ಹುಸಿಗಳಿಂದ ಸಾಧಕನಂತೆ ಮೆರೆದ ‘ಪ್ರತಾಪ’ನ ನಿಜ ಸ್ವರೂಪ!
ಇದು ಕಲರ್ ಕಾಗೆ ಹಾರಿಸಿ ಪ್ರಸಿದ್ಧಿ ಪಡೆದವನ ಖತರ್ ನಾಕ್ ಸ್ಟೋರಿ!
ಕೆಲವು ಆಸಾಮಿಗಳಿರುತ್ತಾರೆ ನಮ್ಮ ನಡುವೆಯೇ. ಅವರು ತಮ್ಮನ್ನು ತಾವು ಮಹಾನ್ ಸಾಧಕರು ಮೇಧಾವಿಗಳು ಎಂದು ಹೇಳಿಕೊಂಡು ಏನೋ ಕಿತ್ತು ದಬ್ಬಾಕಿರುವವರ ಹಾಗೆ ಆಡುತ್ತಿರುತ್ತಾರೆ. ಅವರ ಆ ಪರಿ ಸಾಧನೆ ಮಾಡಿಬಿಟ್ಟಿದ್ದಾರಲ್ಲಾ? ಎಂದು ಸಮಾಜವೂ ನೋಡಿ ಸನ್ಮಾನಿಸಿರುತ್ತದೆ, ಕೊಂಡಾಡಿರುತ್ತದೆ. ಆದರೆ ಅವರ ನಿಜ ಸ್ವರೂಪ ಬೇರೆಯೇ ಇದೆ ಎಂಬುದು ಬಟಾಬಯಲಾಗಿ ಅವರು ಕೊಚ್ಚಿಕೊಂಡಿದ್ದ, ಎಲ್ಲಾ ವಿಚಾರಗಳೂ ಢೋಂಗಿ, ಬರೀ ಓಳು ಎಂದು ಕೆಲವೊಮ್ಮೆ ಗೊತ್ತಾಗಿ ಬಿಡುತ್ತದೆ. ಅಂತಹ ಒಬ್ಬ ಮೋಸಗಾರ, ವಂಚಕನೇ ಢ್ರೋನ್ ಪ್ರತಾಪ.
ಅಬ್ಬಬ್ಬಾ ಅವನು ನಿಜಕ್ಕೂ ಸತ್ಯಗಳ ತಲೆಗೆ ಹೊಡೆದಂತೆ ಸುಳ್ಳುಗಳನ್ನು ಹೇಳಿ ಗಳಿಸಿದ್ದ ಪ್ರತಿಷ್ಠೆ, ಚರಿಷ್ಮಾ ಬಹುಶಃ ನೈಜ್ಯ ಸಾಧಕರಿಗೂ ಗಳಿಸಲು ಸಾಧ್ಯವಿಲ್ಲ. ಹೌದು ಅಷ್ಟರ ಮಟ್ಟಿಗೆ ಸುಳ್ಳುಗಳನ್ನು ಪೋಣಿಸಿ, ತಾನೊಬ್ಬ ಸಮಾನ್ಯ ಸಾಧಕ ಎಂಬಂತೆ ಬಿಂಬಿಸಿಕೊಳ್ಳೋದರಲ್ಲಿ ನಿಸ್ಸೀಮ ಇವನು.
ಹೌದು ಡ್ರೋನ್ ಪ್ರತಾಪ್ ಎಂದೇ ರಾಜ್ಯಾದ್ಯಂತ ಪ್ರಸಿದ್ಧವಾಗಿ ಇವನು, ತನ್ನ ತಾಯಿಯ ತಾಳಿಯನ್ನೇ ಅಡವಿಟ್ಟು, ಡ್ರೋನ್ ತಯಾರಿಯಲ್ಲಿ ತೊಡಗಿದ್ದ ಯುವ ಸಂಶೋಧಕ ಎಂದು ಎಲ್ಲರೂ ನಂಬಿದ್ದರು. ಈವರೆಗೆ 600 ಡ್ರೋನ್ ಗಳನ್ನು ತಯಾರಿಸಿದ್ದಾನೆ. ಅದೂ ಕೂಡ ಮಿಕ್ಸಿಯಲ್ಲಿನ ಮೋಟರ್ ಬಳಸಿ, ಡ್ರೋನ್ ತಯಾಸಿದ. ಇವನ ಸಾಧನೆಯನ್ನು ಗುರುತಿಸಿ, 87 ದೇಶಗಳು ಇವನಿಗೆ ಕೆಲಸದ ಆಫರ್ ನೀಡಿದ್ದಾರೆ. ಪ್ರಧಾನಿಗಳೇ ಡಿ.ಆರ್.ಡಿ.ಪಿಯಲ್ಲಿ ಕೆಲಸದ ಆಫರ್ ನೀಡಿದ್ದಾರೆ. 2017 ಜಪಾನ್ ಅಲ್ಲಿ ಅಲ್ಭಟ್೯ ಐನ್ಸ್ಟಿನ್ ಗೋಲ್ಡ್ ಮೆಡಲ್…ಅಂತರಾಷ್ಟ್ರೀಯ ಡ್ರೋನ್ ಎಕ್ಸ್ಪೋದಲ್ಲಿ ಗೋಲ್ಡ್ ಮೆಡಲ್ ಗೆದ್ದಿದ್ದಾನೆ. CeBitನಲ್ಲಿ ಮೊದಲ ಬಹುಮಾನ ಹಾಗು 2017ರ ಜಪಾನ್ ಅಲ್ಲಿ ನಡೆದ ಅಂತರಾಷ್ಟ್ರೀಯ ರೊಬೋಟಿಕ್ ಎಕ್ಸಿಬಿಷನ್ ಅಲ್ಲಿ ಚಿನ್ನದ ಪದಕ. ಹೀಗೆ ಹಲವಾರು ಪ್ರಶಸ್ತಿ ಈ ಢೋಂಗಿ ಡ್ರೋನ್ ಪ್ರತಾಪನಿಗೆ ಸಿಕ್ಕಿದೆ ಎಂಬುದೆಲ್ಲಾ ಈಗ ಶುದ್ಧ ಸುಳ್ಳು ಎಂಬುದು ಈಗ ಬಟಾ ಬಯಲಾಗಿದೆ.
ನಾವೆಲ್ಲರೂ ಅಹಾ ಚಿಕ್ಕ ಹುಡುಗ ಸಣ್ಣ ವಯಸ್ಸಿಗೆ ದೊಡ್ಡ ಸಾಧನೆ ಮಾಡಿ ಬಿಟ್ಟಿದ್ದಾನೆ ಎಂದು ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದೆವು. ಅವೆಲ್ಲವೂ ಅವನೇ ಸೃಷ್ಟಿಸಿದ ಹಸಿ ಹಸಿ ಹುಸಿ ಎಂಬುದನ್ನು OpIndia ಎಂಬ ವಾಹಿನಿಯು ಸಂಪೂರ್ಣವಾಗಿ ಬಯಲಿಗೆ ಎಳೆದು ತಂದಿದೆ.
ಅವನು ಹೇಳಿದ ಯಾವ ಸಾಧನೆಗಳಲ್ಲೂ ನಿಜಾಂಶವಿಲ್ಲ. ತನ್ನ ಕಲರ್ ಕಲರ್ ಕಾಗೆಗಳನ್ನು ಹಾರಿಸುವ talent ಬಳಸಿಕೊಂಡು, ಪ್ರತಿಭಾತನ ಹಾಗೆ ಪೋಸ್ ಕೊಡುತ್ತಿದ್ದ ಈ ಸುಳ್ಳುಬುರುಕ ಪ್ರತಾಪ್ ಎಂಬುದು ತಿಳಿದುಬಂದಿದೆ. ಮುಖ್ಯಮಂತ್ರಿಗಳಿಂದ, ಸಂಘ ಸಂಸ್ಥೆಗಳಿಂದ, ಮಠಾಮಾನ್ಯಗಳ ಸ್ವಾಮೀಜಿಗಳಿಂದ ಪ್ರಶಸ್ತಿ ಸನ್ಮಾನ ಮಾಡಿಸಿಕೊಂಡ ಇವನಿಗೆ ಮಾನ ಮರಿಯಾದೆ ಅನ್ನೋದು ಮೂರು ಕಾಸೂ ಇಲ್ಲ ಎಂಬುದು ಖಾತ್ರಿಯಾದಂತಾಗಿದೆ. ಹೀಗೆ ಬಂಡಲ್,ಬಡಾಯ್ ಕೊಚ್ಚಿಕೊಳ್ಳುತ್ತಾ ಮನೆಮಾತಾದ ಇವನ Fraud ಬುದ್ಧಗೆ ಕ್ಯಾಕರಿಸಿ ಮುಖಕ್ಕೆ ಉಗಿಯಬೇಕು ಅನ್ನಿಸೋದಂತೂ ಸುಳ್ಳಲ್ಲ. ಹಾಗೆಂದು ಇವನು ಯಾವ ಸಾಧನೆ ಮಾಡಿಲ್ವಾ? ಅಂತ ಅಂದುಕೊಳ್ಳಬೇಡಿ. ಇಡೀ ರಾಜ್ಯವನ್ನೇ ತನ್ನ ಓಳುಗಳಿಂದ ಮರಳು ಮಾಡಿದ ಇವನು ‘Masters in Flying of Colourful Crows’ ಅರ್ಥ ಆಗಲಿಲ್ಲವಾ ಅದೇ ಯಾಮಾರಿಸೋ ವಿಷಯದಲ್ಲಿ ಮಾಸ್ಟರ್ ಅಂತ ಅಷ್ಟೇ ಕಣ್ರೇ!
ಇಂತಹ Bogus ಖಾಲಿ ಪಲಾವ್ ಗಳು ಮಾಡಿದ ವಂಚನೆಗೆ ಮತ್ತೆ ತಲೆ ಎತ್ತಿ ನಡೆಯಲಾಗದಂತಹ ಶಿಕ್ಷೆ ಸಿಗುವಂತಾಗಲಿ. ಇಂತವರಿಂದ ಸಮಾಜದ ನೈಜ್ಯ ಸಾಧಕರಿಗೇ ಅವಮಾನ. –ಸಂಪಾದಕರು