಸೇರಿದಂತೆ ವಾಲ್ಮೀಕಿ ಆಶ್ರಮ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು*