ಹುಲಿ, ಜಿಂಕೆ ಹತ್ಯೆ ಮಾಡಿದ ದುಷ್ಕಮಿ೯ಗಳನ್ನು ಪತ್ತೆ ಹಚ್ಚಿದ ರಾಣ!

ಸುದ್ದಿ ಸಂತೆ Exclusive News

Exclusive photo by manju pujari


ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ಕಲ್ಲಹಳ್ಳದಲ್ಲಿ ಹುಲಿಯೊಂದನ್ನು ಕೊಂದ ಪ್ರಕರಣ ಬೆಳಕಿಗೆ ಬಂದಿದೆ. ಹುಲಿ ಕೊಂದು ಉಗುರಿಗಾಗಿ ಅದರ ಕಾಲುಗಳನ್ನೇ ತುಂಡರಿಸಿದ್ದರು ಹಂತಕರು.

ಹುಲಿ ಹಂತಕರ ಪತ್ತೆಗಾಗಿ ಶೋಧ ಕಾಯ೯ಕ್ಕೆ ಬಂಡೀಪುರದಿಂದ ಶ್ವಾನದಳದ ರಾಣ ಕರೆ ತಂದಿದ್ದರು ಅರಣ್ಯ ಇಲಾಖೆ ಅಧಿಕಾರಿಗಳು.

ರಾಣಾ ಶ್ವಾನ ಸಾಕಿದ ಮಾಲಿಕನೊಂದಿಗೆ

ಸ್ಳಳಕ್ಕೆ ಬಂದ ರಾಣನಿಂದ ಕೆಲವೇ ಹೊತ್ತಿನಲ್ಲಿ ದುಷ್ಕಮಿ೯ಗಳ ಸುಳಿವು ಪತ್ತೆ.

ಮಲಯಾಳಿ ಸಂತೋಷ್ ಮನೆಗೆ ನುಗ್ಗಿದ ರಾಣನಿಂದ ಅಲ್ಲಿದ್ದ ಒಂದೂವರೆ ಕೆಜಿ ಜಿಂಕೆ ಮಾಂಸವೂ ಪತ್ತೆ.ಪೊಲೀಸರಿಂದ ಸಂತೋಷ್ ಬಂಧಿಸಲಾಗಿದೆ.

ನಂತರ ಹೊಟ್ಟೆಂಗಡ ರಂಜು, ಕಾಂಡೇರ ಶಶಿ, ಕಾಂಡೇರ ಶರಣು ಮನೆ ಬಳಿಯೂ ಸುಳಿದ ರಾಣಾನಿಂದ ಮನೆಯಲ್ಲಿ ದುಷ್ಕಮಿ೯ಗಳು ಬಚ್ಚಿಟ್ಟಿದ್ದ ಹುಲಿಯ ಪಂಜ, ಕಾಡತೂಸುಗಳ ಪತ್ತೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸ್ – ಅರಣ್ಯ ಇಲಾಖೆಯಿಂದ ಶಿಫ್ರ ಕಾಯಾ೯ಚರಣೆ ನಡೆಯಿತು.

ನಡೆದ ಶಿಫ್ರ ಕಾರ್ಯಾಚೆರಣೆ ಚಿತ್ರ

ರಾಣಾ ಜಾಣ್ಮೆಗೆ ಬಾಳೆಲೆ ಗ್ರಾಮಸ್ಥರ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಬಾಳೆಲೆ ಗ್ರಾಮಕ್ಕೆ ಕಪ್ಚುಚುಕ್ಕೆಯಾದ ಪ್ರಕರಣದಲ್ಲಿ ಪಾಲ್ಗೊಂಡ ಮೂವರು ಆರೋಪಿಗಳನ್ನು ಬಂಧಿಸಿ ಶಿಕ್ಷಿಸುವಂತೆ ಜಿ.ಪಂ. ಮಾಜಿ ಸದಸ್ಯ ಅರಮಣಮಾಡ ರಂಜನ್ ಚಂಗಪ್ಪ ಒತ್ತಾಯಿಸಿದ್ದಾರೆ.

ವನ್ಯಜೀವಿ ಮತ್ತು ಅರಣ್ಯ ವಿಭಾಗದ ಹಲವು ಉನ್ನತಾಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

error: Content is protected !!
satta king chart